ATMನಿಂದ ಹಣ ತೆಗೆಯುವಾಗ Green Light ಬಗ್ಗೆ ಎಚ್ಚರಿಕೆ ಇರಲಿ: ಇಲ್ಲದಿದ್ದರೆ ಖಾತೆ ಖಾಲಿಯಾಗುತ್ತೆ!

ಪ್ರತಿದಿನ ಎಟಿಎಂ ವಂಚನೆಗೆ ಸಂಬಂಧಿಸಿದ ಕೆಲವು ಹೊಸ ಪ್ರಕರಣಗಳು ಮುನ್ನೆಲೆಗೆ ಬರುತ್ತವೆ. ಹೀಗಾಗಿ ಎಟಿಎಂ ಬಳಸುವಾಗ ತುಂಬಾ ಎಚ್ಚರಿಕೆ ವಹಿಸುವುದು ಮುಖ್ಯ.

ಹೆಚ್ಚುತ್ತಿರುವ ಸೈಬರ್ ಕ್ರೈಮ್ ಪ್ರಕರಣಗಳ ಮಧ್ಯೆ ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಹಿವಾಟಿನ ಜೊತೆಗೆ ಎಟಿಎಂಗಳಿಂದ ಹಣವನ್ನು ಹಿಂಪಡೆಯುವುದು ಸುರಕ್ಷಿತವಲ್ಲ. ಎಟಿಎಂಗಳು ಹಣದ ಸಮಸ್ಯೆಯನ್ನು ಎಷ್ಟು ಸುಲಭವಾಗಿಸಿದೆಯೋ ಅಷ್ಟೇ ಕಷ್ಟವನ್ನೂ ಹೆಚ್ಚಿಸಿದೆ. ಪ್ರತಿದಿನ ಎಟಿಎಂ ವಂಚನೆಗೆ ಸಂಬಂಧಿಸಿದ ಕೆಲವು ಹೊಸ ಪ್ರಕರಣಗಳು ಮುನ್ನೆಲೆಗೆ ಬರುತ್ತವೆ. ಕೆಲವು ಬಾರಿ ಗ್ರಾಹಕರು ಕಳೆದುಕೊಂಡ ಹಣಕ್ಕೆ ಬ್ಯಾಂಕಿನವರು ತಲೆಕೆಡಿಸಿಕೊಳ್ಳುವುದೇ ಇಲ್ಲ. ಹೀಗಾಗಿ ಎಟಿಎಂನಿಂದ ಹಣ ತೆಗೆಯುವಾಗ ತುಂಬಾ ಎಚ್ಚರಿಕೆ ವಹಿಸುವುದು ಅಗತ್ಯ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಇಂತಹ ಪರಿಸ್ಥಿತಿಯಲ್ಲಿ ತುಂಬಾ ಎಚ್ಚರಿಕೆ ವಹಿಸುವುದು ಮುಖ್ಯ. ಇದರಿಂದ ಯಾವುದೇ ರೀತಿಯ ಅಹಿತಕರ ಘಟನೆಯಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು. ಎಟಿಎಂನಿಂದ ಹಣ ಹಿಂಪಡೆಯುವ ಮೊದಲು ನೀವು ವಿತ್ ಡ್ರಾ ಮಾಡುತ್ತಿರುವ ಎಟಿಎಂ ಸುರಕ್ಷಿತವಾಗಿದೆಯೇ ಎಂದು ಪರಿಶೀಲಿಸಬೇಕು. ಎಟಿಎಂನಲ್ಲಿ ದೊಡ್ಡ ಅಪಾಯವೆಂದರೆ ಕಾರ್ಡ್ ಕ್ಲೋನಿಂಗ್. ಸೈಬರ್ ವಂಚಕರು ನಿಮ್ಮ ವಿವರಗಳನ್ನು ಹೇಗೆ ಕದಿಯಬಹುದು ಎಂಬುದನ್ನು ನಾವು ಇಲ್ಲಿ ಹೇಳುತ್ತಿದ್ದೇವೆ.

2 /6

ಎಟಿಎಂ ಯಂತ್ರದಲ್ಲಿ ಕಾರ್ಡ್ ಅಳವಡಿಸಿರುವ ಸ್ಲಾಟ್‌ನಿಂದ ಯಾವುದೇ ಗ್ರಾಹಕರ ಡೇಟಾವನ್ನು ಹ್ಯಾಕರ್‌ಗಳು ಕದಿಯುತ್ತಾರೆ. ಸೈಬರ್ ವಂಚಕರು ಸಾಧನವನ್ನು ಎಟಿಎಂ ಯಂತ್ರದ ಕಾರ್ಡ್ ಸ್ಲಾಟ್‌ನಲ್ಲಿ ಇರಿಸುತ್ತಾರೆ. ಅದು ನಿಮ್ಮ ಕಾರ್ಡ್‌ನ ಸಂಪೂರ್ಣ ಮಾಹಿತಿಯನ್ನು ಸ್ಕ್ಯಾನ್ ಮಾಡುತ್ತದೆ. ಇದರ ನಂತರ ಅವರು ಬ್ಲೂಟೂತ್ ಅಥವಾ ಯಾವುದೇ ಇತರ ವೈರ್‌ಲೆಸ್ ಸಾಧನದಿಂದ ಡೇಟಾವನ್ನು ಕದಿಯುತ್ತಾರೆ.

3 /6

ನಿಮ್ಮ ಡೆಬಿಟ್ ಕಾರ್ಡ್‌ಗೆ ಪೂರ್ಣ ಪ್ರವೇಶ ಹೊಂದಲು ಹ್ಯಾಕರ್ ನಿಮ್ಮ ಪಿನ್ ಸಂಖ್ಯೆಯನ್ನು ಹೊಂದಿರಬೇಕು. ಹೀಗಾಗಿ ಹ್ಯಾಕರ್‌ಗಳು ಪಿನ್ ಸಂಖ್ಯೆಯನ್ನು ಕ್ಯಾಮರಾ ಮೂಲಕ ಟ್ರ್ಯಾಕ್ ಮಾಡಬಹುದು. ಇದನ್ನು ತಪ್ಪಿಸಲು ನೀವು ಎಟಿಎಂನಲ್ಲಿ ನಿಮ್ಮ ಪಿನ್ ಸಂಖ್ಯೆ ನಮೂದಿಸುವಾಗ ಅದನ್ನು ಇನ್ನೊಂದು ಕೈಯಿಂದ ಮರೆಮಾಡಬೇಕು. ಇದರಿಂದ ಸಿಸಿಟಿವಿ ಕ್ಯಾಮೆರಾದಲ್ಲಿ ಅವರಿಗೆ ಪಿನ್ ಹಾಕುವ ನಿಮ್ಮ ದೃಶ್ಯ ಕಾಣಿಸುವುದಿಲ್ಲ.

4 /6

ನೀವು ಎಟಿಎಂಗೆ ಹೋದಾಗ ಎಟಿಎಂ ಯಂತ್ರದ ಕಾರ್ಡ್ ಸ್ಲಾಟ್ ಅನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಎಟಿಎಂ ಕಾರ್ಡ್ ಸ್ಲಾಟ್‌ನಲ್ಲಿ ಏನಾದರೂ ಟ್ಯಾಂಪರಿಂಗ್ ಮಾಡಲಾಗಿದೆ ಎಂದು ನೀವು ಭಾವಿಸಿದರೆ ಅಥವಾ ಸ್ಲಾಟ್ ಸಡಿಲವಾಗಿದ್ದರೆ ಅಥವಾ ಇನ್ನಾವುದೇ ದೋಷವಿದ್ದರೆ ಅದನ್ನು ಬಳಸಲೇಬಾರದು.

5 /6

ಕಾರ್ಡ್ ಸ್ಲಾಟ್‌ಗೆ ATMನ್ನು ಸೇರಿಸುವಾಗ ಅದರಲ್ಲಿರುವ ಬೆಳಕಿಗೆ ಗಮನ ಕೊಡಿ. ಸ್ಲಾಟ್‌ನಲ್ಲಿ ಗ್ರೀನ್ ಲೈಟ್ ಆನ್ ಆಗಿದ್ದರೆ ಎಟಿಎಂ ಸುರಕ್ಷಿತವಾಗಿರುತ್ತದೆ. ಆದರೆ ಅದರಲ್ಲಿ ಕೆಂಪು ಅಥವಾ ಯಾವುದೇ ಬೆಳಕು ಇಲ್ಲದಿದ್ದರೆ ಎಟಿಎಂ ಬಳಸಬೇಡಿ. ಇದು ಯಾವುದೋ ತಪ್ಪಿನ ಸಂಕೇತವಾಗಿರಬಹುದು.

6 /6

ನೀವು ಹ್ಯಾಕರ್‌ಗಳ ಬಲೆಗೆ ಬಿದ್ದಿದ್ದೀರಿ ಮತ್ತು ಬ್ಯಾಂಕ್ ಸಹ ಕ್ಲೋಸ್ ಆಗಿದೆ ಎಂದು ನೀವು ಭಾವಿಸಿದರೆ ಕೂಡಲೇ ಪೊಲೀಸರನ್ನು ಸಂಪರ್ಕಿಸಬೇಕು. ಆದಷ್ಟು ಬೇಗ ಪೊಲೀಸರಿಗೆ ಈ ಮಾಹಿತಿ ನೀಡಿ ಅಲ್ಲಿನ ಬೆರಳಚ್ಚು ಪಡೆಯಬಹುದು. ನಿಮ್ಮ ಸುತ್ತಲೂ ಕೆಲಸ ಮಾಡುವ ಬ್ಲೂಟೂತ್ ಸಂಪರ್ಕವನ್ನು ಹೊಂದಿರುವವರನ್ನು ಸಹ ನೀವು ನೋಡಬಹುದು. ಆಗ ಆ ವಂಚಕರನ್ನು ಹುಡುಕುವುದು ಸುಲಭವಾಗುತ್ತದೆ.