COVD-19: ಚೀನಾ-ಜಪಾನ್‌ನಲ್ಲಿ ಕೊರೊನಾ ಬಗ್ಗೆ ಆಕ್ರೋಶ, ಅಮೆರಿಕದಲ್ಲಿ ಉದ್ವಿಗ್ನತೆ, ಭಾರತದ ಪರಿಸ್ಥಿತಿ ಹೀಗಿದೆ

Corona Cases in China: ಚೀನಾದಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಪ್ರತಿನಿತ್ಯ ಲಕ್ಷಗಟ್ಟಲೆ ಜನರು ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದು, 1500-2000 ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

ನವದೆಹಲಿ: ಕೊರೊನಾ ವೈರಸ್ ಮಾಹಾಮಾರಿ ಮತ್ತೆ ಪ್ರಪಂಚದಾದ್ಯಂತ ಅಬ್ಬರ ಶುರುಮಾಡಿದೆ. ಚೀನಾದಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಅಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ.  ಪ್ರತಿನಿತ್ಯ ಲಕ್ಷಗಟ್ಟಲೆ ಜನರು ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದು, 1500-2000 ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಚೀನಾಕ್ಕೆ ಸಮೀಪವಿರುವ ತೈವಾನ್, ಜಪಾನ್ ಮತ್ತು ಹಾಂಗ್ ಕಾಂಗ್‌ನಲ್ಲೂ ಪರಿಸ್ಥಿತಿ ಕೆಟ್ಟದಾಗಿದೆ. ಕೊರೊನಾದಿಂದ ನಲುಗುತ್ತಿರುವ ದೇಶಗಳ ಮಾಹಿತಿ ಇಲ್ಲಿದೆ ನೋಡಿ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಚೀನಾದಲ್ಲಿ ಪ್ರತಿದಿನ ಒಂದರಿಂದ ಒಂದೂವರೆ ಲಕ್ಷ ಹೊಸ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇದು ವಿಶ್ವದ ಯಾವುದೇ ದೇಶಕ್ಕಿಂತ ಹೆಚ್ಚು. ಸಾವಿನ ಸಂಖ್ಯೆಯೂ ತುಂಬಾ ಹೆಚ್ಚಾಗಿದೆ. ಇನ್ನು 3 ತಿಂಗಳಲ್ಲಿ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆ 10 ಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ.

2 /7

ಜಪಾನ್‍ನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿವೆ. ಅಲ್ಲಿ ನಿತ್ಯ 70 ರಿಂದ 1 ಲಕ್ಷ ಹೊಸ ರೋಗಿಗಳು ಪತ್ತೆಯಾಗುತ್ತಿದ್ದಾರೆ. ಮಂಗಳವಾರ ಸುಮಾರು 1.85 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದು, 231 ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ 53 ಸಾವಿರದ 730 ಜನರು ಅಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

3 /7

ದಕ್ಷಿಣ ಕೊರಿಯಾದಲ್ಲಿ ಮಂಗಳವಾರ 87 ಸಾವಿರದ 559 ಜನರು ಸೋಂಕಿಗೆ ಒಳಗಾಗಿದ್ದು, 56 ರೋಗಿಗಳು ಸಾವನ್ನಪ್ಪಿದ್ದಾರೆ. ಇಲ್ಲಿ ಇದುವರೆಗೆ 31 ಸಾವಿರದ 490 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.

4 /7

ಜಗತ್ತಿನ ಸುಂದರ ದೇಶ ಫ್ರಾನ್ಸ್‍ನಲ್ಲಿ ಮಂಗಳವಾರ 71 ಸಾವಿರದ 212 ಹೊಸ ಪ್ರಕರಣಗಳು ವರದಿಯಾಗಿದ್ದು, 131 ಮಂದಿ ಸಾವನ್ನಪ್ಪಿದ್ದಾರೆ. ಈ ದೇಶದಲ್ಲಿ ಇದುವರೆಗೆ 3.89 ಕೋಟಿ ಜನರು ಕೊರೊನಾ ವೈರಸ್‍ಗೆ ತುತ್ತಾಗಿದ್ದಾರೆ.  3.76 ಕೋಟಿ ಮಂದಿ ಚೇತರಿಸಿಕೊಂಡು ಮನೆಗೆ ತೆರಳಿದ್ದು, 1.60 ಲಕ್ಷ ಜನರು ಮೃತಪಟ್ಟಿದ್ದಾರೆ.

5 /7

ಜರ್ಮನಿಯಲ್ಲಿ ಮಂಗಳವಾರ 52 ಸಾವಿರದ 528 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 201 ಜನರು ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ಈ ದೇಶದಲ್ಲಿ 3.70 ಕೋಟಿ ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದರೆ, ಒಟ್ಟು ಸಾವಿನ ಸಂಖ್ಯೆ 1.60 ಲಕ್ಷ ಆಗಿದೆ.

6 /7

ಜಗತ್ತಿನ ಸೂಪರ್ ಪವರ್ ಅಮೆರಿಕದಲ್ಲಿ ಪ್ರತಿದಿನ 20-30 ಸಾವಿರ ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ಮಂಗಳವಾರ 25 ಸಾವಿರದ 714 ಹೊಸ ರೋಗಿಗಳು ಪತ್ತೆಯಾಗಿದ್ದಾರೆ. ಈ ದೇಶದಲ್ಲಿ ಇದುವರೆಗೆ 10 ಕೋಟಿ 18 ಲಕ್ಷ ಜನರು ಕೊರೊನಾ ಪೀಡಿತರಾಗಿದ್ದಾರೆ. ಸಾವಿನ ಸಂಖ್ಯೆ 11 ಲಕ್ಷ 13 ಸಾವಿರ ದಾಟಿದೆ.

7 /7

ಭಾರತದಲ್ಲಿ ಮಂಗಳವಾರ 103 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಆದರೆ ಸೋಂಕಿನಿಂದ ಯಾರೂ ಸಾವನ್ನಪ್ಪಿಲ್ಲ. ಭಾರತದಲ್ಲಿ 4527 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 4.46 ಕೋಟಿ ಜನರು ಕೊರೊನಾಗೆ ತುತ್ತಾಗಿದ್ದು, 5.30 ಲಕ್ಷ ಜನರು ಸಾವನ್ನಪ್ಪಿದ್ದಾರೆ.