ಧನ ತ್ರಯೋದಶಿಯಂದು ಕುಬೇರ ದೇವ, ಲಕ್ಷ್ಮೀ ದೇವಿ ಮತ್ತು ಧನ್ವಂತರಿ ದೇವನನ್ನು ಪೂಜಿಸಲಾಗುತ್ತದೆ. ಈ ದಿನದಂದು ಇವರನ್ನು ಪೂಜಿಸುವ ಮೂಲಕ, ಭಕ್ತರ ಜೀವನದುದ್ದಕ್ಕೂ ಲಕ್ಷ್ಮೀಯ ಅನುಗ್ರಹ ಪಡೆಯಬಹುದು.
ಬೆಂಗಳೂರು : ದೀಪಾವಳಿ ಹಬ್ಬವು ಹಿಂದೂ ಧರ್ಮದ ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ದೀಪಾವಳಿ ಹಬ್ಬವು ಧನತ್ರಯೋದಶಿಯಿಂದ ಪ್ರಾರಂಭವಾಗುತ್ತದೆ. ಈ ಬಾರಿ ತಿಥಿಗೆ ಅನುಗುಣವಾಗಿ ನರಕ ಚತುರ್ದಶಿ ಮತ್ತು ದೀಪಾವಳಿಯನ್ನು ಒಂದೇ ದಿನ ಆಚರಿಸಲಾಗುತ್ತದೆ. ಧನ ತ್ರಯೋದಶಿಯಂದು ಕುಬೇರ ದೇವ, ಲಕ್ಷ್ಮೀ ದೇವಿ ಮತ್ತು ಧನ್ವಂತರಿ ದೇವನನ್ನು ಪೂಜಿಸಲಾಗುತ್ತದೆ. ಈ ದಿನದಂದು ಇವರನ್ನು ಪೂಜಿಸುವ ಮೂಲಕ, ಭಕ್ತರ ಜೀವನದುದ್ದಕ್ಕೂ ಲಕ್ಷ್ಮೀಯ ಅನುಗ್ರಹ ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಧನತ್ರಯೋದಶಿ ದಿನದ ಬಗ್ಗೆ ಅನೇಕ ನಂಬಿಕೆಗಳಿವೆ. ಈ ದಿನ ಪಾತ್ರೆಗಳನ್ನು ಖರೀದಿಸುವ ನಂಬಿಕೆಯೂ ಇದೆ. ಈ ದಿನ ಜನರು ಚಿನ್ನ ಮತ್ತು ಬೆಳ್ಳಿ, ವಾಹನ , ಮನೆ, ಪಾತ್ರೆಗಳು ಇತ್ಯಾದಿಗಳನ್ನು ಖರೀದಿಸುತ್ತಾರೆ. ಚಿನ್ನ ಮತ್ತು ಬೆಳ್ಳಿ ಖರೀದಿಸಿದರೆ ಶುಭ ಎನ್ನುವ ಮಾತು ಸಾಮಾನ್ಯವಾಗಿ ಕೇಳಿ ಬರುತ್ತದೆ. ಆದರೆ ಈ ಕೆಳಗಿನ ವಸ್ತುಗಳನ್ನು ಖರೀದಿಸಿದರು ಕೂಡಾ ಚಿನ್ನ ಬೆಳ್ಳಿ ಖರೀದಿಸಿದಂತೆ ಶುಭ ಫಲ ಸಿಗುತ್ತದೆ.
ಹಿಂದೂ ಧರ್ಮದಲ್ಲಿ, ಪೊರಕೆಯನ್ನು ಲಕ್ಷ್ಮೀ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಈ ದಿನ ಮನೆಯಲ್ಲಿ ಹೊಸ ಪೊರಕೆ ತರುವ ಸಂಪ್ರದಾಯವೂ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಧನತ್ರಯೋದಶಿ ದಿನದಂದು ಪೊರಕೆಯನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನಿಮಗೆ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಸಾಧ್ಯವಾಗದಿದ್ದರೆ, ಈ ದಿನದಂದು ಪೊರಕೆ ಖರೀದಿಸಿ.
ಗೋಮತಿ ಚಕ್ರವು ಲಕ್ಷ್ಮೀ ದೇವಿಗೆ ಅತ್ಯಂತ ಪ್ರಿಯವಾದುದು. ಧನತ್ರಯೋದಶಿ ದಿನದಂದು ಗೋಮತಿ ಚಕ್ರವನ್ನು ಮನೆಗೆ ತಂದು ಪೂಜಿಸಿದರೆ, ಲಕ್ಷ್ಮೀ ಪ್ರಸನ್ನಳಾಗುತ್ತಾಳೆ. ನೀವು ಹಣವನ್ನು ಇಡುವ ಸ್ಥಳದಲ್ಲಿ ಈ ಗೋಮತಿ ಚಕ್ರಗಳನ್ನು ಇಟ್ಟರೆ ಹಣದ ಕೊರತೆ ಎದುರಾಗುವುದಿಲ್ಲ.
ಈ ದಿನದಂದು ಕೊತ್ತಂಬರಿ ಬೀಜವನ್ನು ಖರೀದಿಸುವುದು ಕೂಡಾ ತುಂಬಾ ಶುಭ. ಈ ದಿನ ಕೊತ್ತಂಬರಿ ಬೀಜವನ್ನು ತಂದು ಲಕ್ಷ್ಮೀ ದೇವಿಗೆ ಅರ್ಪಿಸಿ. ಇದರ ನಂತರ, ಅದನ್ನು ಮನೆಯ ತೋಟ, ಹೊಲ ಅಥವಾ ಕುಂಡದಲ್ಲಿ ಬಿತ್ತಬೇಕು. ಇದರೊಂದಿಗೆ, ಮನೆಯ ಎಲ್ಲಾ ಸಮಸ್ಯೆಗಳು ಬಗೆಹರಿಯುವುದು.
ಧನ ತ್ರಯೋದಶಿ ದಿನದಂದು ಹಿತ್ತಾಳೆಯ ಪಾತ್ರೆಗಳನ್ನು ಖರೀದಿಸುವ ಸಂಪ್ರದಾಯವಿದೆ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ. ದಂತಕಥೆಯ ಪ್ರಕಾರ, ಧನ್ವಂತರಿ ದೇವರು ಸುಮದ್ರ ಮಂಥನದ ಸಮಯದಲ್ಲಿ ಕಾಣಿಸಿಕೊಂಡಾಗ, ಅವನ ಕೈಯಲ್ಲಿ ಹಿತ್ತಾಳೆಯ ಲೋಹದಿಂದ ಮಾಡಿದ ಮಕರಂದದ ಪಾತ್ರೆ ಇತ್ತು. ಆದ್ದರಿಂದ, ಈ ದಿನ ಹಿತ್ತಾಳೆಯನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.