ಗುರು ಗ್ರಹ ಮಾರ್ಚ್ 31 ರಂದು ಮೀನ ರಾಶಿಯಲ್ಲಿ ಅಸ್ತಮಿಸಲಿದ್ದಾನೆ. ನಂತರ ಏಪ್ರಿಲ್ 30 ರಂದು ಮತ್ತೆ ಉದಯಿಸುತ್ತಾನೆ. ಈ ಒಂದು ತಿಂಗಳ ಸಮಯವು ಕೆಲವು ರಾಶಿಯವರಿಗೆ ಬಹಳ ಕಷ್ಟದಾಯಕವಾಗಿರುತ್ತದೆ.
ಬೆಂಗಳೂರು : ವೈದಿಕ ಜ್ಯೋತಿಷ್ಯದಲ್ಲಿ, ಗುರುವನ್ನು ಅದೃಷ್ಟ, ಮದುವೆ ಮತ್ತು ಸಂತೋಷದ ಅಂಶ ಎಂದು ಹೇಳಲಾಗುತ್ತದೆ. 12 ವರ್ಷಗಳ ನಂತರ, ದೇವಗುರು ಬೃಹಸ್ಪತಿ ತನ್ನ ಸ್ವ ರಾಶಿಯಾಗಿರುವ ಮೀನದಲ್ಲಿದ್ದಾರೆ. ಆದರೆ ಗುರು ಗ್ರಹ ಮಾರ್ಚ್ 31 ರಂದು ಮೀನ ರಾಶಿಯಲ್ಲಿ ಅಸ್ತಮಿಸಲಿದ್ದಾನೆ. ನಂತರ ಏಪ್ರಿಲ್ 30 ರಂದು ಮತ್ತೆ ಉದಯಿಸುತ್ತಾನೆ. ಈ ಒಂದು ತಿಂಗಳ ಸಮಯವು ಕೆಲವು ರಾಶಿಯವರಿಗೆ ಬಹಳ ಕಷ್ಟದಾಯಕವಾಗಿರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಮಿಥುನ ರಾಶಿ : ಗುರುಗ್ರಹ ಅಸ್ತವಾಗುತ್ತಿರುವುದು ಮಿಥುನ ರಾಶಿಯವರ ಕೆಲಸದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದರಲ್ಲೂ ವ್ಯಾಪಾರಸ್ಥರು ಜಾಗರೂಕರಾಗಿರಬೇಕು. ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು. ವೈವಾಹಿಕ ಜೀವನದಲ್ಲೂ ತೊಂದರೆಗಳು ಉಂಟಾಗಬಹುದು. ಚರ್ಚೆಗೆ ಗ್ರಾಸವಾಗದಿರುವುದು ಉತ್ತಮ.
ಕನ್ಯಾ ರಾಶಿ : ಗುರುವಿನ ಅಸ್ತ ಅವಸ್ಥೆಯು ಕನ್ಯಾ ರಾಶಿಯವರಿಗೆ ಬಹಳಷ್ಟು ಹಾನಿಯನ್ನುಂಟುಮಾಡುತ್ತದೆ. ವೈವಾಹಿಕ ಜೀವನದಲ್ಲಿ ಸಮಸ್ಯೆ ಉಂಟಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಎಚ್ಚರಿಕೆಯಿಂದ ಮಾತನಾಡಿ. ಸಮಸ್ಯೆಗಳು ನಿಮ್ಮನ್ನು ಸುತ್ತುವರೆದಿರುತ್ತವೆ. ಏನೇ ಕೆಲಸ ಮಾಡಬೇಕಿದ್ದರೂ ಏನೇ ಮಾತನಾಡಬೇಕಿದ್ದರೂ ಬಹಳ ಯೋಚಿಸಿ ಮುಂದುವರೆಯಬೇಕು.
ಧನು ರಾಶಿ : ಗುರುವಿನ ಅಸ್ತಮದಿಂದ ಧನು ರಾಶಿಯವರಿಗೆ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ತಾಯಿಯ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ.
ಕುಂಭ ರಾಶಿ : ಗುರುವಿನ ಅಸ್ತ ಅವಸ್ಥೆಯಿಂದ ಕುಂಭ ರಾಶಿಯವರ ಮಾತಿನಲ್ಲಿ ವೇಗ ಕಂಡುಬರುವುದು. ಮಾತಿನಲ್ಲಿ ಸಂಯಮವನ್ನು ಇಟ್ಟುಕೊಳ್ಳುವುದು ಉತ್ತಮ. ಆತ್ಮವಿಶ್ವಾಸದ ಕೊರತೆ ಕಾಡಬಹುದು. ಯಾವುದೇ ಕಾರಣಕ್ಕೂ ಹಣದ ವ್ಯವಹಾರ ಬೇಡವೇ ಬೇಡ.
ಮೀನ ರಾಶಿ : ಗುರುವು ಮೀನ ರಾಶಿಯಲ್ಲಿಯೇ ಅಸ್ತಮಿಸುತ್ತಿರುವುದರಿಂದ ಇದು ಮೀನ ರಾಶಿಯವರ ಮೇಲೆ ಉತ್ತಮ ಪರಿಣಾಮ ಬೀರುವುದಿಲ್ಲ. ವೃತ್ತಿ ಜೀವನದಲ್ಲಿ ಸಮಸ್ಯೆಗಳು ಬರಬಹುದು. ಆರ್ಥಿಕ ಸ್ಥಿತಿಯೂ ಚೆನ್ನಾಗಿರುವುದಿಲ್ಲ. ಹಣಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)