Financial Year End: 2022-2023ರ ಆರ್ಥಿಕ ವರ್ಷ ಕೊನೆಗೊಳ್ಳಲು ಇನ್ನೊಂದು ವಾರವಷ್ಟೇ ಬಾಕಿ ಇದೆ. ಹೊಸ ಆರ್ಥಿಕ ವರ್ಷ ಆರಂಭವಾಗುವ ಮೊದಲು ಕೆಲವು ಕೆಲಸಗಳನ್ನು ಪೂರ್ಣಗೊಳಿಸುವುದು ತುಂಬಾ ಅಗತ್ಯ. ನೀವೂ ಕೂಡ ಈ ಕೆಲಸಗಳನ್ನು ಪೂರ್ಣಗೊಳಿಸಲು ಮರೆತಿದ್ದರೆ, ಮಾರ್ಚ್ 31ರ ಮೊದಲು ತಪ್ಪದೇ ಈ ಕೆಲಸಗಳನ್ನು ಪೂರ್ಣಗೊಳಿಸಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
31 ಮಾರ್ಚ್ 2023ರ ಮೊದಲು ತಪ್ಪದೇ ನಿಮ್ಮ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡಿ. ವಾಸ್ತವವಾಗಿ, 30 ಸೆಪ್ಟೆಂಬರ್ 2021 ರೊಳಗೆ ಈ ಕೆಲಸವನ್ನು ಪೂರ್ಣಗೊಳಿಸಬೇಕಿತ್ತು. ಬಳಿಕ ಈ ದಿನಾಂಕವನ್ನು 31 ಮಾರ್ಚ್ 2023ರವರೆಗೆ ವಿಸ್ತರಿಸಲಾಗಿದೆ. ನಿಗದಿತ ದಿನಾಂಕದೊಳಗೆ ಈ ಕೆಲಸವನ್ನು ಪೂರ್ಣಗೊಳಿಸದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳಬಹುದು.
ನವೀಕರಿಸಿದ ಐಟಿಆರ್ ಫೈಲ್ ಮಾಡಲು ಮಾರ್ಚ್ 31, 2023ರವರೆಗೆ ಸಮಯವಿದೆ. ಅಷ್ಟರೊಳಗೆ ಮಿಸ್ ಮಾಡದೆ ಐಟಿಆರ್ ಫೈಲ್ ಮಾಡಿ.
ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸುವವರು ಮಾರ್ಚ್ 31 ರೊಳಗೆ ಡಿಮ್ಯಾಟ್ ಖಾತೆಯಲ್ಲಿ ನಾಮಿನಿಯ ಹೆಸರನ್ನು ಸೇರಿಸಬೇಕಾಗುತ್ತದೆ. ನಿಗದಿತ ದಿನಾಂಕದೊಳಗೆ ಇದನ್ನು ಮಾಡದಿದ್ದರೆ, ನಿಮ್ಮ ಡಿಮ್ಯಾಟ್ ಖಾತೆಯನ್ನು ಫ್ರೀಜ್ ಮಾಡಲಾಗುತ್ತದೆ.
ನೀವು ಎಲ್‌ಐಸಿಯ ಪಿಎಂ ವಂದನಾ ಯೋಜನೆಯಲ್ಲಿ ಹೂಡಿಕೆ ಮಾಡಲು ಮಾರ್ಚ್ 31, 2023 ರವರೆಗೆ ಕೊನೆಯ ಅವಕಾಶವಿದೆ. ಇದರ ನಂತರ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ.
ನೀವು ಹೆಚ್ಚಿನ ಪ್ರೀಮಿಯಂನೊಂದಿಗೆ ಎಲ್‌ಐಸಿ ಪಾಲಿಸಿಯ ಮೇಲೆ ತೆರಿಗೆ ಕಡಿತದ ಲಾಭವನ್ನು ಪಡೆಯಲು ಬಯಸಿದರೆ, ನಂತರ ಅದನ್ನು ಮಾರ್ಚ್ 31, 2023 ರ ಮೊದಲು ಚಂದಾದಾರರಾಗಿರಬೇಕು.