ಕೋಟಿ ಬಳಕೆದಾರರ ಡೇಟಾ ಮತ್ತೆ ಸೋರಿಕೆಯಾಗಿದೆ. ಈ ಬಾರಿ ಅತಿ ದೊಡ್ಡ ಮೈಕ್ರೋಸಾಫ್ಟ್ ಪ್ಲಾಟ್ಫಾರ್ಮ್ನಿಂದ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ.
ನವದೆಹಲಿ : ಫೇಸ್ಬುಕ್ (Facebook) ಮತ್ತು ಮೊಬಿಕ್ವಿಕ್ನಿಂದ (Mobikwik) ಡೇಟಾ ಸೋರಿಕೆಯಾದ ಪ್ರಕರಣವನ್ನೇ ಜನ ಮರೆತಿಲ್ಲ. ಅಷ್ಟರಲ್ಲೇ ಈಗ ಮತ್ತೆ ಕೋಟ್ಯಂತರ ಬಳಕೆದಾರರ ಡೇಟಾ ಸೋರಿಕೆಯಾಗಿರುವ ಬಗ್ಗೆ ವರದಿಯಾಗಿದೆ. ಅತಿ ದೊಡ್ಡ ಮೈಕ್ರೋಸಾಫ್ಟ್ ಪ್ಲಾಟ್ಫಾರ್ಮ್ನಿಂದ ಅನೇಕ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
LinkedIn ನ ಸುಮಾರು 500 ಮಿಲಿಯನ್ ಬಳಕೆದಾರರ ಡೇಟಾ ಸೋರಿಕೆಯಾಗಿದೆ. ಈ ಸಾಮಾಜಿಕ ಮಾಧ್ಯಮ ವೇದಿಕೆಯಿಂದ ಜನರ ಪ್ರೊಫೈಲ್ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ, ಇಟಾಲಿಯನ್ ಖಾಸಗಿ ತನಿಖಾ ಸಂಸ್ಥೆ ಲಿಂಕ್ಡ್ಇನ್ ಡೇಟಾ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿದೆ ಎಂಬ ಸುದ್ದಿ ಇದೆ.
ಪ್ರಪಂಚದಾದ್ಯಂತದ ಹೆಚ್ಚಿನ ವೃತ್ತಿಪರರು LinkedInನಲ್ಲಿ ಉದ್ಯೋಗಗಳಿಗಾಗಿ ತಮ್ಮ ಪ್ರೊಫೈಲ್ಗಳನ್ನು ಅಪ್ಲೋಡ್ ಮಾಡುತ್ತಾರೆ. ಪ್ರಪಂಚದ ಎಲ್ಲಾ ದೊಡ್ಡ ಕಂಪನಿಗಳು ಉದ್ಯೋಗಿಗಳನ್ನು ಹುಡುಕಲು LinkedIn ಅನ್ನು ಬಳಸುತ್ತವೆ.
ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಫೇಸ್ಬುಕ್ನಿಂದ ಇತ್ತೀಚೆಗೆ 53.3 ಕೋಟಿ ಬಳಕೆದಾರರ ಡೇಟಾ ಸೋರಿಕೆಯಾಗಿತ್ತು.
ಮಾಹಿತಿಯ ಪ್ರಕಾರ, ಭಾರತೀಯ ಪೇಮೆಂಟ್ ಅಪ್ಲಿಕೇಶನ್ Mobikwikನಿಂದ ಅನೇಕ ಬಳಕೆದಾರರ ಡೇಟಾ ಕೂಡ ಸೋರಿಕೆಯಾಗಿದೆ.