ಮದುವೆಗೂ ಮುನ್ನ ತಂದೆಯಾದ ಕ್ರಿಕೆಟ್‌ ದಿಗ್ಗಜರಿವರು!

ಕ್ರಿಕೆಟಿಗರು ಯಾವಾಗಲೂ ಗ್ಲಾಮರ್ ಪ್ರಪಂಚದೊಂದಿಗೆ ವಿಶೇಷ ಸಂಬಂಧವನ್ನು ಹೊಂದಿರುತ್ತಾರೆ. ಇನ್ನು ಕ್ರಿಕೆಟ್‌ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳಲು ಬಯಸುತ್ತಾರೆ. 
 

ಇನ್ನು ಕ್ರಿಕೆಟಿಗರ ಪ್ರೇಮಕಥೆಗಳ ಬಗ್ಗೆ ಆಗಾಗ ಕೇಳಿ ಬರುತ್ತಿರುತ್ತದೆ. ಆದರೆ ಮದುವೆಗೂ ಮುನ್ನವೇ ತಂದೆಯಾದ 5 ಕ್ರಿಕೆಟಿಗರ ಇಲ್ಲಿ ನಾವು ಹೇಳಹೊರಟಿದ್ದೇವೆ. 

1 /5

ಭಾರತದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮದುವೆಗೂ ಮುನ್ನ ತಂದೆಯಾದ ಭಾರತೀಯ ಆಟಗಾರ. ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿತ್ತು. ಆ ಬಳಿಕ ಜುಲೈ 30, 2020 ರಂದು ನತಾಶ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಬಹಿರಂಗಪಡಿಸಿದ್ದರು. ಅವರಿಬ್ಬರೂ ಜನವರಿ1, 2020 ರಂದು ದುಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 

2 /5

ಇತ್ತೀಚೆಗಷ್ಟೇ ಜಗತ್ತಿಗೆ ವಿದಾಯ ಹೇಳಿದ್ದ ಆಸ್ಟ್ರೇಲಿಯಾದ ದಿಗ್ಗಜ ಆಲ್ ರೌಂಡರ್ ಆಂಡ್ರ್ಯೂ ಸೈಮಂಡ್ಸ್ ಕೂಡ ಮದುವೆಗೂ ಮುನ್ನವೇ ತಂದೆಯಾಗಿದ್ದರು. ಸೈಮಂಡ್ಸ್ ಮತ್ತು ಅವರ ಪತ್ನಿ ಲಾರಾ 2014ರಲ್ಲಿ ವಿವಾಹವಾದರು. ಮಗ ಹುಟ್ಟಿದ ಒಂದು ವರ್ಷದ ನಂತರ ಇಬ್ಬರೂ ಮದುವೆಯಾಗಿದ್ದರು. ಅವರ ಪತ್ನಿ ಲಾರಾ ಮತ್ತು ಇಬ್ಬರು ಮಕ್ಕಳಾದ ಕ್ಲೋಯ್ ಮತ್ತು ಬಿಲ್ಲಿ ಅವರನ್ನು ಅಗಲಿದ್ದಾರೆ

3 /5

ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಕೂಡ ಮದುವೆಗೆ ಮುನ್ನ ತಂದೆಯಾಗಿದ್ದರು. ಡೇವಿಡ್ ವಾರ್ನರ್ ಮತ್ತು ಅವರ ಪತ್ನಿ ಕ್ಯಾಂಡಿಸ್ ವಾರ್ನರ್ 2014ರಲ್ಲಿ ತಮ್ಮ ಮೊದಲ ಮಗಳಿಗೆ ಜನ್ಮ ನೀಡಿದ್ದು, 2015ರಲ್ಲಿ ಅವರು ವಿವಾಹವಾದರು.

4 /5

ಮದುವೆಗೂ ಮುನ್ನ ತಂದೆಯಾದ ಆಟಗಾರರ ಪಟ್ಟಿಯಲ್ಲಿ ಯೂನಿವರ್ಸ್ ಬಾಸ್ ಎಂದೇ ಖ್ಯಾತರಾಗಿರುವ ಕ್ರಿಸ್ ಗೇಲ್ ಕೂಡ ಸೇರಿದ್ದಾರೆ. 2017 ರಲ್ಲಿ, ಅವರ ಗೆಳತಿ ನತಾಶಾ ಬೆರಿಡ್ಜ್ ಮಗಳಿಗೆ ಜನ್ಮ ನೀಡಿದರು. ಗೇಲ್ ತಂದೆಯಾದ ನಂತರ ನತಾಶಾ ಬೆರಿಡ್ಜ್ ಅವರನ್ನು ವಿವಾಹವಾದರು.

5 /5

ಇಂಗ್ಲೆಂಡ್ ತಂಡದ ಮಾಜಿ ಟೆಸ್ಟ್ ನಾಯಕ ಜೋ ರೂಟ್ ಕೂಡ ಮದುವೆಯಾಗುವ ಮುನ್ನ ತಂದೆಯಾಗಿದ್ದರು. ಜೋ ರೂಟ್ ಮತ್ತು ಅವರ ಗೆಳತಿ ಕ್ಯಾರಿ ಕಾರ್ಟೆಲ್ ಮಾರ್ಚ್ 2016 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ಮದುವೆಯಾಗುವ ಮೊದಲು, ರೂಟ್ ತಂದೆಯಾಗಿದ್ದರು. ಜನವರಿ 7,  2017 ರಂದು, ಕಾರ್ಟೆಲ್ ಮಗ ಆಲ್ಫ್ರೆಡ್ಗೆ ಜನ್ಮ ನೀಡಿದರು. ಆ ಬಳಿಕ ಇಬ್ಬರೂ ವಿವಾಹವಾದರು.