Diwali 2022: ದೀಪಾವಳಿಯ ದಿನ ಚಿನ್ನದಂತೆ ಅದೃಷ್ಟ ಹೊಳೆಯಬೇಕಾದರೆ, ಮನೆಗೆ ಈ ಲಕ್ಕಿ ಪ್ಲಾಂಟ್ ತನ್ನಿ

Diwali 2022 Plnat: ತಾಯಿ ಲಕ್ಷ್ಮಿಯ ಆಶೀರ್ವಾದ ಪಡೆಯಲು ದೀಪಾವಳಿಯ ದಿನವು ತುಂಬಾ ವಿಶೇಷವಾಗಿದೆ. ಈ ದಿನದಂದು ಕೆಲವು ಅದೃಷ್ಟದ ಗಿಡಗಳನ್ನು ಮನೆಗೆ ತಂದರೆ ಜೀವನದಲ್ಲಿ ಯಾವುದೇ ಸಂಕಷ್ಟಗಳು ಎದುರಾಗುವುದಿಲ್ಲ ಎನ್ನಲಾಗುತ್ತದೆ. 
 

Diwali 2022 Plnat: ತಾಯಿ ಲಕ್ಷ್ಮಿಯ ಆಶೀರ್ವಾದ ಪಡೆಯಲು ದೀಪಾವಳಿಯ ದಿನವು ತುಂಬಾ ವಿಶೇಷವಾಗಿದೆ. ಈ ದಿನದಂದು ಕೆಲವು ಅದೃಷ್ಟದ ಗಿಡಗಳನ್ನು ಮನೆಗೆ ತಂದರೆ ಜೀವನದಲ್ಲಿ ಯಾವುದೇ ಸಂಕಷ್ಟಗಳು ಎದುರಾಗುವುದಿಲ್ಲ ಎನ್ನಲಾಗುತ್ತದೆ. ಇದರೊಂದಿಗೆ, ಹಣಕಾಸಿನ ಸಮಸ್ಯೆಗಳಿಂದಲೂ ಕೂಡ ವ್ಯಕ್ತಿಗೆ ಮುಕ್ತಿ ಸಿಗುತ್ತದೆ ಎನ್ನಲಾಗುತ್ತದೆ. ಆ ಸಸ್ಯಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-Risky Outfit ಧರಿಸಿ ಪಡ್ಡೆ ಹೈಕ್ಳ ನಿದ್ದೆಗೆ ಬ್ಲೆಡ್ ಹಾಕುವ ಈ ಬಾಲಿವುಡ್ ಬೆಡಗಿಯನ್ನು ನೀವೂ ನೋಡಿ

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

1. ಗೋಕರ್ಣ ಅಥವಾ ಶಂಖಪುಷ್ಪಿ ಗಿಡ - ವಾಸ್ತು ಶಾಸ್ತ್ರದ ಪ್ರಕಾರ, ಅಪರಾಜಿತ ಅಥವಾ ಗೋಕರ್ಣ ಅಥವಾ ಶಂಖಪುಷ್ಪಿ ಸಸ್ಯವನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಇದನ್ನು ಮನೆಯಲ್ಲಿ ಹಚ್ಚುವುದರಿಂದ ವಿಷ್ಣು ಮತ್ತು ತಾಯಿ ಲಕ್ಷ್ಮಿ ಇಬ್ಬರ ಆಶೀರ್ವಾದ ಸಿಗುತ್ತದೆ. ವಾಸ್ತು ಪ್ರಕಾರ ದೀಪಾವಳಿಯ ದಿನ ಇದನ್ನು ಮನೆಗೆ ತಂದರೆ ಹಣದ ಕೊರತೆ ಇರುವುದಿಲ್ಲ. ಇದರೊಂದಿಗೆ ವ್ಯಕ್ತಿಯ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ.  

2 /6

ಮನಿ ಪ್ಲಾಂಟ್ - ವಾಸ್ತು ಪ್ರಕಾರ ಮನಿ ಪ್ಲಾಂಟ್ ಪ್ಲಾಂಟ್ ಹೆಸರಿಗೆ ತಕ್ಕಂತೆ ಕೆಲಸ ಮಾಡುತ್ತದೆ. ಇದನ್ನು ಸಂತೋಷ, ಸಮೃದ್ಧಿ ಮತ್ತು ಸಂಪತ್ತಿನ ಸಸ್ಯ ಎಂದು ಹೇಳಲಾಗುತ್ತದೆ. ದೀಪಾವಳಿಯ ದಿನ ಮನಿ ಪ್ಲಾಂಟ್ ಖರೀದಿಸಿ ಮನೆಯಲ್ಲಿ ಇಡುವುದರಿಂದ ಪರಿಸರ ಪರಿಶುದ್ಧವಾಗುತ್ತದೆ. ಮತ್ತು ಧನಾಗಮನದ ಮಾರ್ಗಗಳು ತೆರೆದುಕೊಳ್ಳುತ್ತವೆ.  

3 /6

ತುಳಸಿ ಗಿಡ - ಕಾರ್ತಿಕ ಮಾಸದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಮಹತ್ವ ಕೊಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ದೀಪಾವಳಿಯ ದಿನ ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟರೆ ತಾಯಿ ಲಕ್ಷ್ಮಿಯ ಕೃಪೆ ಜೀವನದುದ್ದಕ್ಕೂ ಇರುತ್ತದೆ ಎನ್ನಲಾಗುತ್ತದೆ. ತುಳಸಿ ಗಿಡದಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ ಎಂಬುದು ಧಾರ್ಮಿಕ ನಂಬಿಕೆ.  

4 /6

ರಬ್ಬರ್ ಗಿಡ - ರಬ್ಬರ್ ಗಿಡವನ್ನು ಮನೆಯಲ್ಲಿ ನೆಟ್ಟಾಗ ಅದು ಧನಾತ್ಮಕ ಶಕ್ತಿಯನ್ನು ತರುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲ, ನಿರ್ದಿಷ್ಟ ದಿನದಂದು ನೆಟ್ಟರೆ ಅದು ತುಂಬಾ ಮಂಗಳಕರವೆಂದು ಸಾಬೀತಾಗುತ್ತದೆ ಎನಲಾಗಿದೆ. ದೀಪಾವಳಿಯ ದಿನದಂದು ರಬ್ಬರ್ ಗಿಡವನ್ನು ನೆಡುವುದರಿಂದ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ, ಇದು ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.  

5 /6

ಜೆಡ್ ಪ್ಲಾಂಟ್ ಅಥವಾ ಲಕ್ಕಿ ಪ್ಲಾಂಟ್ ಅಥವಾ ಮನಿ ಟ್ರೀ - ವಾಸ್ತು ಪ್ರಕಾರ, ಜೆಡ್  ಸಸ್ಯವನ್ನು ಸಂತೋಷ, ಸಮೃದ್ಧಿ ಮತ್ತು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದನ್ನು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಸುಲಭವಾಗಿ ನೆಡಬಹುದು. ನೀವು ವ್ಯಾಪಾರವನ್ನು ಹೆಚ್ಚಿಸಲು ಬಯಸಿದರೆ, ದೀಪಾವಳಿಯ ದಿನದಂದು ಅದನ್ನು ಖರೀದಿಸಿ ಮತ್ತು ಪೂರ್ವ ದಿಕ್ಕಿನಲ್ಲಿ ಇರಿಸಿ. ಶೀಘ್ರದಲ್ಲೇ ನಿಮ್ಮ ವ್ಯವಹಾರವು ಗಗನಮುಖಿಯಾಗುತ್ತದೆ.  

6 /6

ಫಾರ್ಚ್ಯೂನ್ ಪ್ಲಾಂಟ್ ಅಥವಾ ಅದೃಷ್ಟದ ಸಸ್ಯ - ಅದೃಷ್ಟದ ಸಸ್ಯವನ್ನು ಭಾಗ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ದೀಪಾವಳಿಯ ದಿನದಂದು ಈ ಗಿಡವನ್ನು ಮನೆಗೆ ತಂದರೆ ಸಂತೋಷ ಮತ್ತು ಸಮೃದ್ಧಿ ಜೊತೆಗೆ ಅದೃಷ್ಟವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ಕಾರ್ನ್ ಪ್ಲಾಂಟ್ ಎಂದೂ ಕರೆಯುತ್ತಾರೆ. ಇದರಿಂದ ವ್ಯಕ್ತಿ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸನ್ನು ಪಡೆಯುತ್ತಾನೆ. ಇದೆ ವೇಳೆ, ನೆನೆಗುದಿಗೆ ಬಿದ್ದ ಕೆಲಸವೂ ಸರಾಗವಾಗಿ ನಡೆಯಲು ಪ್ರಾರಂಭಿಸುತ್ತದೆ. ಆದ್ದರಿಂದ, ನೀವು ದೀಪಾವಳಿಯಂದು ಇದನ್ನು ತಂದು ನಿಮ್ಮ ಅದೃಷ್ಟವನ್ನು ಬೆಳಗಿಸಬಹುದು.