Business Plan: ಇಂದಿನ ಕಾಲದಲ್ಲಿ ನೌಕರಿಯ ಯಾವುದೇ ಭರವಸೆ ಇಲ್ಲ. ಇಂದು ಇರುತ್ತೆ, ನಾಳೆ ಇರುವುದಿಲ್ಲ. ಕೊರೊನಾ ಮಹಾಮಾರಿಯ (Corona Pandemic) ಕಾಲದಲ್ಲಿ ಕೋಟ್ಯಂತರ ಜನರು ತಮ್ಮ ನೌಕರಿಯಿಂದ ಕೈತೊಳೆದುಕೊಂಡಿದ್ದಾರೆ ಹಾಗೂ ಹಲವು ವ್ಯಾಪಾರಗಳು ಹಾನಿಗೊಳಗಾಗಿವೆ. ಇಂತಹ ಪರಿಸ್ಥಿತಿಯಲ್ಲಿ ನಿತ್ಯ ಆದಾಯ ನೀಡುವ ವ್ಯವಹಾರಕ್ಕೆ (Business Plan) ಕೈಹಾಕುವುದು ಜಾಣತನದ ವಿಷಯ. ಅಂತಹ ವ್ಯವಹಾರ ಆರಂಭಿಸಲು ಹೆಚ್ಚಿನ ಹೂಡಿಕೆ ಮಾಡುವ ಅವಶ್ಯಕತೆ ಕೂಡ ಇಲ್ಲ.
ಇದನ್ನೂ ಓದಿ- COVID 19 ವಾಕ್ಸಿನೇಷನ್ slot ನೊಟಿಫಿಕೇಶನ್ ಗಾಗಿ ಈ ಆಪ್ ಗಳನ್ನು ಬಳಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
1. Business Plan:ಪ್ರತಿಯೊಂದು ಸೀಜನ್ ನಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಅವಶ್ಯಕ - ಸ್ಯಾನಿಟರಿ ನ್ಯಾಪ್ಕಿನ್ ನ ಬಿಸನೆಸ್ (Sanitary Napkin Business) ಯಾವಾಗಲು ಬಹುಬೇಡಿಕೆಯ ಬಿಸಿನೆಸ್ ಗಳಲ್ಲಿ ಒಂದು. ಈ ಬಿಸಿನೆಸ್ ಗೆ ಸೀಜನ್ ಅಂತ ಇರುವುದಿಲ್ಲ. ಈ ಉದ್ಯಮ ಆರಂಭಿಸಲು ನಿಮಗೆ ಸರ್ಕಾರದ ಸಹಾಯ ಕೂಡ ಸಿಗುತ್ತದೆ. ಸ್ಯಾನಿಟರಿ ನ್ಯಾಪ್ಕಿನ್ ಯುನಿಟ್ (Sanitary Napkin Unit) ಆರಂಭಿಸಲು ನೀವು ಹೆಚ್ಚಿನ ಹೂಡಿಕೆ ಮಾಡುವ ಅವಶ್ಯಕತೆ ಇಲ್ಲ. ಇದರ ಘಟಕ ಸ್ಥಾಪಿಸಲು ನೀವು ಕೇವಲ ರೂ.15,000 ಹೂಡಿಕೆ ಮಾಡಿದರೆ ಸಾಕು.
2. Business Plan:ಮುದ್ರಾ ಯೋಜನೆಯಡಿ ಸರ್ಕಾರ ಸಾಲ ಕೂಡ ನೀಡುತ್ತದೆ - ಸ್ಯಾನಿಟರಿ ನ್ಯಾಪ್ಕಿನ್ ಉದ್ಯಮ ಆರಂಭಿಸಲು ಸರ್ಕಾರ ಮುದ್ರಾ ಸಾಲ ಯೋಜನೆಯಡಿ (Mudra Loan Scheme) ಅಗ್ಗದ ದರದಲ್ಲಿ ಸಾಲ ನೀಡುತ್ತದೆ. ಈ ಬಿಸಿನೆಸ್ ಮೂಲಕ ನೀವು ಮೊದಲ ವರ್ಷ 1 ಲಕ್ಷ 10 ಸಾವಿರ ರೂ.ಗಳವರೆಗೆ ಸಂಪಾದಿಸಬಹುದು. ವರ್ಷಗಳು ಕಳೆಯುತ್ತಿದ್ದಂತೆ ನಿಮ್ಮ ಆದಾಯ ದ್ವಿಗುಣಗೊಳ್ಳುತ್ತಾ ಹೋಗುತ್ತದೆ.
3. Business Plan:ಶೇ.90 ರಷ್ಟು ಸಾಲ - ನಿತ್ಯ 180 ಪ್ಯಾಕೆಟ್ ಸ್ಯಾನಿಟರಿ ಪ್ಯಾಡ್ ಉತ್ಪಾದನೆಯ ಘಟಕ (Sanitary Napkin Business License) ಪ್ರಾರಂಭಿಸಲು 1.45 ಲಕ್ಷ ರೂ. ಖರ್ಚು ತಗಲುತ್ತದೆ. ಈ ಹೂಡಿಕೆಯ ಶೇ.90ರಷ್ಟು ಅಂದರೆ 1.30 ಲಕ್ಷ ರೂ.ಗಳನ್ನು ನೀವು ಮುದ್ರಾ ಸಾಲ ಯೋಜನೆಯ ಅಡಿ ಸಾಲ ಪಡೆಯಬಹುದು. ಉಳಿದ 15 ಸಾವಿರ ರೂ.ಗಳನ್ನು ನೀವು ನಿಮ್ಮ ಜೇಬಿನಿಂದ ಖರ್ಚು ಮಾಡಬೇಕು.
4. Business Plan:ಸ್ಯಾನಿಟರಿ ನ್ಯಾಪ್ಕಿಂಗ್ ಬಿಸಿನೆಸ್ ಪ್ರಾಜೆಕ್ಟ್ - ಸ್ಯಾನಿಟರಿ ನ್ಯಾಪ್ಕಿಂಗ್ ಬಿಸಿನೆಸ್ ಗಾಗಿ ಸರ್ಕಾರ ಒಂದು ಪ್ರಾಜೆಕ್ಟ್ ಕೂಡ ಸಿದ್ಧಪಡಿಸಿದೆ. ಈ ಪ್ರಾಜೆಕ್ಟ್ (Sanitary Napkin Business Project) ವರದಿಯ ಪ್ರಕಾರ, ಸ್ಯಾನಿಟರಿ ನ್ಯಾಪ್ಕಿಂಗ್ ಯುನಿಟ್ (Sanitary Napkin Business Opportunity In India) ಗಾಗಿ ಸಾಫ್ಟ್ ಟಚ್ ಸೀಲಿಂಗ್ ಮಶೀನ್, ನ್ಯಾಪ್ಕಿನ್ ಕೋರ್ ಡೈ, ಯುವಿ ಟೀಟ್ ಯುನಿಟ್, ಡಿಫೈಬ್ರೆಶನ್ ಮಶೀನ್, ಕೋರ್ ಮಾರ್ನಿಂಗ್ ಮಶೀನ್ ಗಳನ್ನು ಸ್ಥಾಪಿಸಬೇಕು. ಇದಕ್ಕಾಗಿ ಒಟ್ಟು 70 ಸಾವಿರ ಹೂಡಿಕೆ ಮಾಡಬೇಕಾಗಲಿದೆ. ಈ ಯಂತ್ರಗಳನ್ನು ಖರೀದಿಸಿದ ಬಳಿಕ ಕಚ್ಚಾ ಸಾಮಗ್ರಿಗಳಾದ ವುಡ್ ಪಲ್ಪ್, ಟಾಪ್ ಲೇಯರ್, ಬ್ಯಾಕ್ ಲೇಯರ್, ರಿಲೀಸ್ ಪೇಪರ್, ಗಮ್, ಪ್ಯಾಕಿಂಗ್ ಕವರ್ ಇತ್ಯಾದಿಗಳ ವ್ಯವಸ್ಥೆ ಮಾಡಬೇಕು. ಈ ಸಾಮಗ್ರಿಗಳ ಖರೀದಿಗೆ ರೂ.36 ಸಾವಿರ ವೆಚ್ಚವಾಗಲಿದೆ.
5. Business Plan:ವರ್ಷಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಆದಾಯ - ಒಂದು ವರ್ಷದಲ್ಲಿ 300 ದಿನಗಳ ಕಾಲ ಒಂದು ವೇಳೆ ನಿಮ್ಮ ಯುನಿಟ್ ಕಾರ್ಯನಿರ್ವಹಿಸಿದರೆ ಸುಮಾರು 54000 (180x300=54,000) ಸ್ಯಾನಿಟರಿ ಪ್ಯಾಕೆಟ್ ಗಳ ಉತ್ಪಾದನೆ ಮಾಡಬಹುದು. ವಾರ್ಷಿಕವಾಗಿ ಇದರ ಮೇಲೆ ಸುಮಾರು 5.9 ಲಕ್ಷ ರೂ.ವೆಚ್ಚ ತಗುಲುತ್ತದೆ. ರಿಪೋರ್ಟ್ ನಲ್ಲಿ ವ್ಯಕ್ತಪಡಿಸಲಾಗಿರುವ ಅಂದಾಜಿನ ಪ್ರಕಾರ, ಸ್ಯಾನಿಟರಿ ನ್ಯಾಪ್ಕಿನ್ (Sanitary Napkin Business In India) ನ ಒಂದು ಪ್ಯಾಕೆಟ್ ನ ಸಗಟು ಬೆಲೆ ರೂ.13 ಆಗಿದೆ. ಒಟ್ಟು ಎಲ್ಲ ಸ್ಯಾನಿಟರಿ ನ್ಯಾಪ್ಕಿನ್ ಗಳ ಮಾರಾಟದಿಂದ ನಿಮಗೆ 7 ಲಕ್ಷ ಆದಾಯ ಬರುತ್ತದೆ. ಅಂದರೆ, ನಿಮ್ಮ ಒಟ್ಟು ಆದಾಯ 1 ಲಕ್ಷಕ್ಕೂ ಹೆಚ್ಚು ಇರಲಿದೆ.
6. Business Plan: ಚಿಕ್ಕ ಕೊಠಡಿಯಿಂದ ಈ ಬಿಸಿನೆಸ್ ಆರಂಭಿಸಬಹುದು - ಈ ಬಿಸಿನೆಸ್ (Sanitary Napkin Business Plan) ಆರಂಭಿಸಲು ನಿಮಗೆ ದೊಡ್ಡ ಫ್ಯಾಕ್ಟರಿ ಅಥವಾ ಪ್ಲಾಂಟ್ ಜಾಗದ ಅವಶ್ಯಕತೆ ಬೀಳುವುದಿಲ್ಲ. ಚಿಕ್ಕ ಕೊಠಡಿಯ ಮೂಲಕ ಕೂಡ ನೀವು ಈ ಬಿಸಿನೆಸ್ ಆರಂಭಿಸಬಹುದು. ಒಂದು ವೇಳೆ ನೀವು ಕೂಡ ಸ್ಯಾನಿಟರಿ ನ್ಯಾಪ್ಕಿನ್ ನ ಸಣ್ಣ ವ್ಯಾಪಾರ ಆರಂಭಿಸಲು ಬಯಸಿದರೆ, ನಿಮ್ಮ ಬಳಿ 16x6 ಸ್ಕ್ವೆಯರ್ ಫೂಟ್ ಜಾಗವಿರಬೇಕು ಹಾಗೂ ಅದರಲ್ಲಿ ನೀವು ಸ್ಯಾನಿಟರಿ ನ್ಯಾಪ್ಕಿನ್ ಯುನಿಟ್ ಆರಂಭಿಸಬಹುದು.