ದಿನೇಶ್ ಕಾರ್ತಿಕ್ ತಮ್ಮ ಬಾಲ್ಯದ ಗೆಳತಿ ನಿಕಿತಾ ವಂಜಾರಾ ಅವರನ್ನು 2007 ರಲ್ಲಿ ವಿವಾಹವಾದರು.
ಬೆಂಗಳೂರು : ದಿನೇಶ್ ಕಾರ್ತಿಕ್ ಯಾವಾಗಲೂ ವೈಯಕ್ತಿಕ ಜೀವನದ ಬಗ್ಗೆ ಚರ್ಚೆಯಲ್ಲಿರುತ್ತಾರೆ. ಅವರು 2004 ರಲ್ಲಿ ಟೀಮ್ ಇಂಡಿಯಾಗೆ ಪಾದಾರ್ಪಣೆ ಮಾಡಿದರು. ಆದರೆ ಟೀಮ್ ಇಂಡಿಯಾದಲ್ಲಿ ಶಾಶ್ವತ ಸ್ಥಾನವನ್ನು ಪಡೆಯುವುದು ಅವರಿಗೆ ಸಾಧ್ಯವಾಗಲಿಲ್ಲ. ಇದಾದ ಬಳಿಕ ಪತ್ನಿ ನಿಕಿತಾ ವಂಝಾರಾ ಅವರಿಗೆ ದ್ರೋಹ ಬಗೆದಿದ್ದರು. ಇದೀಗ ದಿನೇಶ್ ಕಾರ್ತಿಕ್ ಬಿರುಸಿನ ಆಟ ಪ್ರದರ್ಶಿಸಿ ಟೀಂ ಇಂಡಿಯಾಕ್ಕೆ ಮರಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ದಿನೇಶ್ ಕಾರ್ತಿಕ್ ತಮ್ಮ ಬಾಲ್ಯದ ಗೆಳತಿ ನಿಕಿತಾ ವಂಜಾರಾ ಅವರನ್ನು 2007 ರಲ್ಲಿ ವಿವಾಹವಾದರು. ಆಗ ದಿನೇಶ್ ಕಾರ್ತಿಕ್ ವಯಸ್ಸುಕೇವಲ 21 ವರ್ಷ. ನಿಕಿತಾ ಮತ್ತು ದಿನೇಶ್ ಎರಡೂ ಮನೆಯವರು ಮಕ್ಕಳ ಮದುವೆಗೆ ಒಪ್ಪಿಗೆ ನೀಡಿದ್ದರು.
2012 ರಲ್ಲಿ, ಅಂದರೆ ಮದುವೆಯಾಗಿ ಐದು ವರ್ಷಗಳ ನಂತರ ನಿಕಿತಾ ವಂಜಾರಾ ದಿನೇಶ್ ಕಾರ್ತಿಕ್ ಅವರ ಸ್ನೇಹಿತ ಮುರಳಿ ವಿಜಯ್ ಅವರನ್ನು ವಿವಾಹವಾದರು. ಇದರಿಂದಾಗಿ ದಿನೇಶ್ ಕಾರ್ತಿಕ್ ಮನಸ್ಸಿಗೆ ತೀವ್ರ ನೋವಾಗಿತ್ತು.
ದಿನೇಶ್ ಕಾರ್ತಿಕ್ ಜಿಮ್ ಸಮಯದಲ್ಲಿ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರನ್ನು ಭೇಟಿಯಾದರು. ಇಬ್ಬರ ನಡುವೆ ಆತ್ಮೀಯತೆ ಬೆಳೆದು 2015ರಲ್ಲಿ ವಿವಾಹ ಜೀವನಕ್ಕೆ ಮತ್ತೆ ಕಾಲಿಟ್ಟರು. ಇಬ್ಬರೂ ಹಿಂದೂ ಸಂಪ್ರದಾಯ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ವಿವಾಹವಾದರು.
ದೀಪಿಕಾ ಪಳ್ಳಿಕಲ್ ದಿನೇಶ್ ಕಾರ್ತಿಕ್ ಅವರ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿದರು. ದಿನೇಶ್ ಕಾರ್ತಿಕ್ ಮತ್ತು ದೀಪಿಕಾ ಪಳ್ಳಿಕಲ್ ಕಳೆದ ವರ್ಷವಷ್ಟೇ ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ. ಈಗ ದಿನೇಶ್ ಕಾರ್ತಿಕ್ ತಮ್ಮ ಕೌಟುಂಬಿಕ ಜೀವನದಲ್ಲಿ ಸಂತೋಷವಾಗಿರುವುದು ಮಾತ್ರವಲ್ಲ, ಕ್ರಿಕೆಟ್‌ನಲ್ಲೂ ಬಹಳ ಎತ್ತರಕ್ಕೆ ಬೆಳೆದಿದ್ದಾರೆ.
ಐಪಿಎಲ್ 2022ರಲ್ಲಿ ದಿನೇಶ್ ಕಾರ್ತಿಕ್ ಅದ್ಭುತ ಆಟ ಪ್ರದರ್ಶಿಸಿದ್ದಾರೆ. ಅವರು RCB ತಂಡದ ದೊಡ್ಡ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.