Central government employees Diwali Bonus:
ಕೇಂದ್ರ ಸರ್ಕಾರಿ ನೌಕರರಿಗೆ ಹಬ್ಬದ ಸೀಸನ್‌ನ ದೊಡ್ಡ ಗುಡ್ ನ್ಯೂಸ್ ಘೋಷಣೆಯಾಗಿದೆ. ತನ್ನ ನೌಕರರಿಗೆ ನಿನ್ನೆ ಹಬ್ಬದ ಬೋನಸ್ ಘೋಷಿಸಿದೆ.
Central government employees Diwali Bonus : ಕೇಂದ್ರ ಸರ್ಕಾರಿ ನೌಕರರಿಗೆ ಹಬ್ಬದ ಸೀಸನ್‌ನ ದೊಡ್ಡ ಗುಡ್ ನ್ಯೂಸ್ ಘೋಷಣೆಯಾಗಿದೆ. ಕೇಂದ್ರ ಸರ್ಕಾರವು 2022-23 ನೇ ಸಾಲಿಗೆ ಗ್ರೂಪ್-ಬಿ ನಾನ್-ಗೆಜೆಟೆಡ್ ಅಧಿಕಾರಿಗಳು ಮತ್ತು ಗ್ರೂಪ್-ಸಿ ನೌಕರರಿಗೆ ದೀಪಾವಳಿ ಬೋನಸ್ ಅನ್ನು ಘೋಷಿಸಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಲ್ಲಿ ಅರೆಸೇನಾ ಪಡೆಯ ಸಿಬ್ಬಂದಿಯೂ ಸೇರ್ಪಡೆಯಾಗಲಿದ್ದಾರೆ. ಅವರಿಗೆ ಗರಿಷ್ಠ 7,000 ರೂ.ವರೆಗೆ ದೀಪಾವಳಿ ಬೋನಸ್ ನೀಡಲಾಗುವುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಕೇಂದ್ರ ಸರ್ಕಾರವು ಮಂಗಳವಾರ ನಾನ್-ಗೆಜೆಟೆಡ್ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಉದ್ಯೋಗಿಗಳಿಗೆ ನಾನ್-ಪ್ರೊಡಕ್ಟಿವಿಟಿ ಲಿಂಕ್ಡ್ ಬೋನಸ್ (ದೀಪಾವಳಿ ಬೋನಸ್ 2023) ಪ್ರಕಟಿಸಿದೆ.
ಈ ಘೋಷಣೆಯ ಪ್ರಕಾರ ಬಿ ಮತ್ತು ಸಿ ಗುಂಪಿನ ನಾನ್ ಗೆಜೆಟೆಡ್ ಉದ್ಯೋಗಿಗಳಿಗೆ ಒಂದು ತಿಂಗಳ ವೇತನಕ್ಕೆ ಸಮನಾದ ಮೊತ್ತವನ್ನು ಬೋನಸ್ ಆಗಿ ನೀಡಲಾಗುತ್ತದೆ.
ವರದಿಯ ಪ್ರಕಾರ, ಈ ಬೋನಸ್ (ದೀಪಾವಳಿ ಬೋನಸ್ 2023) ಪ್ರಯೋಜನವನ್ನು 2022-23ರ ಅವಧಿಯಲ್ಲಿ ಕನಿಷ್ಠ 6 ತಿಂಗಳವರೆಗೆ ನಿರಂತರ ಕರ್ತವ್ಯವನ್ನು ನೀಡಿದ ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುತ್ತದೆ. ಅಲ್ಲದೆ, ಅವರು 31 ಮಾರ್ಚ್ 2023 ರವರೆಗೆ ಸೇವೆಯಲ್ಲಿದ್ದವರಿಗೆ ನೀಡಲಾಗುತ್ತದೆ.
ಅಡ್ಹಾಕ್ ಆಧಾರದ ಮೇಲೆ (ON AN AD HOC BASIS)ನೇಮಕಗೊಂಡ ಹಂಗಾಮಿ ನೌಕರರಿಗೂ ಈ ಬೋನಸ್ ಅನ್ನು ಸರ್ಕಾರ ನೀಡಲಿದೆ. ಆದರೆ, ಅವರ ಸೇವೆಯಲ್ಲಿ ಯಾವುದೇ ವಿರಾಮ ಇರಬಾರದು ಎನ್ನುವ ಷರತ್ತು ವಿಧಿಸಲಾಗಿದೆ.
ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಕೇಂದ್ರ ಅರೆಸೇನಾ ಪಡೆಗಳ ನೌಕರರು ಈ ಬೋನಸ್‌ನ ಪ್ರಯೋಜನವನ್ನು ಪಡೆಯುತ್ತಾರೆ. ಅವರಿಗೆ ಗರಿಷ್ಠ 7 ಸಾವಿರ ರೂ.ವರೆಗೆ ದೀಪಾವಳಿ ಬೋನಸ್ ನೀಡಲಾಗುವುದು.
ಉದ್ಯೋಗಿಗಳ ನಾನ್-ಪ್ರೊಡಕ್ಟಿವಿಟಿ ಲಿಂಕ್ಡ್ ಬೋನಸ್ (ದೀಪಾವಳಿ ಬೋನಸ್ 2023) ನಿರ್ಧರಿಸಲು ವಿಶೇಷ ಸೂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಇದರಲ್ಲಿ ಉದ್ಯೋಗಿಗಳ ಸರಾಸರಿ ವೇತನದ ಆಧಾರದ ಮೇಲೆ ಬೋನಸ್ ಸೇರಿಸಲಾಗುತ್ತದೆ. ಉದಾಹರಣೆಗೆ ಸರ್ಕಾರಿ ನೌಕರಿಯಲ್ಲಿ ನೀವು ಸುಮಾರು 20 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದರೆ, ಸುಮಾರು 19 ಸಾವಿರ ರೂಪಾಯಿ ಬೋನಸ್ ಪಡೆಯಬಹುದು.