ಒಂದು ವರ್ಷದ ಬಳಿಕ ಸ್ವರಾಶಿಗೆ ಬುಧನ ಪ್ರವೇಶ, 3 ಚಿನ್ನದಂತೆ ಹೊಳೆಯಲಿದೆ ಈ ರಾಶಿಗಳ ಜನರ ಭಾಗ್ಯ!

Mercury Transit To His Own House: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಬುಧ ತನ್ನ ಸ್ವರಾಶಿಯಾಗಿರುವ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ  ಒಟ್ಟು ಮೂರು ರಾಶಿಗಳ ಜಾತಕದವರ ಭಾಗ್ಯ ಚಿನ್ನದಂತೆ ಮೆರಗು ಪಡೆಯಲಿದ್ದು, ಅವರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. 
 

Mercury Transit 2023: ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ತನ್ನ ರಾಶಿಗಳನ್ನು ಪರಿವರ್ತಿಸುವ ಮೂಲಕ ಕೆಲವೊಮ್ಮೆ ತನ್ನ ಸ್ವರಾಶಿಗೂ ಕೂಡ ಪ್ರವೇಶಿಸುತ್ತವೆ ಮತ್ತು ಅವುಗಳ ಪ್ರಭಾವ ಮಾನವ ಜೀವನ ಮತ್ತು ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಗೋಚರಿಸುತ್ತದೆ. ಪ್ರಸ್ತುತ ಬುದ್ಧಿ ಹಾಗೂ ವ್ಯಾಪಾರ ಕಾರಕ ಗ್ರಹಣಾಗಿರುವ ಬುಧ ಸೆಪ್ಟೆಂಬರ್ ಆರಂಭದಲ್ಲಿ ತನ್ನ ಸ್ವರಾಶಿಯಾಗಿರುವ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಒಟ್ಟು ಮೂರು ರಾಶಿಗಳ ಜನರ ಭಾಗ್ಯೋದಯವಾಗಲಿದೆ ಹಾಗೂ ವ್ಯಾಪಾರದಲ್ಲಿ ಅವರಿಗೆ ಉತ್ತುಂಗಕ್ಕೆ ತಲುಪುವ ಯೋಗ ನಿರ್ಮಾಣಗೊಳ್ಳುತ್ತಿದೆ. ಬನ್ನಿ ಆ ಭಾಗ್ಯವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,

 

ಇದನ್ನೂ ಓದಿ-ಶೀಘ್ರದಲ್ಲಿಯೇ ಕರ್ಕ ರಾಶಿಯಲ್ಲಿ ವೈಭವದಾತನ ಉದಯ, ಶುಕ್ರದೆಸೆಯಿಂದ ಈ ರಾಶಿಗಳ ಜನರ ಮೇಲೆ ಹಣದ ಸುರಿಮಳೆ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

Mercury Transit To His Own House: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಬುಧ ತನ್ನ ಸ್ವರಾಶಿಯಾಗಿರುವ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ  ಒಟ್ಟು ಮೂರು ರಾಶಿಗಳ ಜಾತಕದವರ ಭಾಗ್ಯ ಚಿನ್ನದಂತೆ ಮೆರಗು ಪಡೆಯಲಿದ್ದು, ಅವರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ.   

2 /5

ಮಿಥುನ ರಾಶಿ: ಬುಧ ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ಸಂಚರಿಸಲಿದ್ದಾನೆ. ಇನ್ನೊಂದೆಡೆ ಆತ ನಿಮ್ಮ ಜಾತಕದ ಲಗ್ನ ಭಾವದ ಅಧಿಪತಿ ಕೂಡ ಹೌದು, ಹೀಗಾಗಿ ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವ ಹಾಗೂ ಮಾತಿನಲ್ಲಿ ಹೊಸ ಹೊಳಪು ಕಾಣಲು ಸಿಗಲಿದೆ. ಜನರು ನಿಮ್ಮತ್ತ ಆಕರ್ಷಿತರಾಗಲಿದ್ದಾರೆ. ಕೌಟುಂಬಿಕ ಬಿಸ್ನೆಸ್ ನಲ್ಲಿ ತೊಡಗಿರುವ ಜನರಿಗೆ ಈ ಸಮಯ ಸಾಕಷ್ಟು ಅನುಕೂಲಕರವಾಗಿದೆ. ಪಿತಾರ್ಜಿತ ಆಸ್ತಿ ಸಿಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಮತ್ತು ಈ ಅವಧಿಯಲ್ಲಿ ನೀವು ಮನೆ-ವಾಹನ ಖರೀದಿಸುವ ಸಾಧ್ಯತೆ ಕೂಡ ಇದೆ.  

3 /5

ತುಲಾ ರಾಶಿ: ಬುಧ ನಿಮ್ಮ ಗೋಚರ ಜಾತಕದ ಆದಾಯ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಬುಧನ ಈ ಸ್ವರಾಶಿ ಗೋಚರ ನಿಮ್ಮ ಪಾಲಿಗೆ ಹಣಕಾಸಿನ ದೃಷ್ಟಿಯಿಂದ ಅತ್ಯಂತ ಶುಭ ಸಾಬೀತಾಗಲಿದೆ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ಆರ್ಥಿಕ ಸಂಕಷ್ಟಗಳು ನಿವಾರಣೆಯಾಗಿ ಧನಲಾಭವಾಗುವ ಸಾಧ್ಯತೆ ಇದೆ. ಷೇರು ಮಾರುಕಟ್ಟೆ. ಲಾಟರಿ ವ್ಯವಹಾರಗಳಲ್ಲಿ ನಿಮಗೆ ಲಾಭ ಸಿಗಲಿದೆ. ಮಕ್ಕಳ ಕಡೆಯಿಂದ ಶುಭ ಸಮಾಚಾರ ಪ್ರಾಪ್ತಿಯಾಗುವ ಸಾಧ್ಯತೆ ಇದೆ.   

4 /5

ಸಿಂಹ ರಾಶಿ: ಬುಧನ ಈ ಸ್ವರಾಶಿ ಗೋಚರ ನಿಮ್ಮ ಜಾತಕದ ಧನಭಾವದಲ್ಲಿ ನೆರವೇರುತ್ತಿದೆ. ಇದಲ್ಲದೆ ಆತ ನಿಮ್ಮ ಗೋಚರ ಜಾತಕದ ಧನಭಾವಕ್ಕೆ ಅಧಿಪತಿ ಕೂಡ ಹೌದು, ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳ ಕಂಡುಬರಲಿದೆ. ನೌಕರವರ್ಗದ ಜನರ ವೇತನ ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಹುದ್ದೆಯ ಸ್ಥಾನ ಹೆಚ್ಚಾಗಲಿದೆ. ಬುಧನ ಕೃಪೆಯಿಂದ ನಿಮ್ಮ ಮಾತಿನ ಪ್ರಭಾವ ಹೆಚ್ಚಾಗ್ಲಿದೆ. ವ್ಯಾಪಾರದ ಸ್ಥಿತಿ ಸುಧಾರಣೆಯಾಗಿ ಆರ್ಥಿಕ ಲಾಭ ನಿಮ್ಮದಾಗಲಿದೆ. ದೀರ್ಘಕಾಲದಿಂದ ನಿಮಗೆ ಬರೆಬೇಕಿದ್ದ ಮತ್ತು ಸಿಲುಕಿಕೊಂಡ ಹಣ ನಿಮ್ಮತ್ತ ಮರಳಲಿದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)