Curd for Diabetes : ಮಧುಮೇಹ ಇಂದು ಜನರ ಜೀವವನ್ನು ಹಿಂಡುವ ಕಾಯಿಲೆಯಾಗಿದೆ. ಅದರಿಂದ ಸಂಪೂರ್ಣ ಗುಣಮುಖರಾಗದಿದ್ದರೂ ಸಹ, ಕೆಲವೊಂದಿಷ್ಟು ಆಹಾರ ಪದಾರ್ಥಗಳನ್ನು ತಿನ್ನುವ ಮೂಲಕ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ಮಧುಮೇಹವು ದೀರ್ಘಕಾಲದ ಕಾಯಿಲೆಯಾಗಿದ್ದು, ಸಮಯೋಚಿತ ಚಿಕಿತ್ಸೆಯ ಅಗತ್ಯವಿರುತ್ತದೆ. ಮಧುಮೇಹವನ್ನು ಎಂದಿಗೂ ಗುಣಪಡಿಸಲು ಸಾಧ್ಯವಿಲ್ಲ ಆದರೆ ಅದನ್ನು ನಿಯಂತ್ರಿಸಬಹುದು. ಮಧುಮೇಹಕ್ಕೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಔಷಧಿಗಳ ಅಗತ್ಯವಿರುತ್ತದೆ. ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು.
ಮೊಸರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಬೆಳಿಗ್ಗೆ ಮೊಸರಿನ ಜೊತೆ ಈ ಕೆಳಗೆ ನೀಡಿರುವ ಪದಾರ್ಥಗಳನ್ನು ಸೇವಿಸಿದರೆ ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಬಹುದು. ಬನ್ನಿ ಅವುಗಳು ಯಾವುವು ಅಂತ ವಿವರವಾಗಿ ತಿಳಿದುಕೊಳ್ಳೋಣ..
ಮೊಸರು ಮತ್ತು ಕರಿಬೇವು : ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿದ್ದರೆ ಒಂದು ಬಟ್ಟಲು ಬೇಯಿಸಿದ ಕಡಲೆ ಜೊತೆ ಮೊಸರು ಸೇರಿಸಿ ಮಿಶ್ರಣಮಾಗಿ ಬೆಳಿಗ್ಗೆ ಉಪಾಹಾರಕ್ಕೆ ಸೇವಿಸಿ. ಉಪ್ಪು ಮತ್ತು ಕರಿಮೆಣಸನ್ನು ಮೊಸರಿಗೆ ಸೇರಿಸಬಹುದು.
ಮೊಸರು ಮತ್ತು ಇಸಾಬ್ಗೋಲ್ : ಅಧಿಕ ರಕ್ತದ ಸಕ್ಕರೆಯನ್ನು ನಿಯಂತ್ರಿಸಲು 1 ರಿಂದ 2 ಟೀ ಚಮಚ ಇಸಾಬ್ಗೋಲ್ ಅನ್ನು ಮೊಸರು ಬಟ್ಟಲಿಗೆ ಸೇರಿಸಬಹುದು. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದು ಮಾತ್ರವಲ್ಲದೆ ಮಧುಮೇಹದಿಂದ ಉಂಟಾಗುವ ಇತರ ಸಮಸ್ಯೆಗಳನ್ನು ಸಹ ನಿಯಂತ್ರಿಸುತ್ತದೆ. ವಿಶೇಷವಾಗಿ ಇದು ಮಲಬದ್ಧತೆಯನ್ನು ನಿವಾರಿಸುತ್ತದೆ.
ಮೊಸರು ಮತ್ತು ಸೌತೆಕಾಯಿ : ಸಲಾಡ್ಗಳಲ್ಲಿ ಹಸಿಯಾಗಿ ತಿನ್ನುವ ಕೆಲವು ವಸ್ತುಗಳನ್ನು ಮೊಸರಿನೊಂದಿಗೆ ತಿನ್ನುವಾಗ ಸಹ ಪ್ರಯೋಜನಕಾರಿಯಾಗಿದೆ. ಅದಕ್ಕಾಗಿ ಬೆಳಗಿನ ಉಪಾಹಾರಕ್ಕೆ ಒಂದು ಬೌಲ್ ಮೊಸರಿಗೆ ಸೌತೆಕಾಯಿ, ಟೊಮೇಟೊ ಇತ್ಯಾದಿಗಳನ್ನು ಸೇರಿಸಬಹುದು. ನೀವು ದಾಳಿಂಬೆಯನ್ನು ಮೊಸರಿನ ಜೊತೆಗೆ ತಿನ್ನಬಹುದು.
ಮೊಸರು ಮತ್ತು ದಾಲ್ : ದಾಲ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಇತರ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ಊಟದಲ್ಲಿ ಮೊಸರು ಮತ್ತು ಬೇಳೆಯನ್ನು ಸೇವಿಸುವುದರಿಂದ ಮಧುಮೇಹ ರೋಗಿಗಳಿಗೂ ಪ್ರಯೋಜನವಾಗುತ್ತದೆ. ಇದು ದೇಹಕ್ಕೆ ಪೋಷಕಾಂಶಗಳನ್ನೂ ನೀಡುತ್ತದೆ.
ಮೊಸರು ಜೊತೆ ಹಣ್ಣು : ಮೊಸರಿನ ಜೊತೆ ಸೇವಿಸಿದರೆ ಪ್ರಯೋಜನಕಾರಿಯಾದ ಕೆಲವು ಹಣ್ಣುಗಳೂ ಇವೆ. ಮಧುಮೇಹಿಗಳು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ದಾಳಿಂಬೆ ಮತ್ತು ಮೊಸರು ತಿನ್ನಬೇಕು. ಇದು ಅನೇಕ ಹೊಟ್ಟೆಯ ಕಾಯಿಲೆಗಳನ್ನು ಗುಣಪಡಿಸುತ್ತದೆ.
(ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.)