ಗುರು ಗ್ರಹ ಎಲ್ಲಾ ಗ್ರಹಗಳಲ್ಲಿ ಅತ್ಯಂತ ಮಂಗಳಕರ ಗ್ರಹ. ಗುರುವಿನ ದಯೆ ಇದ್ದರೆ ಜೀವನದಲ್ಲಿ ಯಶಸ್ಸಿನ ಶಿಖರವನ್ನೇರುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ.
ಬೆಂಗಳೂರು : ಗುರು ಮುಂದಿನ ವರ್ಷ ಅಂದರೆ 2024ರಲ್ಲಿ ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾರೆ. ಗುರು ವರ್ಷಕ್ಕೊಮ್ಮೆ ತನ್ನ ರಾಶಿಯನ್ನು ಬದಲಿಸುತ್ತಾನೆ. ಗುರುವಿನ ಈ ಸಂಕ್ರಮಣ ಕೆಲವು ರಾಶಿಯವರ ಜಾತಕದಲ್ಲಿ ಗುರು ದೆಸೆಯನ್ನು ಉಂಟು ಮಾಡುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಗುರು ಸಂಕ್ರಮಣ 2024 : ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, 2024 ರಲ್ಲಿ ಗುರು ತನ್ನ ರಾಶಿ ಮತ್ತು ನಕ್ಷತ್ರ ಎರಡನ್ನೂ ಬದಲಿಸುತ್ತಾನೆ. ಇದರ ಪರಿಣಾಮವಾಗಿ ವರ್ಷ ಪೂರ್ತಿ ಅದೃಷ್ಟ ಈ ರಾಶಿಯವರ ಬೆನ್ನಿಗೆ ಇರುತ್ತದೆ. ಇವರು ಏನೇ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಜಯ ಸಿಕ್ಕಿಯೇ ಸಿಗುತ್ತದೆ.
ಮೇಷ ರಾಶಿ : ಜೀವನದಲ್ಲಿ ಅದೃಷ್ಟದ ಬಾಗಿಲು ತೆರೆಯುವುದು. ಅನುಭವಿಸಿದ್ದ ಕಷ್ಟ ನಷ್ಟಗಳೆಲ್ಲಾ ಲಾಭವಾಗಿ ಬದಲಾಗುವುದು. ಹೆಜ್ಜೆ ಹೆಜ್ಜೆಗೂ ಸಂತೋಷ ನಿಮ್ಮದಾಗುವುದು. ಒಂದರ್ಥದಲ್ಲಿ ಅದೃಷ್ಟದ ವರ್ಷವೇ ಆಗಿರುವುದು.
ವೃಷಭ ರಾಶಿ : ಆದಾಯ ಹೆಚ್ಚಲಿದೆ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಆರ್ಥಿಕ ದೃಷ್ಟಿಕೋನದಿಂದ ಎಲ್ಲವೂ ಮಂಗಳಮಯವಾಗಿರಲಿದೆ. ಅದೃಷ್ಟ ಲಕ್ಷ್ಮೀ ಕೈ ಹಿಡಿದು ಮುನ್ನಡೆಸುತ್ತಾಳೆ. ಪೂರ್ವಿಕರ ಆಸ್ತಿಯಿಂದ ಲಾಭವಾಗುವುದು. ದಾಂಪತ್ಯ ಜೀವನ ಮಧುರವಾಗಿರುತ್ತದೆ.
ಕರ್ಕಾಟಕ ರಾಶಿ: ಆದಾಯದಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡುಬರಲಿದೆ. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುತ್ತವೆ. ಉದ್ಯಮ ಮತ್ತು ವ್ಯಾಪಾರದಲ್ಲಿ ಅಪಾರ ಪ್ರಗತಿ ಕಂಡುಬರಲಿದೆ.
ಕನ್ಯಾ ರಾಶಿ : ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಅವಿವಾಹಿತರು ಪ್ರೇಮ ವಿವಾಹವಾಗುವ ಸಾಧ್ಯತೆ ಇದೆ. ಮನೆಯಲ್ಲಿ ಧನ ಧಾನ್ಯ ತುಂಬಿ ತುಳುಕುವುದು.
ವೃಶ್ಚಿಕ ರಾಶಿ : ಅದೃಷ್ಟ ನಿಮ್ಮ ಜೊತೆಗೆಯೇ ಹೆಜ್ಜೆ ಹಾಕಿಕೊಂಡು ಬರುತ್ತದೆ. ಅವಿವಾಹಿತರಿಗೆ ವಿವಾಹ ನಿಶ್ಚಯ. ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ನಿಮ್ಮದಾಗುವುದು.