Lakshmi Narayan Rajyog: ಲಕ್ಷ್ಮಿ ನಾರಾಯಣ ರಾಜಯೋಗ ನಿರ್ಮಾಣಕ್ಕೆ ಕೌಂಟ್ ಡೌನ್ ಆರಂಭ, ತಾಯಿ ಲಕ್ಷ್ಮಿಯ ಕೃಪೆಯಿಂದ 3 ರಾಶಿಗಳ ಮೇಲೆ ಅಪಾರ ಧನವೃಷ್ಟಿ!

Laksnmi Narayan Rajyog: ಜೋತಿಷ್ಯ ಶಾಸ್ತ್ರದ ಪ್ರಕಾರ ಮೇಷ  ರಾಶಿಯಲ್ಲಿ ಲಕ್ಷ್ಮಿ ನಾರಾಯಣ ಯೋಗ ನಿರ್ಮಾಣಗೊಳ್ಳುತ್ತಿದೆ. ಈ ರಾಜಯೋಗದ ರೂಪುಗೊಳ್ಳುವಿಕೆ ಹಲವು ರಾಶಿಗಳ ಸ್ಥಳೀಯರಿಗೆ ಧನಾತ್ಮಕ ಫಲಿತಾಂಶಗಳನ್ನು ನೀಡಲಿದ್ದು, ತಾಯಿ ಲಕ್ಷ್ಮಿಯ ಕೃಪೆಯಿಂದ ಇವರ ಮೇಲೆ ಅಪಾರ ಧನವೃಷ್ಟಿಯಾಗಲಿದೆ. 
 

Lakshmi Narayan Yog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಾ ಗ್ರಹಗಳು ಒಂದು ನಿಶ್ಚಿತ ಕಾಲಾಂತರದಲ್ಲಿ ತಮ್ಮ ರಾಶಿಯನ್ನು ಪರಿವರ್ತಿಸುತ್ತವೆ. ಗ್ರಹಗಳ ಈ ಚಲನೆಯ ಪ್ರಭಾವ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಕಂಡುಬರುತ್ತದೆ. ಮಾರ್ಚ್ 31 ರಂದು ಮೇಷ ರಾಶಿಯಲ್ಲಿ ಬುಧ ಗ್ರಹ ಪ್ರವೇಶಿಸಲಿದೆ. ಆದರೆ, ಈಗಾಗಲೇ ಮೇಷ ರಾಶಿಯಲ್ಲಿ ಶುಕ್ರ ವಿರಾಜಮಾನಅನಾಗಿರುವ ಕಾರಣ ಅಲ್ಲಿ ಬುಧ ಹಾಗೂ ಶುಕ್ರರ ಮೈತ್ರಿ ನೆರವೇರಲಿದ್ದು , ಇದರಿಂದ ಲಕ್ಷ್ಮಿ ನಾರಾಯಣ ಯೋಗ ನಿರ್ಮಾಣಗೊಳ್ಳುತ್ತಿದೆ. ಹೀಗಾಗಿ ಈ ರಾಜಯೋಗದ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಅದರಲ್ಲಿಯೂ ವಿಶೇಷವಾಗಿ ಮೂರು ರಾಶಿಗಳ ಜಾತಕದವರ ಪಾಲಿಗೆ ಈ ರಾಜಯೋಗ ಒಳ್ಳೆಯ ದಿನಗಳನ್ನು ಆರಂಭಿಸಲಿದ್ದು, ಇವರ ಮೇಲೆ ತಾಯಿ ಲಕ್ಷ್ಮಿ ಅಪಾರ ಧನವೃಷ್ಟಿ ಸುರಿಸಲಿದ್ದಾಳೆ. 

 

ಇದನ್ನೂ ಓದಿ-Ram Navami 2023 Horoscope: ನಾಳೆ ಶ್ರೀರಾಮನವಮಿ, ಈ ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಹೊಳೆಯಲಿದೆ, ಸಿಗಲಿದೆ ಅಪಾರ ಧನ-ಸಂಪತ್ತು!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

1 /3

ಮಿಥುನ ರಾಶಿ: ನಿಮ್ಮ ಪಾಲಿಗೆ ಮತ್ತು ನಿಮ್ಮ ಆರ್ಥಿಕ ದೃಷ್ಟಿಕೋನದ ಪಾಲಿಗೆ ಲಕ್ಷ್ಮಿ ನಾರಾಯಣ ರಾಜಯೋಗ ಅತ್ಯಂತ ಶುಭ ಸಾಬೀತಾಗಲಿದೆ. ಈ ಯೋಗ ನಿಮ್ಮ ಜಾತಕದ ಆದಾಯ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆದಾಯದ ಹೊಸ ಮೂಲಗಳು ನಿರ್ಮಾಣಗೊಳ್ಳಲಿವೆ. ವಿವಾಹಿತರ ದಾಂಪತ್ಯ ಜೀವನ ಉತ್ತಮವಾಗಿರಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ.  ವ್ಯಾಪಾರಸ್ಥರಿಗೆ ಮಾರುಕಟ್ಟೆಯ ಲಾಭ ಸಿಗಲಿದೆ. ಈ ಅವಧಿಯಲ್ಲಿ ನಿಮ್ಮ ಸಕಲ ಮನೋಕಾಮನೆಗಳು ಪೂರ್ಣಗೊಳ್ಳಲಿವೆ. ಷೇರು ಮಾರುಕಟ್ಟೆ ಅಥವಾ ಲಾಟರಿಗಳಲ್ಲಿ ನೀವು ಹೂಡಿಕೆ ಮಾಡುತ್ತಿದ್ದರೆ. ಈ ಸಮಯ ನಿಮ್ಮ ಪಾಲಿಗೆ ಸಾಕಷ್ಟು ಅನುಕೂಲಕರವಾಗಿದೆ.   

2 /3

ಕರ್ಕ ರಾಶಿ: ಲಕ್ಷ್ಮಿ ನಾರಾಯಣ ಯೋಗ ಕರ್ಕ ರಾಶಿಯ ಜಾತಕದವಾರ ವೃತ್ತಿ ಜೀವನ ಹಾಗೂ ವ್ಯಾಪಾರದ ದೃಷ್ಟಿಯಿಂದ ಲಾಭಪ್ರದ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ಜಾತಕದ ಕರ್ಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ನಿಮಗೆ ಹೊಸ ಅವಕಾಶಗಳು ಪ್ರಾಪ್ತಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಹೊಸ ಕಾರ್ಯ ಆರಂಭಿಸಲು ಸಮಯ ಅತ್ಯುತ್ತಮವಾಗಿದೆ. ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವ ಅಥವಾ ಮಲ್ಟಿನ್ಯಾಷನಲ್ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಈ ಸಮಯ ಸಾಧನೆಗಳಿಂದ ತುಂಬಿರಲಿದೆ. ವ್ಯಾಪಾರಿಗಳಿಗೆ ಉತ್ತಮ ಧನಲಾಭವಾಗಲಿದೆ. ಇದಲ್ಲದೆ ವ್ಯಾಪಾರದಲ್ಲಿ ಹೂಡಿಕೆ ಮಾಡಲು ಸಮಯ ಉತ್ತಮವಾಗಿದೆ.  

3 /3

ಸಿಂಹ ರಾಶಿ: ಲಕ್ಷ್ಮಿ ನಾರಾಯಣ ಯೋಗ ನಿಮ್ಮ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ಜಾತಕದ ನವಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಇದನ್ನು ಅದೃಷ್ಟ ಹಾಗೂ ವಿಶೇಷ ಸ್ಥಾನ ಎಂದು ಭಾವಿಸಲಾಗುತ್ತದೆ. ಇದರಿಂದ ನಿಮಗೆ ಎಲ್ಲಾ ವಿಷಯಗಳಲ್ಲಿ ಅದೃಷ್ಟದ ಬೆಂಬಲ ಸಿಗಲಿದೆ. ಇದಲ್ಲದೆ ಕೆಲಸದ ನಿಮಿತ್ತ ನಿಮ್ಮ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ವರ್ತಮಾನದಲ್ಲಿ ನೀವು ಕೆಲಸ ಮಾಡುತ್ತಿರುವ ಪ್ರಾಜೆಕ್ಟ್ ನಲ್ಲಿ ನಿಮಗೆ ಯಶಸ್ಸು ಪ್ರಾಪ್ತಿಯಾಗಲಿದೆ ಹಾಗೂ ಭವಿಷ್ಯದಲ್ಲಿ ಕೂಡ ನೀವು ಧನಾರ್ಜನೆಯನ್ನು ಮಾಡುವಲ್ಲಿ ಯಶಸ್ವಿಯಾಗುವಿರಿ. ಈ ಅವಧಿಯಲ್ಲಿ ಆಧ್ಯಾತ್ಮದತ್ತ ನಿಮ್ಮ ಅಭಿರುಚಿ ಹೆಚ್ಚಾಗಲಿದೆ. ಧಾರ್ಮಿಕ ಹಾಗೂ ಮಂಗಳ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ವಿದ್ಯಾರ್ಥಿಗಳ ಪಾಲಿಗೆ ಈ ಅವಧಿ ಅತ್ಯುತ್ತಮ ಸಾಬೀತಾಗಲಿದೆ. ದಾರ್ಶನಿಕರು, ಲೇಖಕರು, ಸಲಹಾಕಾರರು ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಉತ್ತಮ ಅವಕಾಶಗಳು ಪ್ರಾಪ್ತಿಯಾಗಲಿವೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)