Trending Photo: ಸಿಂಗಾಪುರದ ನಿವಾಸಿಯಾಗಿರುವ ಚುಆಂದೋ ಟ್ಯಾನ್ ಕೇವಲ ತನ್ನ ಲುಕ್ಸ್ ನಿಂದಲೇ ಭಾರಿ ಖ್ಯಾತಿಯನ್ನು ಪಡೆದಿದ್ದಾನೆ. ಟ್ಯಾನ್ ಶರೀರ ಸೌಷ್ಟ್ಯವನ್ನು ನೋಡಿ ಆತನ ನಿಖರವಾದ ವಯಸ್ಸು ಎಷ್ಟು ಎಂದು ಪ್ರಶ್ನಿಸಿದಾಗ, ಬಹುತೇಕರು ಸರಿಯಾದ ಉತ್ತರ ನೀಡುವಲ್ಲಿ ವಿಫಲರಾಗಿದ್ದಾರಂತೆ.
Viral Photos: ಸಿಂಗಾಪುರದ ನಿವಾಸಿಯಾಗಿರುವ ಮತ್ತು ವೃತ್ತಿಯಲ್ಲಿ ಓರ್ವ ಫೋಟೋಗ್ರಾಫರ್ ಆಗಿರುವ ಚುಆಂದೋ ಟ್ಯಾನ್ ತನ್ನ ಶರೀರ ಸೌಷ್ಟ್ಯ ಹಾಗೂ ಲುಕ್ಸ್ ನಿಂದಲೇ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾ ಫೇಮಸ್ ಆಗಿದ್ದಾರೆ. ಚುಆಂದೋ ಬಾಡಿ ಫಿಟ್ನೆಸ್ ನೋಡಿ ಅವರ ನಿಜವಾದ ವಯಸ್ಸಿನ ಅಂದಾಜು ಹಚ್ಚುವುದು ಸ್ವಲ್ಪ ಕಷ್ಟಸಾಧ್ಯದ ಮಾತು ಎನ್ನಲಾಗುತ್ತದೆ. ಏಕೆಂದರೆ, ಚುಆಂದೋ ನೋಡಲು ಹಾಗೆಯೇ ಇದ್ದಾರೆ. ಇಂದು ನಾವು ನಿಮಗೆ ಚುಆಂದೋ ಅವರ ಲುಕ್ಸ್ ಅನ್ನು ತೋರಿಸುತ್ತಿದ್ದು, ಅದರ ಜೊತೆಗೆ ಚುಆಂದೋ ಅವರ ಫಿಟ್ನೆಸ್ ಗುಟ್ಟನ್ನು ಕೂಡ ಹೇಳಲಿದ್ದೇವೆ.
ಇದನ್ನೂ ಓದಿ-Viral Video: ಕೋತಿ ಬಾಲಕನ ಮಧ್ಯೆ ಭಾರಿ ಗುದ್ದಾಟ, ಗೆದ್ದಿದ್ದು ಯಾರು?
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಇನ್ಸ್ಟಾಗ್ರಾಮ್ ನಲ್ಲಿ 12 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ -ಚುಆಂದೋ ತನ್ನ ಬಗ್ಗೆ ತಾನೇ ಪ್ರಚಾರ ಮಾಡಿಕೊಳ್ಳಲು 2015 ರಲ್ಲಿ ತನ್ನ ಇನ್ಸ್ಟಾಗ್ರಾಮ್ ಖಾತೆಯನ್ನು ಆರಂಭಿಸಿದ್ದಾರೆ. ಪ್ರಸ್ತುತ ಅವರು ತನ್ನ ಖಾತೆಯಲ್ಲಿ 12 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. 2017ರಲ್ಲಿ ಅವರ ಇನ್ಸ್ಟಾಗ್ರಾಮ್ ಪುಟವನ್ನು ಚೀನಾ ವೆಬ್ಸೈಟ್ ವೊಂದು ಪ್ರಚಾರ ಮಾಡಿದ ಬಳಿಕ ಚುಆಂದೋ ಪ್ರಸ್ದಿದ್ಧಿಯ ಉತ್ತುಂಗಕ್ಕೇರಿದ್ದಾರೆ.
2. ಜಿಮ್ ನಲ್ಲಿ ಗಂಟೆಗಳ ಕಾಲ ಬೆವರು ಸುರಿಸುತ್ತಾರೆ: ಚುಆಂದೋ ಪ್ರತಿ ದಿನ ಸುಮಾರು ಒಂದೂವರೆ ಗಂಟೆಗಳ ಕಾಲ ಬೆವರು ಸುರಿಸುತ್ತಾರೆ. ಇದು ಅವರಿಗೆ ಫಿಟ್ ಮಾತ್ತು ಆರೋಗ್ಯದಿಂದಿರಲು ಸಹಾಯ ಮಾಡುತ್ತದೆ. ಯಾವುದೇ ರೀತಿಯ ಪಾನೀಯ ಹಾಗೂ ಸಿಗರೆಟ್ ನಿಂದ ಇವರು ದೂರ ಇರುತ್ತಾರಂತೆ.
3. ಫಿಟ್ ಆಗಿರಲು ವಿಶೇಷ ಆಹಾರ ಸೇವನೆ: ಫಿಟ್ ಆಗಿರಲು ಚುಆಂದೋ ತಮ್ಮ ಊಟದಲ್ಲಿ ಸಾಕಷ್ಟು ಹಸಿರು ತರಕಾರಿಗಳು, ಪ್ರೋಟೀನ್, ನೀರು ಹಾಗೂ ಮೊಟ್ಟೆಯನ್ನು ಸೇವಿಸುತ್ತಾರೆ. ಇದಲ್ಲದೆ ಅವರು ಚಿಕನ್ ಕೂಡ ಸೇವಿಸುತ್ತಾರಂತೆ.
4. ಸಿಂಗಿಂಗ್ ಹವ್ಯಾಸ: ಚುಆಂದೋ ಟ್ಯಾನ್ ಫೋಟೋಗ್ರಾಫಿ, ಮಾಡಲಿಂಗ್ ಜೊತೆಗೆ ಹಾಡುವ ಹವ್ಯಾಸ ಕೂಡ ಹೊಂದಿದ್ದಾರೆ. ಹಾಡುಗಾರಿಕೆಯಲ್ಲಿಯೂ ಕೂಡ ಟ್ಯಾನ್ ಸಾಕಷ್ಟು ಹೆಸರು ಮಾಡಿದ್ದಾರಂತೆ. ಇದೇ ಕಾರಣದಿಂದ ಟ್ಯಾನ್ ಸ್ನೇಹಿತರು ಅವರನ್ನು ಪ್ರೀತಿಯಿಂದ CD ಎಂದೂ ಕೂಡ ಕರೆಯುತ್ತಾರಂತೆ
5. ಯಾವುದೇ ಸ್ಕಿನ್ ಕೆಯರ್ ಉತ್ಪನ್ನಗಳನ್ನು ಟ್ಯಾನ್ ಬಳಸುವುದಿಲ್ಲವಂತೆ: ಶರೀರವನ್ನು ಸದೃಢವಾಗಿಡಲು ಮತ್ತು ಚರ್ಮವನ್ನು ಸುಕ್ಕಿನಿಂದ ರಕ್ಷಿಸಲು ಟ್ಯಾನ್ ಬೆಳ್ಳಂ ಬೆಳಗ್ಗೆ ಮತ್ತು ತಡರಾತ್ರಿ ಸ್ನಾನ ಮಾಡುವುದರಿಂದ ದೂರವಿರುತ್ತಾರಂತೆ. ಅವರು ಯಾವುದೇ ರೀತಿಯ ಸ್ಕಿನ್ ಕೆಯರ್ ಉತ್ಪನ್ನಗಳ ಬಳಕೆ ಮಾಡುವುದಿಲ್ಲವಂತೆ. ಕೇವಲ ಚುಆಂದೋ ಅವರ ಈ ಫೋಟೋಗಳನ್ನು ನೋಡಿದರೆ, ಯಾರಿಂದಲೂ ಅವರ ನಿಜವಾದ ವಯಸ್ಸಿನ ಅಂದಾಜು ಹಚ್ಚುವುದು ಸಾಧ್ಯವಿಲ್ಲ ಎಂಬಂತಿವೆ.
6. ನಿಮ್ಮ ಅಂದಾಜು ಎಷ್ಟು?: ಅಂದ ಹಾಗೆ ಚುಆಂದೋ ಟ್ಯಾನ್ ಅವರ ನಿಖರವಾದ ವಯಸ್ಸು 56. ಈ ವಯಸ್ಸಿನಲ್ಲಿಯೂ ಕೂಡ ಚುಆಂದೋ 20ರ ಹೊಸ್ತಿಲಲ್ಲಿ ನಿಂತಿರುವ ಓರ್ವ ಯಂಗ್ ಹಾಗೂ ಫಿಟ್ ಯುವಕನಂತೆ ಕಾಣಿಸುತ್ತಾರೆ. ಟ್ಯಾನ್ ತನ್ನ ಛಾಯಾಚಿತ್ರಗಳು ಹಾಗೂ ಮಾಡೆಲ್ ಲುಕ್ಸ್ ನಿಂದ ಹಲವರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ.