ದೆಹಲಿ-ಅಯೋಧ್ಯೆ ಬುಲೆಟ್ ರೈಲು: ಕೇಂದ್ರದ ಮಹತ್ವಾಕಾಂಕ್ಷೆ ಯೋಜನೆ ಬಗ್ಗೆ ತಿಳಿದುಕೊಳ್ಳಿ…

ದೆಹಲಿಯಿಂದ ಅಯೋಧ್ಯೆಗೆ ಬುಲೆಟ್ ರೈಲು ಯೋಜನೆಗೆ ಸುಮಾರು 200 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ ಎಂದು ಕೇಂದ್ರವು ಅಂದಾಜಿಸಿದೆ.

ದೇಶದ 2 ಪ್ರಮುಖ ನಗರಗಳ ನಡುವಿನ ಪ್ರಯಾಣವನ್ನು ಕೇವಲ 2 ಗಂಟೆಗಳವರೆಗೆ ತಗ್ಗಿಸಲು ದೆಹಲಿ ಮತ್ತು ಅಯೋಧ್ಯೆಯ ನಡುವೆ ಬುಲೆಟ್ ರೈಲು ಸೇವೆ ಪರಿಚಯಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದೆ. ಧಾರ್ಮಿಕ ನಗರ ಅಯೋಧ್ಯೆಯನ್ನು ಪ್ರಪಂಚಕ್ಕೆ ಹತ್ತಿರವಾಗಿಸುವುದು ಈ ಯೋಜನೆಯ ಹಿಂದಿನ ಉದ್ದೇಶವಾಗಿದೆ. ವಿಶೇಷವಾಗಿ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಲು ಅನೇಕರು ಉತ್ಸುಕರಾಗಿರುವುದರಿಂದ ಕೇಂದ್ರ ಸರ್ಕಾರ ಈ ಮಹತ್ವಾಕಾಂಕ್ಷೆ ಯೋಜನೆಯನ್ನು ಪ್ರಸ್ತಾಪಿಸಿದೆ.

ಎಲ್ಲಾ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ದೆಹಲಿಯಿಂದ ಅಯೋಧ್ಯೆಗೆ ಬುಲೆಟ್ ರೈಲು ಯೋಜನೆ ಜಾರಿಯಾಗಲಿದೆ. ಈ ಯೋಜನೆಗೆ ಸುಮಾರು 200 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ ಎಂದು ಕೇಂದ್ರವು ಅಂದಾಜಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಪ್ರಸ್ತುತ ನವದೆಹಲಿ ಮತ್ತು ಅಯೋಧ್ಯೆಯ ನಡುವಿನ 670 ಕಿ.ಮೀ ದೂರವು 14-15 ಗಂಟೆಗಳ ಸುದೀರ್ಘ ಪ್ರಯಾಣವನ್ನು ಒಳಗೊಂಡಿದೆ. ಪ್ರಯಾಣಿಕರು 10-18 ಗಂಟೆಗಳ ಕಾಲ ರೈಲಿನಲ್ಲಿ ಪ್ರಯಾಣಿಸಿ ಪುಣ್ಯ ಭೂಮಿಯನ್ನು ತಲುಪುತ್ತಾರೆ. ಆದರೆ ಅದೇ ಬುಲೆಟ್ ರೈಲಿನಲ್ಲಿ ಪ್ರಯಾಣಿಕರು ಕೇವಲ 2 ಗಂಟೆಗಳಲ್ಲಿ ದೆಹಲಿಯಿಂದ ಅಯೋಧ್ಯೆಯನ್ನು ತಲುಪಬಹುದು. ರೈಲು ಗಂಟೆಗೆ 350 ಕಿ.ಮೀ ವೇಗದಲ್ಲಿ ಓಡುವ ನಿರೀಕ್ಷೆಯಿದೆ.

2 /5

ಕೇಂದ್ರದ ಉನ್ನತ ಅಧಿಕಾರಿಗಳು ಶುಕ್ರವಾರ (ಆಗಸ್ಟ್ 20)ರಂದು ಅಯೋಧ್ಯೆಯಲ್ಲಿ ಬುಲೆಟ್ ರೈಲು ನಿಲ್ದಾಣಕ್ಕಾಗಿ ಸ್ಥಳವನ್ನು ಅಂತಿಮಗೊಳಿಸಿದ್ದಾರೆ. ಬುಲೆಟ್ ರೈಲಿನ ನಿರ್ಮಾಣವನ್ನು ಆರಂಭಿಸಲು ಅಧಿಕಾರಿಗಳು ವಸತಿ, ರೈಲು ಮಾರ್ಗ ಜೋಡಣೆ ಮತ್ತು ಹೆಚ್ಚಿನವುಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿದ್ದಾರೆ ಎಂದು ವರದಿಯಾಗಿದೆ.

3 /5

ರಾಷ್ಟ್ರೀಯ ಹೈಸ್ಪೀಡ್ ರೈಲು ನಿಗಮ (NHSRC) ದೆಹಲಿ-ಅಯೋಧ್ಯೆ ಬುಲೆಟ್ ರೈಲು ಯೋಜನೆಯನ್ನು ನೋಡಿಕೊಳ್ಳಲಿದೆ ಎಂದು ವರದಿಗಳು ಹೇಳಿವೆ. ಬುಲೆಟ್ ರೈಲು ನಿಲ್ದಾಣದ ಭೂಮಿಯು ಉದ್ದೇಶಿತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇದೆ.

4 /5

ದೆಹಲಿಯಿಂದ ಅಯೋಧ್ಯೆಗೆ ಬುಲೆಟ್ ರೈಲು ಯೋಜನೆಯ ಹೊರತಾಗಿ ಅಯೋಧ್ಯೆಯನ್ನು ವಿಶ್ವದ ಪ್ರವಾಸೋದ್ಯಮ ಭೂಪಟಕ್ಕೆ ತರಲು ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯ ನಿರ್ಮಾಣವನ್ನು ಕೇಂದ್ರ ಸರ್ಕಾರವು ತ್ವರಿತಗತಿಯಲ್ಲಿ ನಡೆಸಿದೆ. ಬುಲೆಟ್ ರೈಲು ನಿಲ್ದಾಣವು ಲಕ್ನೋ-ಗೋರಖ್‌ಪುರ ಬೈಪಾಸ್ ಬಳಿ ಇರಲಿದೆ.

5 /5

ದೆಹಲಿ-ಅಯೋಧ್ಯೆ ಬುಲೆಟ್ ರೈಲು ಯೋಜನೆಯ ವಿವರವಾದ ವರದಿ ಶೀಘ್ರದಲ್ಲೇ ಹೊರಬೀಳಲಿದೆ. ಪ್ರಸ್ತುತ ಬುಲೆಟ್ ರೈಲು ಯೋಜನೆಯ ಆರಂಭಿಕ ಹಂತದಲ್ಲಿದೆ. ಬುಲೆಟ್ ರೈಲು ಯೋಜನೆಯ ವಿಶೇಷತೆಗಳ ಬಗ್ಗೆ ಶೀಘ್ರವೇ ಸಂಪೂರ್ಣ ಮಾಹಿತಿ ನೀಡಲಾಗುವುದು. ವಾರಣಾಸಿ ಮತ್ತು ಆಗ್ರಾ ಸುತ್ತುವ ಈ ರೈಲು ಅಂತಿಮವಾಗಿ ದೆಹಲಿಯನ್ನು ಲಕ್ನೋಗೆ ಸಂಪರ್ಕಿಸುತ್ತದೆ ಎಂದು ವರದಿಗಳು ಹೇಳಿವೆ.