ಮಳೆಗಾಲದಲ್ಲಿ ಈ ತರಕಾರಿಗಳನ್ನು ಸೇವಿಸಿದರೆ ಹತ್ತಿರವೂ ಸುಳಿಯುವುದಿಲ್ಲ ರೋಗಗಳು

ಆರೋಗ್ಯಕರವಾಗಿರಲು, ಈ ಋತುವಿನಲ್ಲಿ ತಿನ್ನುವ ತರಕಾರಿಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ತಜ್ಞರ ಪ್ರಕಾರ ಆಯ್ದ ಕೆಲವು ತರಕಾರಿಗಳನ್ನು ಸೇವಿಸುವುದು ಒಳ್ಳೆಯದು. 
 

ಬೆಂಗಳೂರು : ಮಳೆಗಾಲ ಎಂದರೆ ಎಲ್ಲರಿಗೂ ಇಷ್ಟ. ಮಳೆಗಾಲ ಬಂತೆಂದರೆ ಸಾಕು ನಾನಾ ತರಹದ ಪದಾರ್ಥಗಳನ್ನು ತಿನ್ನಲು ಮನಸ್ಸು ಚಡಪಡಿಸತೊಡಗುತ್ತದೆ. ಆದರೆ ಮಳೆಗಾಲವು  ಅನೇಕ ರೋಗಗಳನ್ನು ಕೂಡಾ ಹೊತ್ತು ತರುತ್ತದೆ ಅನ್ನುವುದನ್ನೂ ಮರೆಯುವಂತಿಲ್ಲ.  ಆರೋಗ್ಯಕರವಾಗಿರಲು, ಈ ಋತುವಿನಲ್ಲಿ ತಿನ್ನುವ ತರಕಾರಿಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ತಜ್ಞರ ಪ್ರಕಾರ ಆಯ್ದ ಕೆಲವು ತರಕಾರಿಗಳನ್ನು ಸೇವಿಸುವುದು ಒಳ್ಳೆಯದು. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ಮಳೆಗಾಲದಲ್ಲಿ ಸೋರೆಕಾಯಿ ತಿನ್ನುವುದು ಒಳ್ಳೆಯದು. ಇದು ಜೀರ್ಣಕ್ರಿಯೆಯನ್ನು ಉತ್ತಮವಾಗಿಡುತ್ತದೆ. ಸೋರೆಕಾಯಿಯಲ್ಲಿ ಕಬ್ಬಿಣ, ವಿಟಮಿನ್ ಬಿ ಮತ್ತು ಸಿ ಸಮೃದ್ಧವಾಗಿದೆ. ಇದು ಮಳೆಗಾಲದಲ್ಲಿ ದೇಹವನ್ನು ಸೋಂಕಿನಿಂದ ರಕ್ಷಿಸುತ್ತದೆ.  

2 /4

ಹಾಗಲಕಾಯಿ ತಿನ್ನುವುದು ಮಳೆಗಾಲದಲ್ಲಿ ಹೆಚ್ಚು ಪ್ರಯೋಜನಕಾರಿ. ವಿಟಮಿನ್ ಸಿ ಸಮೃದ್ಧವಾಗಿರುವ ಹಾಗಲಕಾಯಿಯು ಪ್ರತಿ ಋತುವಿನಲ್ಲಿ ದೇಹವನ್ನು ಫಿಟ್ ಆಗಿ ಇಡುತ್ತದೆ. ಇದರಲ್ಲಿರುವ ಆಂಟಿವೈರಲ್ ಗುಣಲಕ್ಷಣಗಳು ಮಳೆಯಿಂದ ಉಂಟಾಗುವ ಸೋಂಕುಗಳಿಂದ ರಕ್ಷಿಸುತ್ತದೆ.

3 /4

ಆಲೂಗಡ್ಡೆ, ಸಿಹಿ ಗೆಣಸುಗಳಂತಹ ಗೆಡ್ಡೆಗಳನ್ನು ಮಳೆಗಾಲದಲ್ಲಿ ತಿನುವುದು ಉತ್ತಮ ಎಂದು ಹೇಳಲಾಗುತ್ತದೆ. ಇದು ಆರೋಗ್ಯಕ್ಕೆ ಯಾವುದೇ ಹಾನಿ ಉಂಟು ಮಾಡುವುದಿಲ್ಲ. ಮಳೆಗಾಲದಲ್ಲಿ ಗಡ್ಡೆಯು ದೇಹದಲ್ಲಿ ಬೆಳೆಯುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಈ ಋತುವಿನಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಗೆಡ್ಡೆಗಳನ್ನು ಸೇವಿಸಬಹುದು.

4 /4

ಮಳೆಗಾಲದಲ್ಲಿ ಬೆಂಡೆಕಾಯಿ ತಿನ್ನುವುದು ತುಂಬಾ ಪ್ರಯೋಜನಕಾರಿ. ಈ ಕಾರಣದಿಂದಾಗಿ, ದೇಹದ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಉಳಿಯುತ್ತದೆ. ಇದಲ್ಲದೆ, ಬೆಂಡೆಕಾಯಿ ಸೇವನೆಯಿಂದ ಕಣ್ಣುಗಳಿಗೆ ಸಂಬಂಧಿಸಿದ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತದೆ.  ಇದರಿಂದ ಮೂಳೆಗಳು ಗಟ್ಟಿಯಾಗಿರುತ್ತವೆ.    ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.