ನಿತ್ಯ ಬೆಳಿಗ್ಗೆ ಈ 5 ಕೆಲಸ ಮಾಡುವುದರಿಂದ ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು

Diabetes Control Tips: ಮಧುಮೇಹ ರೋಗಿಗಳು ತಮ್ಮ ಜೀವನಶೈಲಿ ಮತ್ತು ಆರೋಗ್ಯದ ಬಗ್ಗೆ ಸರಿಯಾದ ಕಾಳಜಿ ವಹಿಸುವ ಮೂಲಕ ಬ್ಲಡ್ ಶುಗರ್ ಅನ್ನು ನಿಯಂತ್ರಿಸಬಹುದು. 

Diabetes Control Tips: ಮಧುಮೇಹ ರೋಗಿಗಳು ತಮ್ಮ ಜೀವನಶೈಲಿ ಮತ್ತು ಆರೋಗ್ಯದ ಬಗ್ಗೆ ಸರಿಯಾದ ಕಾಳಜಿ ವಹಿಸುವ ಮೂಲಕ ಬ್ಲಡ್ ಶುಗರ್ ಅನ್ನು ನಿಯಂತ್ರಿಸಬಹುದು. ಇದಕ್ಕಾಗಿ ಡಯಾಬಿಟಿಸ್ ರೋಗಿಗಳು ಕೆಲವು ಕೆಲಸಗಳನ್ನು ಮಾಡುವುದು ಬಹಳ ಅಗತ್ಯ. ನಿತ್ಯ ಬೆಳಿಗ್ಗೆ ಈ 5 ಕೆಲಸ ಮಾಡುವುದರಿಂದ ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮಧುಮೇಹ ರೋಗಿಗಳು ವೈದ್ಯರ ಸಲಹೆ ಮೇರೆಗೆ ನಿತ್ಯ ಬೆಳಿಗ್ಗೆ ನಿಮ್ಮ ಶುಗರ್ ಟೆಸ್ಟ್ ಮಾಡುವುದು ಅಗತ್ಯ. ಈ ಮೂಲಕ ನೀವು ನಿಮ್ಮ ಬ್ಲಡ್ ಶುಗರ್ ಲೆವೆಲ್ ಮೇಲೆ ನಿಗಾ ಇಡುವುದರ ಜೊತೆಗೆ ಅದು ಹೆಚ್ಚಾಗದಂತೆಯೂ ಕಾಳಜಿವಹಿಸಬಹುದಾಗಿದೆ. 

2 /5

ಉತ್ತಮ ಆರೋಗ್ಯಕ್ಕೆ ಯೋಗ, ವಾಕಿಂಗ್, ಜಾಕಿಂಗ್, ವ್ಯಾಯಾಮ ತುಂಬಾ ಒಳ್ಳೆಯದು. ಅದರಲ್ಲೂ ಡಯಾಬಿಟಿಸ್ ಸಮಸ್ಯೆ ಇರುವವರಿಗೆ ನಿತ್ಯ ಮಾರ್ನಿಂಗ್ ವಾಕ್ ಮಾಡಲು ಸಲಹೆ ನೀಡಲಾಗುತ್ತದೆ.

3 /5

ಡಯಾಬಿಟಿಸ್ ರೋಗಿಗಳಿಗೆ ನಿತ್ಯ ಬೆಳಿಗ್ಗೆ ಅವರ ಪಾದಗಳ ಮೇಲೆ ಕಣ್ಣಿಡಲು ಮುಖ್ಯ. ವಾಸ್ತವವಾಗಿ, ಮಧುಮೇಹ ರೋಗಿಗಳಿಗೆ ಪಾದದ ನರಗಳಲ್ಲಿ ಬಹಳ ಬೇಗ ಹಾನಿಯಾಗುವ ಸಾಧ್ಯತೆ ಇರುತ್ತದೆ. ನಿತ್ಯ ಪಾದವನ್ನು ಗಮನಿಸುವುದರಿಂದ ಯಾವುದೇ ಸಣ್ಣ ಬದಲಾವಣೆ ಕಂಡು ಬಂದರೂ ತಕ್ಷಣ ಚಿಕಿತ್ಸೆ ಪಡೆಯಬಹುದು.

4 /5

ಮಧುಮೇಹ ರೋಗಿಗಳು ನಿತ್ಯ ಬೆಳಿಗ್ಗೆ ಎದ್ದ ಕೂಡಲೇ ತಪ್ಪದೇ ಒಂದು ಲೋಟ ನೀರು ಕುಡಿಯಿರಿ. ಈ ರೀರಿ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದು ಸುಲಭವಾಗುತ್ತದೆ.

5 /5

ಮಧುಮೇಹ ರೋಗಿಗಳು ಯಾವುದೇ ಕಾರಣಕ್ಕೂ ನಿಮ್ಮ ಬೆಳಗಿನ ಉಪಹಾರದ ವಿಷಯದಲ್ಲಿ ನಿರ್ಲಕ್ಷ್ಯವಹಿಸಬೇಡಿ ಅಥವಾ ಎಂದಿಗೂ ಕೂಡ ಉಪಹಾರವನ್ನು ಬಿಡುವ ತಪ್ಪನ್ನು ಮಾಡಬೇಡಿ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.