Chinese Kali Mandir: ಭಾರತದಲ್ಲಿರುವ ಈ ಚೈನಾ ಕಾಳಿ ದೇವಸ್ಥಾನದಲ್ಲಿ ಭಕ್ತಾದಿಗಳು ನೂಡಲ್ಸ್-ಚಾಪ್ಸಿ ಅರ್ಪಿಸುತ್ತಾರಂತೆ, ಕಾರಣ ಇಲ್ಲಿದೆ?

Chinese Kali Mandir: ಸಾಮಾನ್ಯವಾಗಿ  ಭಾರತದಲ್ಲಿ ದೇವಸ್ಥಾನಗಳಲ್ಲಿ ದೇವರಿಗೆ ಲಡ್ಡು-ಪೇಡ, ಸಿಹಿತಿಂಡಿಗಳನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಿ, ಅದನ್ನೇ ಪ್ರಸಾದದ ಪ್ರಸಾದದ ರೂಪದಲ್ಲಿ ವಿತರಣೆ ಮಾಡುವ ವಾಡಿಕೆ ಇರುವುದು ನಿಮಗೆಲ್ಲ ಗೊತ್ತೇ ಇದೆ.

Chinese Kali Mandir: ಸಾಮಾನ್ಯವಾಗಿ  ಭಾರತದಲ್ಲಿ ದೇವಸ್ಥಾನಗಳಲ್ಲಿ ದೇವರಿಗೆ ಲಡ್ಡು-ಪೇಡ, ಸಿಹಿತಿಂಡಿಗಳನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಿ, ಅದನ್ನೇ ಪ್ರಸಾದದ ಪ್ರಸಾದದ ರೂಪದಲ್ಲಿ ವಿತರಣೆ ಮಾಡುವ ವಾಡಿಕೆ ಇರುವುದು ನಿಮಗೆಲ್ಲ ಗೊತ್ತೇ ಇದೆ. ಆದರೆ ನಮ್ಮ ದೇಶದಲ್ಲಿ ದೇವರಿಗೆ ಚೀನೀ ಆಹಾರವನ್ನು ಅರ್ಪಿಸುವ ದೇವಸ್ಥಾನವೂ (Chinese Kali Temple) ಇದೆ ಎಂದರೆ ನೀವು ನಂಬುವಿರಾ?  ಹೌದು, ನಂತರ, ಪ್ರಸಾದದಲ್ಲಿಯೂ ಕೂಡ ಜನರಿಗೆ ನೂಡಲ್ಸ್ (Noodles) ಮತ್ತು ಚಾಪ್ಸ್ (Chops) ವಿತರಿಸಲಾಗುತ್ತದೆ.  ಕಾಳಿ ದೇವಿಯ ಈ ದೇವಸ್ಥಾನದಲ್ಲಿ ಈ ವಿಶಿಷ್ಟ ಪ್ರಸಾದ ಅರ್ಪಿಸುವದರ ಹಿಂದೆ ಒಂದು ವಿಶೇಷ ಕಾರಣವಿದೆ.

 

ಇದನ್ನೂ ಓದಿ-Janmashtami 2021: ಜನ್ಮಾಷ್ಟಮಿಯಂದು ಶ್ರೀಕೃಷ್ಣನನ್ನು ಪ್ರಸನ್ನಗೊಳಿಸಲು ಯಾವ ರಾಶಿಯ ಜನರು ಏನು ಮಾಡಬೇಕು?

 

(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದುಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

1 /5

ಕೊಲ್ಕತ್ತಾದಲ್ಲಿದೆ (Kolkata) ಈ ವಿಶೇಷ ಕಾಳಿ ದೇವಸ್ಥಾನ - ಕಾಳಿಕಾ ಮಾತೆಗೆ ನೂಡಲ್ಸ್ ಹಾಗೂ ಚಾಪ್ಸಿಗಳನ್ನು ಅರ್ಪಿಸಲಾಗುವ ಈ ದೇವಸ್ಥಾನ ಕೊಲ್ಕತ್ತಾದ ತಂಗ್ರಾ ಪ್ರದೇಶದಲ್ಲಿದೆ. ಅಲ್ಲಿ ಈ ಪ್ರದೇಶ ಚೀನಾ ಟೌನ್ ಎಂದೇ ಖ್ಯಾತಿ ಪಡೆದಿದೆ. ಈ ದೇವಸ್ಥಾನವು ಬೀದಿಯಲ್ಲಿದೆ. ಟಿಬೆಟಿಯನ್ ಶೈಲಿಯಲ್ಲಿರುವ ಈ ಐತಿಹಾಸಿಕ ಬೀದಿಯೂ ಓಲ್ಡ್ ಕೊಲ್ಕತ್ತಾ ಹಾಗೂ ಪೂರ್ವ ಏಷ್ಯಾದ ಸುಂದರ ಸಾಂಸ್ಕೃತಿಕ ದೃಶ್ಯಗಳನ್ನು ಹೊಂದಿದೆ.

2 /5

ಈ ದೇವಸ್ಥಾನದಲ್ಲಿ ಚೀನಾ ಅಗರಬತ್ತಿ ಬೆಳಗಲಾಗುತ್ತದೆ - ಇಲ್ಲಿ ಕುತೂಹಲಕಾರಿ ಸಂಗತಿಯೆಂದರೆ, ಈ ದೇವಸ್ಥಾನದಲ್ಲಿ, ಕಾಳಿಕಾ ದೇವಿಗೆ ಇಲ್ಲಿ ದೇವಸ್ಥಾನದಲ್ಲಿ ಚೈನೀಸ್ ಖಾದ್ಯಗಳನ್ನು ಅರ್ಪಿಸಲಾಗುವುದಿಲ್ಲ, ಅಲ್ಲಿ ಬೆಳಗಲಾಗುವ ಅಗರಬತ್ತಿಗಳೂ ಕೂಡ ಚೀನಾ ಅಗರಬತ್ತಿಗಳು.  ಈ ರೀತಿಯಾಗಿ, ದೇವಾಲಯದ ಕಾಣಿಕೆಗಳ ಹೊರತಾಗಿ, ಇಲ್ಲಿ ಹರಡಿರುವ ಸುಗಂಧವು ಇತರ ದೇವಾಲಯಗಳಿಗಿಂತ ಭಿನ್ನವಾಗಿದೆ. ಆದರೆ, ಈ ದೇವಸ್ಥಾನದಲ್ಲಿ ಪೂಜೆಯ ಕೆಲಸವನ್ನು ಬಂಗಾಳಿ ಅರ್ಚಕರು ಮಾಡುತ್ತಾರೆ ಮತ್ತು ದುಷ್ಟಶಕ್ತಿಗಳನ್ನು ದೂರವಿರಿಸಲು, ಕೈಯಿಂದ ತಯಾರಿಸಲಾದ ಕಾಗದಗಳನ್ನು ವಿಶೇಷ ಸಂದರ್ಭಗಳಲ್ಲಿ ಈ ದೇವಸ್ಥಾನದಲ್ಲಿ ಉರಿಸಲಾಗುತ್ತದೆ.

3 /5

ಚೀನಾ ಆಹಾರ ಪದಾರ್ಥಅರ್ಪಿಸುವುದರ ಹಿಂದಿನ ಕಾರಣ (Miraculous Reason) - ಈ ಚೀನೀ ಕಾಳಿ ದೇವಸ್ಥಾನವನ್ನು 20 ವರ್ಷಗಳ ಹಿಂದೆ ಚೀನಾದ ಮತ್ತು ಬಂಗಾಳಿ ಜನರ ದೇಣಿಗೆಯಿಂದ ನಿರ್ಮಿಸಲಾಗಿದೆ. ದೇವಾಲಯವನ್ನು ನಿರ್ಮಿಸುವ ಮೊದಲು,  ಈ ಸ್ಥಳದಲ್ಲಿ, ಕಳೆದ 60 ವರ್ಷಗಳಿಂದ, ಹಿಂದೂಗಳು ಮಾತ್ರ ಕಾಳಿ ದೇವಿಯನ್ನು  ಮರದ ಕೆಳಗೆ ಪೂಜಿಸುತ್ತಿದ್ದರು. ಸ್ಥಳೀಯ ಜನರ ಪ್ರಕಾರ, ಹಲವು ವರ್ಷಗಳ ಹಿಂದೆ ಚೀನಾದ ಹುಡುಗ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ. ಈ 10 ವರ್ಷದ ಹುಡುಗನಿಗೆ ಯಾವುದೇ ಚಿಕಿತ್ಸೆ ಫಲಕಾರಿಯಾಗಲಿಲ್ಲ, ಒಂದು ದಿನ ಆತನ ಪೋಷಕರು ಅವನನ್ನು ಅದೇ ಮರದ ಕೆಳಗೆ ಮಲಗಿಸಿ ಕಾಳಿ ದೇವಿಗೆ ಪ್ರಾರ್ಥನೆ  ಸಲ್ಲಿಸಿದರು. ಹುಡುಗನು ಅದ್ಭುತವಾಗಿ ಗುಣಮುಖನಾದನು ಮತ್ತು ಅಂದಿನಿಂದ ಈ ದೇವಾಲಯವು ಹಿಂದೂ ಸಮುದಾಯದ ಹಾಗೂ ಚೀನೀ ಸಮುದಾಯದ ನಂಬಿಕೆಯ ಕೇಂದ್ರವಾಗಿ ಮಾರ್ಪಟ್ಟಿದೆ.

4 /5

ಬಳಿಕ ಚೀನಾ ಆಹಾರ ಪದಾರ್ಥಗಳನ್ನು (Chinese Food) ಅಲ್ಲಿ ದೇವಿಗೆ ಅರ್ಪಿಸಲಾಗುತ್ತದೆ - ನಂತರ ಚೀನಾದ ಜನರು ನಿರಂತರವಾಗಿ ದೇವಸ್ಥಾನಕ್ಕೆ ಬರಲು ಪ್ರಾರಂಭಿಸಿದಾಗ, ಅವರು ತಮ್ಮ ಆಹಾರ ಸಂಸ್ಕೃತಿಗೆ ಅನುಗುಣವಾಗಿ ಕಾಳಿ ದೇವಿಗೆ  ಆಹಾರವನ್ನು ನೀಡಲು ಪ್ರಾರಂಭಿಸಿದರು. ಅಂದಿನಿಂದ, ನೂಡಲ್ಸ್, ಚಾಪ್ಸ್ ಇತ್ಯಾದಿಗಳನ್ನು ಇಲ್ಲಿರುವ ತಾಯಿಗೆ ಅರ್ಪಿಸಲಾಗುತ್ತದೆ ಮತ್ತು ಅದನ್ನೇ ಪ್ರಸಾದದ ರೂಪದಲ್ಲಿ ಭಕ್ತಾದಿಗಳಿಗೆ ನೀಡಲಾಗುತ್ತದೆ.

5 /5

ಇಲ್ಲಿ ನಮಸ್ಕಾರ ಕೂಡ ಚೀನಾ ಪದ್ಧತಿಯಲ್ಲಿಯೇ ಮಾಡಲಾಗುತ್ತದೆ - ಈ ದೇವಸ್ಥಾನಕ್ಕೆ ಭೇಟಿ ನೀಡುವ ಚೀನೀಯರು ಕೂಡ ಇತರ ಭಕ್ತಾದಿಗಳಂತೆ ತಮ್ಮ ಪಾದರಕ್ಷೆಗಳನ್ನು ಕಳಚಿ ನಂತರ ದೇವಸ್ಥಾನವನ್ನು ಪ್ರವೇಶಿಸಿ ನಮಸ್ಕರಿಸುತ್ತಾರೆ. ಆದರೆ, ಅವರು ನಮಸ್ಕರಿಸುವ ಶೈಲಿಯು ಚೀನಾ ನಮಸ್ಕಾರದ ಶೈಲಿಯಾಗಿದೆ.