ಚಳಿಗಾಲದಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಬೀಟ್ರೂಟ್

Beetroot Health Benefits In Winter: ಚಳಿಗಾಲದಲ್ಲಿ ಬೀಟ್ರೂಟ್ ಸೇವನೆಯಿಂದ ಸಿಗುವ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿದರೆ ತಪ್ಪದೇ ಸೇವಿಸುತ್ತೀರಿ.

Beetroot Health Benefits In Winter: ಹಣ್ಣು-ತರಕಾರಿಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಎಲ್ಲಾ ಋತುಗಳಲ್ಲೂ ಹಲವು ರೀತಿಯ ಹಣ್ಣು-ತರಕಾರಿಗಳನ್ನು ಕಾಣಬಹುದು. ಅವುಗಳಲ್ಲಿ ಕೆಲವು ಉತ್ತಮ ಆರೋಗ್ಯದ ಗಣಿಗಳಾಗಿವೆ. ಅಂತಹ ತರಕಾರಿಗಳಲ್ಲಿ ಬೀಟ್ರೂಟ್ ಸಹ ಒಂದು. ಬೀಟ್ರೂಟ್ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿರಬಹುದು. ಆದರೆ, ಚಳಿಗಾಲದಲ್ಲಿ ಬೀಟ್ರೂಟ್ ತಿನ್ನುವುದರಿಂದ ಸಿಗುವ ಅದ್ಭುತ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಬೀಟ್ರೂಟ್ ದೇಹವನ್ನು ಡೀಟಾಕ್ಸ್ ಮಾಡುತ್ತದೆ: ಉತ್ತಮ ಆರೋಗ್ಯಕ್ಕೆ ದೇಹವನ್ನು ಡೀಟಾಕ್ಸ್ ಮಾಡುವುದು ಬಹಳ ಮುಖ್ಯ. ನಿಯಮಿತವಾಗಿ ಬೀಟ್ರೂಟ್ ಸೇವನೆಯು ದೇಹವನ್ನು ಡೀಟಾಕ್ಸ್ ಮಾಡುತ್ತದೆ. 

2 /5

ಬಿಪಿ ನಿಯಂತ್ರಣ: ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರು ಈ ಋತುವಿನಲ್ಲಿ ಬೀಟ್ರೂಟ್ ಸೇವನೆಯಿಂದ ಸುಲಭವಾಗಿ ಬಿಪಿ ನಿಯಂತ್ರಿಸಬಹುದು. ಬೀಟ್ರೂಟ್ ಒಂದು ಸೂಪರ್‌ಫುಡ್‌ ಆಗಿದ್ದು ಇದರಲ್ಲಿ ಹೇರಳವಾಗಿ ಕಂಡು ಬರುವ ಪೊಟ್ಯಾಸಿಯಮ್ ರಕ್ತದ ಹರಿವನ್ನು ಸರಾಗವಾಗಿಸಿ ಬಿಪಿಯನ್ನು ನಿಯಂತ್ರಿಸುತ್ತದೆ.

3 /5

ಮೆದುಳಿನ ಆರೋಗ್ಯಕ್ಕೆ ಪ್ರಯೋಜನಕಾರಿ: ಬೀಟ್ರೂಟ್ ಸೇವನೆಯು ಮೆದುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ನಿಯಮಿತವಾಗಿ ಬೀಟ್ರೂಟ್ ಸೇವಿಸುವುದರಿಂದ ಮೆದುಳು ಚುರುಕಾಗಿ ಕೆಲಸ ಮಾಡುತ್ತದೆ ಎನ್ನಲಾಗುತ್ತದೆ.

4 /5

ಉತ್ತಮ ಜೀರ್ಣಕ್ರಿಯೆ : ಕೆಲವರಿಗೆ ಯಾವುದೇ ಆಹಾರ ಸೇವನೆಯು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಉಂಟು ಮಾಡುತ್ತದೆ. ಆದರೆ, ಬೀಟ್ರೂಟ್ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಇರಲ್ಲಿರುವ ಫೈಬರ್ ಮತ್ತು ಪ್ರೋಬಯಾಟಿಕ್ಗಳು ​​ಉದರ ಆರೋಗ್ಯಕ್ಕೆ ವರದಾನವಿದ್ದಂತೆ ಎಂದು ಪರಿಗಣಿಸಲಾಗಿದೆ.

5 /5

ಕ್ಯಾನ್ಸರ್ ಅಪಾಯ ಕಡಿಮೆ: ಬೀಟ್ರೂಟ್ ನಲ್ಲಿರುವ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ದೇಹದ ಯಾವುದೇ ಭಾಗದಲ್ಲಿ ಊತದ ಸಮಸ್ಯೆಯನ್ನು ನಿವಾರಿಸುತ್ತದೆ. ಮಾತ್ರವಲ್ಲ, ಬೀಟ್ರೂಟ್ ಸೇವನೆಯಿಂದ ಕ್ಯಾನ್ಸರ್ ಅಪಾಯವೂ ಕಡಿಮೆ ಎಂದು ಹೇಳಲಾಗುತ್ತದೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ತಪ್ಪದೇ ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.