Business Idea: ಕೇವಲ 25 ಸಾವಿರದಲ್ಲಿ ಈ ವ್ಯಾಪಾರ ಪ್ರಾರಂಭಿಸಿ 30 ಲಕ್ಷಕ್ಕಿಂತ ಹೆಚ್ಚು ಗಳಿಸಿ!

ನೀವು ಸಹ ಕೆಲಸದ ಒತ್ತಡದಿಂದ ಹೊರಬಂದು ಒಂದು ಒಳ್ಳೆಯ ವ್ಯವಹಾರ ಪ್ರಾರಂಭಿಸುವ ಆಸೆಯಿದ್ದರೆ ಇಲ್ಲಿದೆ ಶುಭಸುದ್ದಿ. ಇಂದು ನಾವು ನಿಮಗಾಗಿ ಒಂದು ಉತ್ತಮ ಬ್ಯುಸಿನೆಸ್ ಐಡಿಯಾವನ್ನು ತಂದಿದ್ದೇವೆ. ಕೇವಲ 25 ಸಾವಿರ ರೂ. ಹೂಡಿಕೆ ಮಾಡುವ ಮೂಲಕ ನೀವು ಪ್ರತಿತಿಂಗಳು 3 ಲಕ್ಷ ರೂ.ಗಿಂತಲೂ ಹೆಚ್ಚು ಗಳಿಸುವ ಸುವರ್ಣಾವಕಾಶವಿದೆ. ವಿಶೇಷವೆಂದರೆ ಈ ವ್ಯವಹಾರ ಪ್ರಾರಂಭಿಸಲು ಸರ್ಕಾರದಿಂದ ಶೇ.50ರಷ್ಟು ಸಹಾಯಧನ ಪಡೆಯಬಹುದು. ಇದು ಮುತ್ತಿನ ಕೃಷಿಯ ವಿಶೇಷ ವ್ಯವಹಾರವಾಗಿದೆ. ಈ ವ್ಯವಹಾರದಿಂದ ಕೈತುಂಬಾ ಹಣ ಸಂಪಾದಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ನವದೆಹಲಿ: ನೀವು ಸಹ ಕೆಲಸದ ಒತ್ತಡದಿಂದ ಹೊರಬಂದು ಒಂದು ಒಳ್ಳೆಯ ವ್ಯವಹಾರ ಪ್ರಾರಂಭಿಸುವ ಆಸೆಯಿದ್ದರೆ ಇಲ್ಲಿದೆ ಶುಭಸುದ್ದಿ. ಇಂದು ನಾವು ನಿಮಗಾಗಿ ಒಂದು ಉತ್ತಮ ಬ್ಯುಸಿನೆಸ್ ಐಡಿಯಾವನ್ನು ತಂದಿದ್ದೇವೆ. ಕೇವಲ 25 ಸಾವಿರ ರೂ. ಹೂಡಿಕೆ ಮಾಡುವ ಮೂಲಕ ನೀವು ಪ್ರತಿತಿಂಗಳು 3 ಲಕ್ಷ ರೂ.ಗಿಂತಲೂ ಹೆಚ್ಚು ಗಳಿಸುವ ಸುವರ್ಣಾವಕಾಶವಿದೆ. ವಿಶೇಷವೆಂದರೆ ಈ ವ್ಯವಹಾರ ಪ್ರಾರಂಭಿಸಲು ಸರ್ಕಾರದಿಂದ ಶೇ.50ರಷ್ಟು ಸಹಾಯಧನ ಪಡೆಯಬಹುದು. ಇದು ಮುತ್ತಿನ ಕೃಷಿಯ ವಿಶೇಷ ವ್ಯವಹಾರವಾಗಿದೆ. ಈ ವ್ಯವಹಾರದಿಂದ ಕೈತುಂಬಾ ಹಣ ಸಂಪಾದಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಈ ವ್ಯವಹಾರದಿಂದ ನೀವು ಪ್ರತಿ ತಿಂಗಳು ಲಕ್ಷ ಲಕ್ಷ ರೂ. ಗಳಿಸಬಹುದು. ಈ ಬ್ಯುಸಿನೆಸ್ ಪ್ರಾರಂಭಿಸಲು ಸರ್ಕಾರದಿಂದ ಶೇ.50 ರವರೆಗೆ ಸಹಾಯಧನ ಸಿಗಲಿದೆ. ಇದು ಮುತ್ತು ಕೃಷಿಯ ವಿಶೇಷ ವ್ಯವಹಾರವಾಗಿದೆ. ಕಪ್ಪೆ ಚಿಪ್ಪು ಮತ್ತು ಮುತ್ತಿನ ವ್ಯಾಪಾರದ ಮೇಲೆ ಜನರ ಆಸಕ್ತಿ ಹೆಚ್ಚಿದೆ. ಅನೇಕ ಜನರು ಈ ಬ್ಯುಸಿನೆಸ್ ಮೂಲಕ ಕೈತುಂಬಾ ಹಣ ಸಂಪಾದಿಸುತ್ತಿದ್ದಾರೆ. ಈ ವ್ಯವಹಾರದಲ್ಲಿ ನೀವು ಹೆಚ್ಚು ಹೂಡಿಕೆ ಮಾಡಬೇಕಾಗಿಲ್ಲ.

2 /5

ಈ ವ್ಯವಹಾರ ಪ್ರಾರಂಭಿಸಲು ನಿಮಗೆ ಒಂದು ಸುಸಜ್ಜಿತ ಕೊಳ, ಕಪ್ಪೆ ಚಿಪ್ಪು ಮತ್ತು ಅಗತ್ಯ ತರಬೇತಿ ಬೇಕಾಗುತ್ತದೆ. ನಿಮ್ಮ ಖಾಲಿ ಜಾಗದಲ್ಲಿ ಅಥವಾ ಜಮೀನಿನಲ್ಲಿ ಒಂದು ಕೊಳವನ್ನು ನಿರ್ಮಿಸಿ ಮುತ್ತಿನ ಕೃಷಿ ಶುರುಮಾಡಬಹುದು. ಇದಕ್ಕೆ ಸರ್ಕಾರವೇ ನಿಮಗೆ ಧನಸಹಾಯ ನೀಡುತ್ತದೆ. ಇದರ ಸದುಪಯೋಗ ಪಡೆದುಕೊಂಡು ನೀವು ವ್ಯವಹಾರ ಪ್ರಾರಂಭಿಸಬಹುದು. ಇನ್ನು ಮುತ್ತು ಕೃಷಿಗೆ ಕಪ್ಪೆಚಿಪ್ಪುಗಳ ಬೇಕಾಗುತ್ತವೆ. ಭಾರತದ ಅನೇಕ ರಾಜ್ಯಗಳಲ್ಲಿ ಕಪ್ಪೆಚಿಪ್ಪುಗಳು ಲಭ್ಯವಿವೆ. ದಕ್ಷಿಣ ಭಾರತ ಮತ್ತು ಬಿಹಾರದ ದರ್ಭಾಂಗದ ಕಪ್ಪೆಚಿಪ್ಪುಗಳ ಗುಣಮಟ್ಟಕ್ಕೆ ಉತ್ತಮವಾಗಿದೆ. ಇಷ್ಟು ಮಾತ್ರವಲ್ಲದೆ ಇದರ ತರಬೇತಿಗಾಗಿ ದೇಶದಲ್ಲಿ ಹಲವು ಸಂಸ್ಥೆಗಳಿವೆ. ನೀವು ಮಧ್ಯಪ್ರದೇಶದ ಹೋಶಂಗಾಬಾದ್ ಮತ್ತು ಮುಂಬೈನಲ್ಲಿ ಮುತ್ತು ಕೃಷಿ ತರಬೇತಿ ಪಡೆಯಬಹುದು.  

3 /5

ನೀವು ಪಡೆಯುವ ತರಬೇತಿಯಲ್ಲಿಯೇ ಈ ವ್ಯವಹಾರ ಪ್ರಾರಂಭಿಸಲು ಬೇಕಾದ ಅಗತ್ಯ ಮಾಹಿತಿ ದೊರೆಯುತ್ತದೆ. ಅದರಂತೆ ನೀವು ವ್ಯವಹಾರ ಪ್ರಾರಂಭಿಸಿದರೆ ಕೈತುಂಬಾ ಗಳಿಸಲು ಹೆಚ್ಚು ಸಮಯ ಕಾಯಬೇಕಿಲ್ಲ.  

4 /5

ಒಂದು ಮುತ್ತು ಸುಮಾರು 120 ರಿಂದ 200 ರೂ.ಗೆ ಮಾರಾಟವಾಗುತ್ತದೆ. ಉತ್ತಮ ಗುಣಮಟ್ಟದ್ದಾದರೆ 200 ರೂ.ಗಿಂತಲೂ ಹೆಚ್ಚು ಬೆಲೆಗೆ ಮಾರಾಟ ಮಾಡಬಹುದು. ‘ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ’ಯಡಿ ನಿಮಗೆ ಆರ್ಥಿಕ ಸಹಾಯ ದೊರೆಯುತ್ತದೆ. ಇದರಿಂದ ಕಡಿಮೆ ಹೂಡಿಕೆಯ ಮೂಲಕ ನೀವು ಹೆಚ್ಚು ಲಾಭ ಗಳಿಸಬಹುದು.

5 /5

ನೀವು 1 ಎಕರೆ ಹೊಂಡದಲ್ಲಿ ಮುತ್ತಿನ ಕೃಷಿ ಶುರು ಮಾಡಿದ್ರೆ ಲಕ್ಷ ಲಕ್ಷ ಹಣ ಗಳಿಸಬಹುದು. ನಿಮ್ಮ ಎಲ್ಲಾ ಖರ್ಚು-ವೆಚ್ಚಗಳನ್ನು ಕಳೆದು ಈ ವ್ಯವಹಾರದಲ್ಲಿ ನೀವು ವಾರ್ಷಿಕವಾಗಿ 30 ಲಕ್ಷ ರೂ.ವರೆಗೆ ಹಣ ಗಳಿಸಬಹುದು.