Dating Record: 50 ರಾಜ್ಯಗಳ 100 ಹುಡುಗಿಯರೊಂದಿಗೆ ಡೇಟಿಂಗ್ ಮಾಡಿದ ಭೂಪ..!

Dating Record: ಅಮೆರಿಕದಲ್ಲಿ ವಿಶಿಷ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಯುವಕನೊಬ್ಬ ಅಮೆರಿಕದ 50 ರಾಜ್ಯಗಳ ಸುಮಾರು 100 ಹುಡುಗಿಯರೊಂದಿಗೆ ಡೇಟಿಂಗ್ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ​

ನವದೆಹಲಿ: ಅಮೆರಿಕದಲ್ಲಿ ವಿಶಿಷ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಯುವಕನೊಬ್ಬ ಅಮೆರಿಕದ 50 ರಾಜ್ಯಗಳ ಸುಮಾರು 100 ಹುಡುಗಿಯರೊಂದಿಗೆ ಡೇಟಿಂಗ್ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಡೇಟಿಂಗ್ ಆಪ್‍ಗಳ ಮೂಲಕ ಈ ಎಲ್ಲರನ್ನೂ ಭೇಟಿಯಾಗುತ್ತಿದ್ದನಂತೆ. 50 ರಾಜ್ಯಗಳ ಹುಡುಗಿಯರನ್ನು ಡೇಟಿಂಗ್ ಮಾಡುವುದು ಆತನ ಗುರಿಯಾಗಿತ್ತು. ಇದಾದ ನಂತರ ಈ 25ರ ಹರೆಯದ ಯುವಕ ನೀಡಿರುವ ಹೇಳಿಕೆ ಇನ್ನಷ್ಟು ಆಘಾತಕಾರಿಯಾಗಿದೆ. 100 ಹುಡುಗಿಯರೊಂದಿಗೆ ಡೇಟಿಂಗ್ ಮಾಡಿದ ಈ ಹುಡುಗನಿಗೆ ಇನ್ನೂ ಸಹ ಮಹಿಳೆಯರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲವಂತೆ. ಹುಡುಗಿಯರನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ನಾನು ಇಲ್ಲಿಯವರೆಗೆ ಅವರನ್ನು ಅರ್ಥಮಾಡಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ ಅಂತಾ ಹೇಳಿದ್ದಾನೆ. 100 ಹುಡುಗಿಯರೊಂದಿಗೆ ಡೇಟಿಂಗ್ ಮಾಡಿದ ಈ ಯುವಕ ಮತ್ತೆ ಏನು ಹೇಳಿದ್ದಾನೆಂದು ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ವರದಿಯ ಪ್ರಕಾರ ಅಮೆರಿಕದ 50 ರಾಜ್ಯಗಳ 100 ಹುಡುಗಿಯರೊಂದಿಗೆ ಡೇಟಿಂಗ್ ಮಾಡಿರುವ ಈ ಯುವಕನ ಹೆಸರು ಮ್ಯಾಥ್ಯೂ ಮತ್ತು ಈತನ ವಯಸ್ಸು ಕೇವಲ 25 ವರ್ಷ. ಮ್ಯಾಥ್ಯೂ ಹವಾಯಿಯಿಂದ ಅಲಾಸ್ಕಾ ಮತ್ತು ಎಲ್ಲಾ ಅಮೇರಿಕನ್ ರಾಜ್ಯಗಳ ಹುಡುಗಿಯರೊಂದಿಗೆ ಡೇಟಿಂಗ್ ಮಾಡಿದ್ದಾನಂತೆ. ಆದರೆ ತಾನು ಇನ್ನೂ ಸಹ ಹುಡುಗಿಯರನ್ನು ಅರ್ಥಮಾಡಿಕೊಳ್ಳಲು ವಿಫಲನಾಗಿದ್ದೇನೆಂದು ಆತ ಹೇಳಿದ್ದಾನೆ.

2 /5

ಮ್ಯಾಥ್ಯೂ ಮೊದಲು ಡೇಟಿಂಗ್ ಅಪ್ಲಿಕೇಶನ್‌ಗಳ ಮೂಲಕ ಹತ್ತಿರದ ಹುಡುಗಿಯರೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದನಂತೆ. ನಂತರ ಆತ ಅಮೆರಿಕದ ವಿವಿಧ ರಾಜ್ಯಗಳ ಹುಡುಗಿಯರನ್ನು ಡೇಟಿಂಗ್ ಮಾಡಲು ನಿರ್ಧರಿಸಿದ. ಹೀಗಾಗಿ ಹುಡುಗಿಯರೊಂದಿಗೆ ಡೇಟಿಂಗ್ ಮಾಡಲು ಅಮೆರಿಕದ 50 ರಾಜ್ಯಗಳಿಗೆ ಆತ ಪ್ರಯಾಣಿಸಿದ್ದಾನೆ.

3 /5

ಅಮೆರಿಕದ ಪ್ರತಿಯೊಂದು ರಾಜ್ಯದ ಹುಡುಗಿಯರೊಂದಿಗೆ ಡೇಟಿಂಗ್ ಮಾಡುತ್ತಿರುವುದಕ್ಕೆ ನಾನು ಹೆಮ್ಮೆಪಡುತ್ತೇನೆ ಎಂದು ಮ್ಯಾಥ್ಯೂ ಹೇಳಿದ್ದಾನೆ. ವಿವಿಧ ಹುಡುಗಿಯರೊಂದಿಗೆ ಡೇಟ್ ಮಾಡುವುದು ನನಗೆ ಇಷ್ಟವೆಂದು ತಿಳಿಸಿದ್ದಾನೆ.

4 /5

ಈ ಹಿಂದೆ 50 ರಾಜ್ಯಗಳ 50 ಹುಡುಗಿಯರೊಂದಿಗೆ ಡೇಟಿಂಗ್ ಮಾಡುವ ಗುರಿ ಇಟ್ಟುಕೊಂಡಿದ್ದೆ ಎಂದು ಮ್ಯಾಥ್ಯೂ ಹೇಳಿದ್ದಾನೆ. ಈತ ತನ್ನ ಕಾರಿನ ಮೇಲೆ 50 ದಿನಾಂಕಗಳು ಮತ್ತು 50 ರಾಜ್ಯಗಳ ಹೆಸರುಗಳನ್ನು ಬರೆದಿದ್ದಾನೆ. ಹುಡುಗಿಯೊಂದಿಗೆ ಡೇಟಿಂಗ್ ಹೋದಾಗ, ಮ್ಯಾಥ್ಯೂ ಕೇವಲ ಡೇಟಿಂಗ್‌ ಮಾತ್ರ ಮಾಡಿದ್ದಾನೆ ಹೊರತು ಅವರೊಂದಿಗೆ ಸಂಬಂಧ ಹೊಂದಿಲ್ಲ. ಇದು ಆತ ಡೇಟಿಂಗ್ ಮಾಡಿದ ಎಲ್ಲಾ ಹುಡುಗಿಯರಿಗೂ ಮೊದಲೇ ತಿಳಿದಿತ್ತಂತೆ.

5 /5

ಇನ್ನು 25 ವರ್ಷದ ಯುವಕನಾಗಿರುವ ಮ್ಯಾಥ್ಯೂ ನಾನು 100 ಹುಡುಗಿಯರ ಜೊತೆ ಡೇಟ್ ಮಾಡಿದ್ದು ನಿಜ. ಆದರೆ ಪ್ರತಿ ಬಾರಿಯೂ ನನಗೆ ಯಶಸ್ಸು ಸಿಗಲಿಲ್ಲ. ಡೇಟಿಂಗ್ ಅನುಭವ ಪ್ರತಿ ಬಾರಿಯೂ ಚೆನ್ನಾಗಿರಲಿಲ್ಲ. ಕೆಲವು ಹುಡುಗಿಯರು ಕೆಲವೇ ನಿಮಿಷಗಳಲ್ಲಿ ಆತನನ್ನು ತೊರೆದು ಹೋಗಿದ್ದಾರಂತೆ. ಈ ಕಾರಣದಿಂದ ಇನ್ನೂ ಮಹಿಳೆಯರನ್ನು ಅರ್ಥ ಮಾಡಿಕೊಳ್ಳಲು ನನಗೆ ಸಾಧ್ಯವಾಗಿಲ್ಲವೆಂದು ಮ್ಯಾಥ್ಯೂ ಹೇಳಿದ್ದಾರೆ.