Photo Gallery: ಕೆಂಪು ಉಡುಗೆಯಲ್ಲಿ ಮಿಂಚಿದ ದೀಪಿಕಾ ಪಡುಕೋಣೆ..!

ಪ್ರತಿಭೆ, ಸೌಂದರ್ಯ ಮತ್ತು ನಟನಾ ಕೌಶಲ್ಯದಿಂದ ದೀಪಿಕಾ ಬಾಲಿವುಡ್‌ನಲ್ಲಿ ನಕ್ಷತ್ರವಾಗಿ ಮಿಂಚುತ್ತಿದ್ದಾರೆ.  

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಆಗಾಗ ಫೋಟೋಶೂಟ್ ಮಾಡಿಸುತ್ತಾ ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿರುತ್ತಾರೆ. ಅದ್ಭುತ ನಟನಾ ಸಾಮರ್ಥ್ಯದಿಂದ ಬಾಲಿವುಡ್‌ ಚಿತ್ರರಂಗದಲ್ಲಿ ತಮ್ಮದೇಯಾದ ಛಾಪು ಒತ್ತಿರುವ ಈ ಬೆಡಗಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ಮುಗುಳ್ನಗೆಯಿಂದ ಸದಾ ಹೊಳೆಯುವ ಕೂದಲಿನವರೆಗೆ ಮತ್ತು ದೋಷರಹಿತ ಮೇಕ್ಅಪ್ ವರೆಗೂ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ತಮ್ಮ ಪ್ರತಿಭೆ, ಸೌಂದರ್ಯ ಮತ್ತು ನಟನಾ ಕೌಶಲ್ಯದಿಂದ ದೀಪಿಕಾ ಬಾಲಿವುಡ್‌ನಲ್ಲಿ ನಕ್ಷತ್ರವಾಗಿ ಮಿಂಚುತ್ತಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತನ್ನ ಕೆಂಪು ಬಣ್ಣದ ಟಾಪ್‌ನಲ್ಲಿ ಅದ್ಭುತವಾಗಿ ಕಾಣುತ್ತಿದ್ದಾರೆ. ಕೆಂಪು ಉಡುಗೆಯಲ್ಲಿ  ನಟಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ದಿವಾ ಉದ್ದನೆಯ ತೋಳುಗಳನ್ನು ಹೊಂದಿರುವ ಕೆಂಪು ಅಂಗಿಯನ್ನು ಧರಿಸಿರುವುದು ಫೋಟೋದಲ್ಲಿ ಕಾಣಬಹುದು.

2 /5

ನಟಿ ದೀಪಿಕಾ ಪಡುಕೋಣೆ ಬಿಗಿಯಾದ ಕಪ್ಪು ಲ್ಯಾಟೆಕ್ಸ್ ಪ್ಯಾಂಟ್‌ ಧರಿಸಿ ಮಿಂಚಿದ್ದಾರೆ.   

3 /5

ನಟಿ ದೀಪಿಕಾ ಪಡುಕೋಣೆಯವರ ಹೈ ಕಾಲರ್ ಡ್ರೆಸ್ ಕ್ಲಾಸಿಯಾಗಿ ಕಾಣುತ್ತಿದೆ. ಕೆಂಪು ಧಿರಿಸು ತೊಟ್ಟು ಬಾಲಿವುಡ್ ನಟಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.  

4 /5

ನಟಿ ದೀಪಿಕಾ ಪಡುಕೋಣೆ ರೆಡ್ ಟಾಪ್ ಧರಿಸಿಕೊಂಡು ಹಾಟ್ ಹಾಟ್ ಆಗಿ ಕಾಣಿಸುತ್ತಿದ್ದಾರೆ. ಫ್ಯಾಷನ್ ಚಿನ್ನದ ಕಿವಿಯೋಲೆಗಳನ್ನು ಧರಿಸಿ ಅದ್ಭುತವಾಗಿ ಕಾಣುತ್ತಿದ್ದಾರೆ.

5 /5

ಇತ್ತೀಚೆಗೆ ನಟಿ ದೀಪಿಕಾ ಪಡುಕೋಣೆ ತಮ್ಮ ಅತ್ತೆಯ ಹುಟ್ಟುಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದರು. ಈ ವೇಳೆ ಪತಿ ರಣವೀರ್ ಸಿಂಗ್ ಅವರೊಂದಿಗೆ ದೀಪಿಕಾ ಕಾಣಿಸಿಕೊಂಡಿದ್ದು ಹೀಗೆ.