Corona Side Effects: ಕೊರೊನಾದ ಈ ಅಡ್ಡಪರಿಣಾಮ ನಿಮ್ಮನ್ನು ತಲೆ ತಗ್ಗಿಸುವಂತೆ ಮಾಡಬಹುದು! ಶರೀರದ ಮೇಲೆ ಈ ಪ್ರಭಾವ ಉಂಟಾಗುತ್ತದೆ

Covid Side Effects: ಕೊರೊನಾ ವೈರಸ್ (Coronavirus) ವಿಶ್ವಾದ್ಯಂತದ ಜನರನ್ನು ವೇಗವಾಗಿ ತನ್ನ ತೆಕ್ಕೆಗೆ ಸೆಳೆಯುತ್ತಿದೆ. ಕರೋನಾ (Covid-19)  ರೋಗಿಗಳಲ್ಲಿ ಹಲವು ರೀತಿಯ ಲಕ್ಷಣಗಳು ಕಂಡುಬರುತ್ತಿವೆ. ಇದರಲ್ಲಿ, ಶೀತ, ಜ್ವರ ಮತ್ತು ಕೆಮ್ಮಿನಂತಹ ರೋಗಲಕ್ಷಣಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿದೆ.

Covid Side Effects: ಕೊರೊನಾ ವೈರಸ್ (Coronavirus) ವಿಶ್ವಾದ್ಯಂತದ ಜನರನ್ನು ವೇಗವಾಗಿ ತನ್ನ ತೆಕ್ಕೆಗೆ ಸೆಳೆಯುತ್ತಿದೆ. ಕರೋನಾ (Covid-19)  ರೋಗಿಗಳಲ್ಲಿ ಹಲವು ರೀತಿಯ ಲಕ್ಷಣಗಳು ಕಂಡುಬರುತ್ತಿವೆ. ಇದರಲ್ಲಿ, ಶೀತ, ಜ್ವರ ಮತ್ತು ಕೆಮ್ಮಿನಂತಹ ರೋಗಲಕ್ಷಣಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿದೆ. ಆದರೆ ಕರೋನಾದ (Corona Latest News) ಈ ಲಕ್ಷಣಗಳು ಯಾವುದೇ ಓರ್ವ ವ್ಯಕ್ತಿಯನ್ನು ಮುಜುಗರಕ್ಕೀಡುಮಾಡಬಹುದು ಎಂದು ತಿಳಿದುಬಂದಿದೆ. ಇಂದು ನಾವು ಈ ಲೇಖನದಲ್ಲಿ ಅಂತಹ ಕೆಲ ಲಕ್ಷಣಗಳ ಕುರಿತು ಚರ್ಚೆ ಮಾಡೋಣ.

 

(Disclaimer: ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮಾಹಿತಿಯನ್ನು ಆಧರಿಸಿದೆ. ಅನುಸರಿಸುವುದಕ್ಕೂ ಮುನ್ನ ತಜ್ಞ ವೈದ್ಯರ ಸಲಹೆ ಪಡೆಯಿರಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

 

ಇದನ್ನೂ ಓದಿ-Reuse Of Facial Mask Alert! ಐದು ಬಾರಿಗಿಂತ ಹೆಚ್ಚು ಬಾರಿ MASK ಧರಿಸಬೇಡಿ, ಮರುಬಳಕೆಗೆ ಸಂಬಂಧಿಸಿದಂತೆ ತಜ್ಞರ ಎಚ್ಚರಿಕೆ ಇದು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಲೈಂಗಿಕ ಸಮಸ್ಯೆ - ದಿ ಸನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕರೋನವೈರಸ್ ಸೋಂಕು ತಗುಲಿದ ಕೆಲವು ತಿಂಗಳ ನಂತರ, ಜನರು ಲೈಂಗಿಕ ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ. ಕಿಂಗ್ಸ್ ಕಾಲೇಜ್ ವಿಶ್ವವಿದ್ಯಾಲಯವು 3,400 ಜನರ ಅಧ್ಯಯನದ ಆಧಾರದ ಮೇಲೆ ಈ ರೋಗಲಕ್ಷಣದ ಬಗ್ಗೆ ಮಾಹಿತಿ ನೀಡಿದೆ. ಶೇ.14.6 ರಷ್ಟು ಪುರುಷರು ಮತ್ತು ಶೇಕಡಾ 8 ರಷ್ಟು ಮಹಿಳೆಯರು ಕೋವಿಡ್ ನಂತರ ದೀರ್ಘಕಾಲದವರೆಗೆ ಲೈಂಗಿಕ ಅಪಸಾಮಾನ್ಯತೆಯನ್ನು ಹೊಂದಿದ್ದರು ಎಂದು ಈ ಅಧ್ಯಯನ ಬಹಿರಂಗಪಡಿಸಿದೆ.

2 /5

2. ಜನನಾಂಗ ಸಮಸ್ಯೆ - ಜನನಾಂಗ ಕುಗ್ಗುವಿಕೆ ಬಹುಶಃ ವೈರಸ್ ಸೋಂಕಿನಿಂದ ಉಂಟಾಗುವ ಅಪಸಾಮಾನ್ಯ ಕ್ರಿಯೆಯ ಪರಿಣಾಮವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಕಿಂಗ್ಸ್ ಕಾಲೇಜಿನ ಅಧ್ಯಯನದಲ್ಲಿ, 3.2 ಪ್ರತಿಶತ ಪುರುಷರು ಜನನಾಂಗ ಕುಗ್ಗುವಿಕೆಯ ಸಮಸ್ಯೆಯನ್ನು ಹೊಂದಿದ್ದರು. ಜನನಾಂಗದಲ್ಲಿ  ಕಂಡುಬರುವ ರಕ್ತನಾಳಗಳ ಎಂಡೋಥೀಲಿಯಲ್ ಕೋಶಗಳಿಗೆ ವೈರಸ್ ಪ್ರವೇಶಿಸಿದಾಗ, ಅದು ಸರಿಯಾದ ರಕ್ತದ ಹರಿವನ್ನು ನಿರ್ಬಂಧಿಸುತ್ತದೆ ಮತ್ತು ಈ ಸಮಸ್ಯೆಯನ್ನು ಉಂಟುಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ. 

3 /5

3. ಲೂಸ್ ಮೋಶನ್ - ಕೆಲವು ಸಂಶೋಧನೆಗಳು ಕರೋನಾ ರೋಗದಿಂದ ಲೂಸ್ ಮೋಶನ್ ಸಮಸ್ಯೆ ಎದುರಾಗಿದೆ ಎಂದು ಹೇಳಿವೆ. ಕೋವಿಡ್‌ನೊಂದಿಗೆ ಲೂಸ್ ಮೋಶನ್ ಸಾಧ್ಯತೆಯು ಹೆಚ್ಚಾಗುತ್ತದೆ ಎಂದು ZOE ಕೋವಿಡ್ ರೋಗಲಕ್ಷಣದ ಅಧ್ಯಯನವು ತೋರಿಸಿದೆ. ಈ ಸಮಸ್ಯೆಯು ವಯಸ್ಸಿಗೆ ಅನುಗುಣವಾಗಿ ಸಂಭವಿಸುತ್ತದೆ. ಇದು ಶೇಕಡಾ 10 ರಷ್ಟು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ, ಆದರೆ 35 ವರ್ಷಕ್ಕಿಂತ ಮೇಲ್ಪಟ್ಟ ಶೇಕಡಾ 30 ರಷ್ಟು ಜನರು ಈ ಸಮಸ್ಯೆಯನ್ನು ಎದುರಿಸಿದ್ದಾರೆ ಎಂದು ಅಧ್ಯಯನ ಹೇಳಿದೆ.

4 /5

4. ಗೊರಕೆಯ ಸಮಸ್ಯೆ - ನಿದ್ರಿಸುವಾಗ ಗೊರಕೆ ಹೊಡೆಯುವುದು ಕರೋನಾದ ಹಲವು ಲಕ್ಷಣಗಳಲ್ಲಿ ಒಂದಾಗಿದೆ. ನೀವು ಇತ್ತೀಚೆಗಷ್ಟೇ ಕರೋನಾದಿಂದ ಚೇತರಿಸಿಕೊಂಡಿದ್ದರೆ, ನೀವು ಮಲಗಿರುವಾಗ ಸಾಕಷ್ಟು ಗೊರಕೆ ಹೊಡೆಯಬಹುದು. ಕಿಂಗ್ಸ್ ಕಾಲೇಜ್ ನಡೆಸಿದ ಅಧ್ಯಯನವು ಶೇ. 7.1 ರಷ್ಟು ಕೋವಿಡ್ ರೋಗಿಗಳಿಗೆ ದೀರ್ಘಕಾಲದವರೆಗೆ ಗೊರಕೆಯ ಸಮಸ್ಯೆಯನ್ನು ನೀಡಿದೆ ಎಂದು ಹೇಳಿದೆ.

5 /5

5. ಇದೂ ಕೂಡ ಒಂದು ಲಕ್ಷಣವಾಗಿದೆ - ಇದಲ್ಲದೆ ಕೊರೋನಾದ ಇನ್ನೂ ಕೆಲ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ. ಇವುಗಳಲ್ಲಿ ಬರ್ಪಿಂಗ್, ಬೆವರುವಿಕೆ, ಮೂಡ್ ಸ್ವಿಂಗ್, ಕೆಂಪು ಅಥವಾ ಗುಲಾಬಿ ಕಣ್ಣುಗಳ ಸಮಸ್ಯೆ, ಇನ್ಕಾಂಟಿನೆನ್ಸ್ ಇತ್ಯಾದಿಗಳು ಇವುಗಳಲ್ಲಿ ಶಾಮೀಲಾಗಿವೆ.