Cholesterol Control: ಇದನ್ನು ಅತಿ ಜಾಸ್ತಿ ಸೇವಿಸಿದರೆ ಜೀವಕ್ಕೆ ಅಪಾಯ, ಕಾರಣ ಇಲ್ಲಿದೆ

Cholesterol Control: ಯಾವುದೇ ಪ್ರೋಟೀನ್ ಶೇಕ್ ದೇಹಕ್ಕೆ ನೀಡದಷ್ಟು ಶಕ್ತಿಯನ್ನು ತುಪ್ಪ ನೀಡುತ್ತದೆ. ನಮ್ಮ ಮನೆಗಳಲ್ಲಿ ಪ್ರತಿನಿತ್ಯ ಸಾಕಷ್ಟು ತುಪ್ಪವನ್ನು ಸೇವಿಸಲಾಗುತ್ತದೆ. ತುಪ್ಪವು ಅತಿ ಹೆಚ್ಚು ಕೊಬ್ಬನ್ನು ಹೊಂದಿರುತ್ತದೆ ಎಂಬುದು ನಮ್ಮೆಲ್ಲರಿಗೂ ತಿಳಿದ ಸಂಗತಿಯಾಗಿದೆ. 

Cholesterol Control: ಯಾವುದೇ ಪ್ರೋಟೀನ್ ಶೇಕ್ ದೇಹಕ್ಕೆ ನೀಡದಷ್ಟು ಶಕ್ತಿಯನ್ನು ತುಪ್ಪ ನೀಡುತ್ತದೆ. ನಮ್ಮ ಮನೆಗಳಲ್ಲಿ ಪ್ರತಿನಿತ್ಯ ಸಾಕಷ್ಟು ತುಪ್ಪವನ್ನು ಸೇವಿಸಲಾಗುತ್ತದೆ. ತುಪ್ಪವು ಅತಿ ಹೆಚ್ಚು ಕೊಬ್ಬನ್ನು ಹೊಂದಿರುತ್ತದೆ ಎಂಬುದು ನಮ್ಮೆಲ್ಲರಿಗೂ ತಿಳಿದ ಸಂಗತಿಯಾಗಿದೆ. ಆದರೆ ತುಪ್ಪವು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಕೆಟ್ಟ ಕೊಲೆಸ್ಟ್ರಾಲ್ ತುಂಬಾ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ರಕ್ತನಾಳಗಳಲ್ಲಿ ಸಂಗ್ರಹವಾಗುವ ಮೂಲಕ ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ, ಅನೇಕ ಗಂಭೀರ ಕಾಯಿಲೆಗಳ ಅಪಾಯವು ಹೆಚ್ಚಾಗಬಹುದು. ತುಪ್ಪ ತಿನ್ನುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಹಾನಿಯಾಗಬಹುದು ಮತ್ತು ಯಾವ ಪ್ರಮಾಣದಲ್ಲಿ ತಿಂದರೆ ಒಳ್ಳೆಯದು ಎಂಬುದನ್ನು ತಿಳಿಯೋಣ.

 

ಇದನ್ನೂ ಓದಿ-New Year 2023 ರಲ್ಲಿ ಈ ಕೆಲಸ ಮಾಡಿ, ಹಲವು ರೋಗಗಳಿಂದ ದೂರವಿರಿ

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

1 /5

1. ತುಪ್ಪದಲ್ಲಿ ಸ್ಯಾಚುರೇಟೆಡ್ ಕೊಬ್ಬು ಕೂಡ ಇದೆ, ಆದ್ದರಿಂದ ಹೆಚ್ಚು ತುಪ್ಪವನ್ನು ತಿನ್ನುವುದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಹೃದಯಾಘಾತಕ್ಕೆ ಕಾರಣವಾಗುತ್ತದೆ.  

2 /5

2. ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಬೆಂಡೆಕಾಯಿ, ಬೆಳ್ಳುಳ್ಳಿ, ಬೀನ್ಸ್ ಮತ್ತು ಈರುಳ್ಳಿಯಂತಹ ವಸ್ತುಗಳನ್ನು ಸೇವಿಸಬೇಕು. ಇಂತಹ ಪದಾರ್ಥಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ.  

3 /5

3. ಅಧಿಕ ಕೊಬ್ಬಿನಿಂದಾಗಿ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಬಹುದು. ಒಂದು ದಿನದಲ್ಲಿ 20 ಗ್ರಾಂ ಕೊಬ್ಬನ್ನು ನೀವು ಸೇವಿಸಬಹುದು. ನಿಮ್ಮ ಕೊಲೆಸ್ಟ್ರಾಲ್ ಮಟ್ಟವು ಈಗಾಗಲೇ ಹೆಚ್ಚಿದ್ದರೆ, ನಂತರ ಕೊಬ್ಬಿನ ಸೇವನೆಯ ಪ್ರಮಾಣವನ್ನು ನೀವು ಮತ್ತಷ್ಟು ಕಡಿಮೆ ಮಾಡಬಹುದು.  

4 /5

4. ತುಪ್ಪದ ಹೊರತಾಗಿ, ನಮ್ಮ ಮನೆಯಲ್ಲಿ ದಿನನಿತ್ಯ ಬಳಸುವ  ಹಲವು ಪದಾರ್ಥಗಳನ್ನು ಸೇವಿಸುವುದು ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಬೆಣ್ಣೆ, ಚೀಸ್, ಮಿಲ್ಕ್ ಶೇಕ್, ಬಿಸ್ಕೆಟ್ ಮತ್ತು ನುಣ್ಣನೆಯ ಹಿಟ್ಟಿನಿಂದ ತಯಾರಿಸಲಾಗುವ ಪದಾರ್ಥಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಈ ಪದಾರ್ಥಗಳನ್ನು ಆದಷ್ಟು ತಿನ್ನುವುದನ್ನು ತಪ್ಪಿಸಿ.  

5 /5

5. ತುಪ್ಪದಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಮತ್ತು ಅಪಧಮನಿಕಾಠಿಣ್ಯ ಮತ್ತು ಹೃದಯಾಘಾತದಂತಹ ಗಂಭೀರ ಕಾಯಿಲೆಗಳಿಗೆ ಅದು ಕಾರಣವಾಗುತ್ತದೆ. ಆದ್ದರಿಂದ, ನೀವು ಹೃದಯಾಘಾತದ ಅಪಾಯವನ್ನು ತಪ್ಪಿಸಲು ಬಯಸುತ್ತಿದ್ದರೆ, ನೀವು ಕಡಿಮೆ ತುಪ್ಪವನ್ನು ಸೇವಿಸಬೇಕು. ಅತಿಯಾಗಿ ತುಪ್ಪ ತಿಂದರೂ ಬೊಜ್ಜಿಗೆ ಗುರಿಯಾಗುವಿರಿ.