Chaturgrahi Yog 2024: ಶೀಘ್ರದಲ್ಲಿಯೇ ನಿರ್ಮಾಣಗೊಳ್ಳಲಿದೆ ಚತುರ್ಗ್ರಹಿ ಯೋಗ, ಲಕ್ಷ್ಮಿ ನಾರಾಯಣ ಕೃಪೆಯಿಂದ ಈ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭ!

Chaturgrahi Yog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಮಕರ ರಾಶಿಯಲ್ಲಿ ಚತುರ್ಗ್ರಹಿ ಯೋಗ ರಚನೆಯಾಗುತ್ತಿದೆ. ಈ ಯೋಗ ಕೆಲ ರಾಶಿಗಳ ಜನರಿಗೆ ಅಪಾರ ಧನ-ಸಂಪತ್ತನ್ನು ಕರುಣಿಸಲಿದೆ. (Spiritual News In Kannada)
 

Chaturgrahi Yog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ತಿಂಗಳು ಅತ್ಯಂತ ಮಹತ್ವದ ತಿಂಗಳಾಗಿರಲಿದೆ. ಏಕೆಂದರೆ ಈ ತಿಂಗಳಿನಲ್ಲಿ ರುಚಕ ರಾಜಯೋಗ, ತ್ರಿಗ್ರಹಿ ಯೋಗ ಹಾಗೂ ಚತುರ್ಗ್ರಹಿ ಯೋಗಗಳಂತಹ ಅತ್ಯಂತ ಶುಭ ಯೋಗಗಳು ರಚನೆಯಾಗುತ್ತಿವೆ. ಇಂದು ನಾವು ಚತುರ್ಗ್ರಹಿ ಯೋಗದ ಕುರಿತು ಮಾತನಾಡುತ್ತಿದ್ದೇವೆ. ಈ ಯೋಗ ಮಕರ ರಾಶಿಯಲ್ಲಿ ರಚನೆಯಾಗುತ್ತಿದೆ. ಏಕೆಂದರೆ ಮಕರ ರಾಶಿಯಲ್ಲಿ ಸೂರ್ಯ, ಶುಕ್ರ, ಬುಧ ಹಾಗೂ ಚಂದ್ರರ ಮೈತ್ರಿ ನೆರವೇರುತ್ತಿದೆ. ಹೀಗಿರುವಾಗ ಈ ಯೋಗದ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಇರಲಿದೆ. ಅದರಲ್ಲಿಯೂ ವಿಶೇಷವಾಗಿ ಮೂರು ರಾಶಿಗಳ ಜನರಿಗೆ ಈ ಯೋಗ ಆಕಸ್ಮಿಕ ಧನಲಾಭವನ್ನು ತಂದುಕೊಡಲಿದ್ದು, ಅವರ ಭಾಗ್ಯೋದಯ ಬಹುತೇಕ ಪಕ್ಕಾ ಎನ್ನಲಾಗಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,  (Spiritual News In Kannada)

 

ಇದನ್ನೂ ಓದಿ-Rahu-Surya Yuti 2024: ಹದಿನೆಂಟು ವರ್ಷಗಳ ಬಳಿಕ ರಾಹುವಿನ ಹಿಡಿತಕ್ಕೆ ಸಿಕ್ಕ ಸೂರ್ಯ, ಈ ಜನರ ಮೇಲೆ ಅಪಾರ ಕನಕವೃಷ್ಟಿ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

1 /5

Chaturgrahi Yog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಮಕರ ರಾಶಿಯಲ್ಲಿ ಚತುರ್ಗ್ರಹಿ ಯೋಗ ರಚನೆಯಾಗುತ್ತಿದೆ. ಈ ಯೋಗ ಕೆಲ ರಾಶಿಗಳ ಜನರಿಗೆ ಅಪಾರ ಧನ-ಸಂಪತ್ತನ್ನು ಕರುಣಿಸಲಿದೆ. (Spiritual News In Kannada)  

2 /5

ಮೇಷ ರಾಶಿ: ಮೇಷ ರಾಶಿಯ ಜಾತಕದವರಿಗೆ ಚತುರ್ಗ್ರಹಿ ಯೋಗ ಒಂದು ವರದಾನ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ಗೋಚರ ಜಾತಕದ ವೃತ್ತಿ ಹಾಗೂ ವ್ಯಾಪಾರ ಭಾವದಲ್ಲಿ ರಚನೆಯಾಗುತ್ತಿದೆ. ಹೀಗಿರುವಾಗ ನಿರುದ್ಯೋಗಿ ಮೇಷ ರಾಶಿಯ ಜಾತಕದವರಿಗೆ ಉದ್ಯೋಗ ಪ್ರಸ್ತಾಪಗಳು ಬರುವ ಸಾಧ್ಯತೆ ಇದೆ. ಒಂದು ವೇಳೆ ನೀವು ನಿಮ್ಮ ಸ್ವಂತ ವ್ಯಾಪಾರ ಮಾಡುತ್ತಿದ್ದರೆ, ಈ ಗೋಚರ ಕಾಲದಲ್ಲಿ ನಿಮಗೆ ಸಾಕಷ್ಟು ಲಾಭ ಸಿಗಲಿದೆ. ಇದಲ್ಲದೆ ಆದಾಯ ಗಳಿಕೆಯ ಹೊಸ ಮಾರ್ಗಗಳು ಕೂಡ ನಿಮಗೆ ತೆರೆದುಕೊಳ್ಳಲಿವೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಪಿತ್ರಾರ್ಜಿತ ಸಂಪತ್ತಿನ ಲಾಭ ಕೂಡ ಸಿಗಲಿದೆ.  

3 /5

ಧನು ರಾಶಿ: ಈ ಯೋಗ ನಿಮ್ಮ ಗೋಚರ ಜಾತಕದ ಧನ ಹಾಗೂ ವಾಣಿಯ ಭಾವದಲ್ಲಿ ರಚನೆಯಾಗುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಕಾಲಕಾಲಕ್ಕೆ ಧನಲಾಭ ಉಂಟಾಗಲಿದೆ. ಪ್ರೊಫೆಶ್ನಲ್ ಲೈಫ್ ನಲ್ಲಿ ನೀವು ಪಟ್ಟ ಪರಿಶ್ರಮಕ್ಕೆ ಉತ್ತಮ ಫಲ ಸಿಗಲಿದ್ದು, ಪ್ರಭಾವಶಾಲಿ ವ್ಯಕ್ತಿಗಳ ಜಿತೆಗೆ ನಿಮ್ಮ ಭೇಟಿ ಕೂಡ ನೆರವೇರುವ ಸಾಧ್ಯತೆ ಇದೆ. ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಮೆರಗನ್ನು ನೀವು ಕಾಣುವಿರಿ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಅಪಾರ ಬಲಿಷ್ಠವಾಗಲಿದೆ.   

4 /5

ವೃಷಭ ರಾಶಿ" ನಿಮ್ಮ ಗೋಚರ ಜಾತಕದ ಆದಾಯ ಭಾವದಲ್ಲಿ ಈ ಮೈತ್ರಿ ನೆರವೇರುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳ ಸಂಭವಿಸಲಿದೆ. ಇದರ ಜೊತೆಗೆ ಆದಾಯದ ಹೊಸ ಮಾರ್ಗಗಳೂ ಕೂಡ ನಿಮ್ಮ ಪಾಲಿಗೆ ತೆರೆದುಕೊಳ್ಳಲಿವೆ ಮತ್ತು ಆದಾಯದಲ್ಲ ಜಬರ್ದಸ್ತ್ ಹೆಚ್ಚಳವನ್ನು ನೀವು ಕಾಣಬಹುದು. ನೌಕರ ವರ್ಗದ ಜನರಿಗೆ ಕಾರ್ಯಕ್ಷೇತ್ರದಲ್ಲಿ ಹೊಸ ಗುರುತು ಹಾಗೂ ಉನ್ನತ ಸ್ಥಾನ ಲಭಿಸಲಿದೆ. ಈ ಅವಧಿಯಲ್ಲಿ ನೀವು ಮಾಡಿದ ಹೂಡಿಕೆಯಿಂದ ನಿಮಗೆ ಲಾಭ ಸಿಗಲಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದರೆ, ಹೂಡಿಕೆ ನಿಮಗೆ ಸಾಕಷ್ಟು ಲಾಭವನ್ನು ತಂದುಕೊಡಲಿದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)