Dinesh Karthik wife Deepika Pallikal: ಟೀಂ ಇಂಡಿಯಾದ ದಿಗ್ಗಜರು ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗಲೆಲ್ಲ ಸಖತ್ ಸುದ್ದಿಯಾಗುತ್ತದೆ. ನಾವಿಂದು ಟೀಂ ಇಂಡಿಯಾದ ಟಿ20 ಫಿನಿಶರ್ ದಿನೇಶ್ ಕಾರ್ತಿಕ್ ಬಗ್ಗೆ ಮಾತನಾಡುತ್ತಿದ್ದೇವೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಭಾರತ ತಂಡದ ವಿಕೆಟ್ ಕೀಪರ್ ಕಂ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಟಿ20 ಕ್ರಿಕೆಟ್’ನಲ್ಲಿ ಬೆಸ್ಟ್ ಫಿನಿಶರ್ ಎಂದು ಕರೆಯಲ್ಪಟ್ಟರೂ ಕೂಡ, ಕೆಲವೊಂದು ಬಾರಿ ಏರಿಳಿತಗಳನ್ನು ಕಂಡಿದ್ದರು, ಅಂತೆಯೇ ಅವರ ಜೀವನದಲ್ಲೂ ಬಹಳಷ್ಟು ನೋವಿನ ದಿನಗಳು ಎದುರಾಗಿದ್ದವು.
ದಿನೇಶ್ ಕಾರ್ತಿಕ್ ತನ್ನ ಮೊದಲ ಹೆಂಡತಿಯಿಂದ ಮೋಸ ಹೋದ ಬಳಿಕ, ಅವರ ಬದುಕಲ್ಲಿ ಬೆಳಕಂತೆ ಭಾರತದ ಸ್ಟಾರ್ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್.
ದಿನೇಶ್ ಕಾರ್ತಿಕ್ 2012ರಲ್ಲಿ ಮೊದಲ ಪತ್ನಿ ನಿಕಿತಾಗೆ ವಿಚ್ಛೇದನ ನೀಡಿದ್ದರು. 2013 ರಲ್ಲಿ, ದೀಪಿಕಾ ಪಳ್ಳಿಕಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು, ಎರಡು ವರ್ಷಗಳ ನಂತರ ಮದುವೆಯಾಗಲು ನಿರ್ಧರಿಸಿದರು. 2015 ರಲ್ಲಿ ಮೊದಲು ಕ್ರಿಶ್ಚಿಯನ್ ಮತ್ತು ನಂತರ ತೆಲುಗು ಸಂಪ್ರದಾಯದಂತೆ ವಿವಾಹವಾದರು.
ದಿನೇಶ್ ಕಾರ್ತಿಕ್ ತನ್ನ ಎರಡನೇ ಪತ್ನಿಯನ್ನು 18 ಆಗಸ್ಟ್ 2015 ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಮೊದಲ ಬಾರಿಗೆ ವಿವಾಹವಾದರೆ, ಆಗಸ್ಟ್ 20 ರಂದು ಅವರು ತೆಲುಗು ನಾಯ್ಡು ಸಂಪ್ರದಾಯದ ಪ್ರಕಾರ ಮದುವೆಯ ವಿಧಿವಿಧಾನಗಳನ್ನು ಪೂರ್ಣಗೊಳಿಸಿದರು.
ದೀಪಿಕಾ ಪಳ್ಳಿಕಲ್ ಭಾರತೀಯ ಮಹಿಳಾ ಸ್ಕ್ವಾಷ್ ಆಟಗಾರ್ತಿ. ಪ್ರಸ್ತುತ ವಿಶ್ವ ಶ್ರೇಯಾಂಕದಲ್ಲಿ 10 ನೇ ಸ್ಥಾನದಲ್ಲಿದ್ದಾರೆ. WSA ಶ್ರೇಯಾಂಕದಲ್ಲಿ ಟಾಪ್ 10 ತಲುಪಿದ ಮೊದಲ ಭಾರತೀಯ ಮಹಿಳೆ ದೀಪಿಕಾ. 2012 ರ ಸ್ಕ್ವಾಷ್ ಟೂರ್ನಮೆಂಟ್ ಆಫ್ ಚಾಂಪಿಯನ್ಸ್’ನಲ್ಲಿ ರನ್ನರ್ ಅಪ್ ಆಗಿದ್ದ ದೀಪಿಕಾ, ಮಹಿಳೆಯರ ಆಸ್ಟ್ರೇಲಿಯನ್ ಓಪನ್ ಸ್ಕ್ವಾಷ್-2012 ರ ಸೆಮಿಫೈನಲ್ ತಲುಪುವಲ್ಲಿ ಯಶಸ್ವಿಯಾಗಿದ್ದರು.
ಫೆಬ್ರವರಿ 2013 ರಲ್ಲಿ ಮೀಡೋವುಡ್ ಫಾರ್ಮಸಿ ಓಪನ್ ಗೆಲ್ಲುವ ಮೂಲಕ ತಮ್ಮ ಆರನೇ WSA ಪ್ರಶಸ್ತಿಯನ್ನು ಗೆದ್ದರು. ಅಕ್ಟೋಬರ್ 2013 ರಲ್ಲಿ, ಮಾಜಿ ವಿಶ್ವದ ನಂಬರ್ ಒನ್ ಆಟಗಾರ್ತಿ ಆಸ್ಟ್ರೇಲಿಯಾದ ರಾಚೆಲ್ ಗ್ರಿನ್ಹ್ಯಾಮ್ ಅವರನ್ನು ಸೋಲಿಸುವ ಮೂಲಕ ಮಕಾವು ಓಪನ್ ಪ್ರಶಸ್ತಿಯನ್ನು ಕೂಡ ದೀಪಿಕಾ ಗೆದ್ದಿದ್ದರು. ಇದು ದೀಪಿಕಾ ವೃತ್ತಿಜೀವನದ ಏಳನೇ ಮಹಿಳಾ ಸ್ಕ್ವಾಷ್ ಅಸೋಸಿಯೇಷನ್ (WSA) ಪ್ರಶಸ್ತಿಯಾಗಿದೆ.
ಇನ್ನು 2014ರಲ್ಲಿ ಗ್ಲಾಸ್ಗೋದಲ್ಲಿ ನಡೆದ 20 ನೇ ಕಾಮನ್’ವೆಲ್ತ್ ಕ್ರೀಡಾಕೂಟದಲ್ಲಿ, ದೀಪಿಕಾ ಪಳ್ಳಿಕಲ್ ಮತ್ತು ಜೋಶ್ನಾ ಚಿನಪ್ಪ ಜೋಡಿಯು ಸ್ಕ್ವಾಷ್’ನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು. ಸ್ಕ್ವಾಷ್’ನಲ್ಲಿ ಇಂಗ್ಲೆಂಡ್’ನ ಪ್ರಾಬಲ್ಯವನ್ನು ಮುರಿದ ಭಾರತದ ಜೋಡಿಯು ಫೈನಲ್’ನಲ್ಲಿ ಜೆನ್ನಿ ಡನ್’ಕಾಲ್ಫ್ ಮತ್ತು ಲಾಡ್ರಾ ಮಸಾರೊ ಜೋಡಿಯನ್ನು ಸತತವಾಗಿ 11-6, 11-8 ರಿಂದ ಸೋಲಿಸುವ ಮೂಲಕ ಯಶಸ್ಸನ್ನು ಸಾಧಿಸಿತು. ಈ ವಿಜಯಕ್ಕೂ ಮುನ್ನ ಸ್ಕ್ವಾಷ್’ನಲ್ಲಿ ಭಾರತಕ್ಕೆ ಪದಕವೇ ಬಂದಿರಲಿಲ್ಲ. ಇದೇ ಕಾರಣಕ್ಕೆ ಈ ಗೆಲುವು ಐತಿಹಾಸಿಕ ಪ್ರಾಮುಖ್ಯತೆಯನ್ನು ಪಡೆದಿದೆ.