ಈ 3 ಮನೆಮದ್ದುಗಳನ್ನು ಪ್ರಯತ್ನಿಸುವ ಮೂಲಕ ದೇಹದ ಕೊಬ್ಬನ್ನು ಕಡಿಮೆ ಮಾಡಬಹುದು. ನಿಮ್ಮ ಕಠಿಣ ಪರಿಶ್ರಮದ ಹೊರತಾಗಿಯೂ, ನೀವು ತೂಕವನ್ನು ಕಳೆದುಕೊಳ್ಳುತ್ತಿಲ್ಲವೆಂದಾದರೆ ಈ ಮೂರು ಸುಲಭ ವಿಧಾನಗಳ ಸಹಾಯದಿಂದ ತೂಕವನ್ನು ಕಡಿಮೆ ಮಾಡಬಹುದು.
ಬೆಂಗಳೂರು : ಅನೇಕ ಜನರು ತಮ್ಮ ದೇಹದಲ್ಲಿ ಹೆಚ್ಚುತ್ತಿರುವ ಕೊಬ್ಬಿನಿಂದ ತುಂಬಾ ಮುಜುಗರಗೊಳ್ಳುತ್ತಾರೆ. ಅವರಿಗೆ ಕೆಲಸ ಮಾಡಲು ಸಹ ಕಷ್ಟವಾಗುತ್ತದೆ. ದೇಹದಲ್ಲಿರುವ ಅತಿಯಾದ ಕೊಬ್ಬಿನಿಂದಾಗಿ, ಕಿರಿ ಕಿರಿಗೆ ಒಳಪಡುತ್ತಾರೆ. ಹೆಚ್ಚುವರಿ ಕೊಬ್ಬನ್ನು ಕಳೆದುಕೊಳ್ಳುವುದು ಒಂದು ಸವಾಲು. ಇದಕ್ಕಾಗಿ ಜನರ ನಾನಾ ಮಾರ್ಗಗಳನ್ನು ಅನುಸರಿಸುತ್ತಾರೆ. ಆಹಾರಕ್ರಮದಿಂದ ಹಿಡಿದು ತೀವ್ರವಾದ ವ್ಯಾಯಾಮಗಳು, ಮನೆಮದ್ದುಗಳವರೆಗೆ ವಿವಿಧ ರೀತಿಯ ವ್ಯಾಯಾಮಗಳ ಮೊರೆ ಹೋಗುತ್ತಾರೆ. ಈ 3 ಮನೆಮದ್ದುಗಳನ್ನು ಪ್ರಯತ್ನಿಸುವ ಮೂಲಕ ದೇಹದ ಕೊಬ್ಬನ್ನು ಕಡಿಮೆ ಮಾಡಬಹುದು. ನಿಮ್ಮ ಕಠಿಣ ಪರಿಶ್ರಮದ ಹೊರತಾಗಿಯೂ, ನೀವು ತೂಕವನ್ನು ಕಳೆದುಕೊಳ್ಳುತ್ತಿಲ್ಲವೆಂದಾದರೆ ಈ ಮೂರು ಸುಲಭ ವಿಧಾನಗಳ ಸಹಾಯದಿಂದ ತೂಕವನ್ನು ಕಡಿಮೆ ಮಾಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1.ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದು 2- ಆಹಾರ ಸೇವಿಸಿದ ನಂತರ ಮಲಗುವುದು 3- ಅಸಮರ್ಪಕ ನಿದ್ರೆ ಮತ್ತು ಕರಿದ ಆಹಾರ 4- ಮದ್ಯ ಮತ್ತು ಧೂಮಪಾನ ಇವುಗಳು ದೇಹ ತುಕ ಹೆಚ್ಚಾಗಲು ಇರುವ ಪ್ರಮುಖ ಕಾರಣಗಳು.
ಪುದೀನದಲ್ಲಿರುವ ಆಂಟಿ ಆಕ್ಸಿಡೆಂಟ್ಗಳು ಕೊಬ್ಬು ಕರಗಿಸುವಲ್ಲಿ ಸಹಾಯ ಮಾಡುತ್ತದೆ. ಮಲಗುವ ಮೊದಲು ಪ್ರತಿದಿನ ಪುದೀನಾ ಎಲೆಗಳನ್ನು ಅಗಿಯಬಹುದು ಅಥವಾ ಮಲಗುವ ಮೊದಲು ಪುದೀನಾ ಚಹಾವನ್ನು ಕುಡಿಯಬಹುದು. ಅದರ ಎಲೆಗಳನ್ನು ಪುದೀನ ಚಟ್ನಿ ಅಥವಾ ಮೊಸರು ಬಜ್ಜಿಯಲ್ಲಿ ಕೂಡಾ ಬಳಸಬಹುದು.
ದಾಲ್ಚಿನ್ನಿಯನ್ನು ಅನೇಕ ರೂಪಗಳಲ್ಲಿ ಬಳಸಲಾಗುತ್ತದೆ, ಚರ್ಮದ ಆರೈಕೆಗಾಗಿ ಅಥವಾ ತೂಕ ನಷ್ಟಕ್ಕೆ ದಾಲ್ಚಿನ್ನಿಯನ್ನು ಬಳಸಲಾಗುತ್ತದೆ. ದಾಲ್ಚಿನ್ನಿಯಲ್ಲಿರುವ ಗುಣಲಕ್ಷಣಗಳು ಚಯಾಪಚಯವನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ, ದಾಲ್ಚಿನ್ನಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್ ಮತ್ತು ಆ್ಯಂಟಿಬಯೋಟಿಕ್ ಗುಣಗಳು ದಾಲ್ಚಿನ್ನಿ ಟೀಯನ್ನು ಡಿಟಾಕ್ಸ್ ಪಾನೀಯವನ್ನಾಗಿ ಮಾಡಲು ಕೆಲಸ ಮಾಡುತ್ತವೆ. ಇದು ನಿಮ್ಮ ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡಲು ಮತ್ತು ತೂಕವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ಮಲಗುವ ಮುನ್ನ ಈ ಚಹಾವನ್ನು ಸೇವಿಸುವುದರಿಂದ ಅದ್ಭುತ ಪ್ರಯೋಜನ ಸಿಗುತ್ತದೆ.
ರಾತ್ರಿ ಮಲಗುವ ಮೊದಲು ಅರಿಶಿನವನ್ನು ಹಾಲಿನೊಂದಿಗೆ ಬೆರೆಸಿ ಕುಡಿಯಲು ಸಲಹೆ ನೀಡಲಾಗುತ್ತದೆ. ಏಕೆಂದರೆ ಅದು ನಿಮಗೆ ಚೆನ್ನಾಗಿ ನಿದ್ದೆ ಮಾಡಲು ಸಹಾಯ ಮಾಡುತ್ತದೆ. ಆದರೆ ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಅರಿಶಿನ ಹಾಲು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಇದರಿಂದಾಗಿ ನಿಮ್ಮ ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದಿಲ್ಲ. ಅರಿಶಿನದಲ್ಲಿರುವ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.