Bollywood actress kids : ನಟ-ನಟಿಯರ ವಂಶಸ್ಥರು ತಮ್ಮ ಅದೃಷ್ಟ ಪರೀಕ್ಷೆಗೆ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ. ಕೆಲವರ ಚಿತ್ರಗಳು ಹಿಟ್ ಮೇಲೆ ಹಿಟ್ ಬಾರಿಸುತ್ತದ್ದೇ, ಇನ್ನು ಕೆಲವರ ಸಿನಿಮಾಗಳು ಫ್ಲಾಪ್ ಆಗುತ್ತಿದ್ದಾರೆ. ಆದರೆ ಕೆಲವು ಸ್ಟಾರ್ ಮಕ್ಕಳು ಬಾಲಿವುಡ್ ಪ್ರವೇಶಿಸದೆ ಖ್ಯಾತಿ ಗಳಿಸಿದ್ದಾರೆ. ಅವರು ಯಾರು ಅಂತ ನೋಡೋಣ ಬನ್ನಿ..
ಅನುರಾಗ್ ಕಶ್ಯಪ್ ಅವರ ಮಗಳು ಆಲಿಯಾ ಕಶ್ಯಪ್ ಅನೇಕರಿಗೆ ತಿಳಿದಿಲ್ಲ. ಆದ್ರೆ ಈಕೆ ಹೆಚ್ಚಾಗಿ ಸಾಮಾಜಿಕ ಸಕ್ರಿಯವಾಗಿದ್ದು, ಬಾಯ್ಫ್ರೆಂಡ್ನೊಂದಿಗೆ ಸಂಬಂಧವಿರಲಿ ಅಥವಾ ಪಾರ್ಟಿಗಳಲ್ಲಿ ಸುತ್ತಾಟದ ಮೂಲಕ ಸುದ್ದಿಯಲ್ಲಿರುತ್ತಾರೆ.
ಇಬ್ರಾಹಿಂ ಅಲಿ ಖಾನ್ ಬಾಲಿವುಡ್ ಹೀರೋ ಸೈಫ್ ಅಲಿ ಖಾನ್ ಅವರ ಮಗ. ಇಬ್ರಾಹಿಂ ಅಲಿ ಖಾನ್ ಕ್ರೇಜ್ಗೆ ಅಂದ ಚಂದ ಒಂದು ಕಾರಣವಾದರೆ ಪಟೌಡಿಯ ಕೌಟುಂಬಿಕ ಹಿನ್ನೆಲೆ ಇನ್ನೊಂದು ಕಾರಣ. ಸಿನಿಮಾಗೆ ಬರದೇ ಸ್ಟಾರ್ ಈಗಾಗಲೇ ಸಖತ್ ಕ್ರೇಜ್ ಹೊಂದಿದ್ದಾರೆ.
ಐರಾ ಖಾನ್ ಅಮೀರ್ ಖಾನ್ ಅವರ ಪ್ರೀತಿಯ ಮಗಳು. ಆಕೆಗೆ ನಟನೆಯಲ್ಲಿ ಆಸಕ್ತಿ ಇಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಫಾಲೋಯಿಂಗ್ ಮೂಲಕ ಕ್ರೇಜ್ ಗಳಿಸಿದ್ದಾರೆ.
ಚಿತ್ರರಂಗದ ಪ್ರಸಿದ್ಧ ಕುಟುಂಬದಿಂದ ಬಂದಿರುವ ನವ್ಯಾ ನವೇಲಿಗೆ ನಟನೆಯಲ್ಲಿ ಆಸಕ್ತಿ ಇಲ್ಲ. ಆಕೆ ಯುವ ಉದ್ಯಮಿ. ಆದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಜನಪ್ರಿಯವಾಗಿದ್ದಾರೆ.
ನೈಸಾ ದೇವಗನ್ ನೀಸಾ ದೇವಗನ್ ಬಾಲಿವುಡ್ ಸ್ಟಾರ್ ನಟರಾದ ಅಜಯ್ ದೇವಗನ್ ಮತ್ತು ಕಾಜೋಲ್ ಅವರ ಪುತ್ರಿ. ಯಾವಾಗಲೂ ಫ್ಯಾಷನ್, ಪಾರ್ಟಿಗಳೊಂದಿಗೆ ಸುದ್ದಿಯಲ್ಲಿರುತ್ತದೆ. ಸಿನಿಮಾ ಮಾಡಿಲ್ಲವಂದ್ರೂ ಈ ಸುಂದರಿಗೆ ಫ್ಯಾನ್ಸ್ ಪಾಲೋಯಿಂಗ್ ಹೆಚ್ಚು.