ಚೆಂದುಳ್ಳ ಚೆಲುವಿ ನಿನ್ನ ಅಂದ ಅಳದ ಮ್ಯಾಗಿನ ಬ್ರಹ್ಮ ಕಳಿಸ್ಯಾನ ಸುರದ..! ಫೊಟೋಸ್‌ ನೋಡಿ..

Sonal Chauhan : ಸೋನಾಲ್ ಚೌಹಾನ್ 'ಜನ್ನತ್' ಚಿತ್ರದ ಮೂಲಕ ಸಾಕಷ್ಟು ಗಮನ ಸೆಳೆದ ನಟಿ.. ಈ ಸಿನಿಮಾದ ಮೂಲಕ ರಾತ್ರೋರಾತ್ರಿ ಪ್ರೇಕ್ಷಕರ ನೆಚ್ಚಿನ ನಟಿಯಾಗಿ ಹೊರ ಹೊಮ್ಮಿದ ಸುಂದರಿ. ಆದರೆ ಈ ಚಿತ್ರದ ನಂತರ ತಮ್ಮ ಯಶಸ್ಸನ್ನು ಉಳಿಸಿಕೊಳ್ಳಲು ವಿಫಲವಾದರು.. ಆದ್ರೆ ಸೋಷಿಯಲ್‌ ಮೀಡಿಯಾದಲ್ಲಿ ಈಕೆಯದ್ದೇ ಹವಾ..

1 /9

ಹಿಂದಿ ಚಲನಚಿತ್ರಗಳಲ್ಲಿ ಯಶಸ್ಸಿನ ಕೊರತೆಯಿಂದಾಗಿ ಸೋನಾಲ್‌ ದಕ್ಷಿಣದ ಚಲನಚಿತ್ರಗಳತ್ತ ಮುಖಮಾಡಿದರು.. ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.. ಕೆಲವು ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆಯನ್ನು ಕಂಡವು, ಆದರೆ ಇಂದಿಗೂ ಸೋನಾಲ್ ಚೌಹಾನ್ ಜನರಿಗೆ ತಿಳಿದಿದ್ದರೆ ಅದು 'ಜನ್ನತ್' ಚಿತ್ರದಿಂದಾಗಿ.  

2 /9

ಸೋನಾಲ್ ಚೌಹಾಣ್ 16 ಮೇ 1987 ರಂದು ದೆಹಲಿಯಲ್ಲಿ ರಜಪೂತ ಕುಟುಂಬದಲ್ಲಿ ಜನಿಸಿದರು. ಸೋನಾಲ್ ತನ್ನ ಆರಂಭಿಕ ಶಿಕ್ಷಣವನ್ನು ನೋಯ್ಡಾದ ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಮುಗಿಸಿದರು. ದೆಹಲಿ ವಿಶ್ವವಿದ್ಯಾಲಯದ ಗಾರ್ಗಿ ಕಾಲೇಜಿನಲ್ಲಿ ತತ್ವಶಾಸ್ತ್ರದಲ್ಲಿ ಪದವಿ ಪಡೆದರು.   

3 /9

ಪದವಿಯ ನಂತರ, ಮಾಡೆಲಿಂಗ್‌ ಕ್ಷೇತ್ರದ ಆಸಕ್ತಿಯಿಂದಾಗಿ ಸೋನಾಲ್ ಮಲೇಷ್ಯಾಕ್ಕೆ ತೆರಳಿದರು. 2005 ರಲ್ಲಿ ಮಲೇಷ್ಯಾದಲ್ಲಿ ವಿಶ್ವ ಸುಂದರಿ ಟೂರಿಸಂ ಪ್ರಶಸ್ತಿಯನ್ನು ಗೆದ್ದರು. ಈ ಪ್ರಶಸ್ತಿಯನ್ನು ಪಡೆದ ಏಕೈಕ ಭಾರತೀಯ ಮಹಿಳೆ ಸೋನಾಲ್.   

4 /9

ಈ ಶೀರ್ಷಿಕೆಯು ಸೋನಾಲ್ ಅನ್ನು ಬಹಳ ಪ್ರಸಿದ್ಧಗೊಳಿಸಿತು, ನಂತರ ಅವರ ಚಿತ್ರವನ್ನು FHM ನ ಕವರ್ ಪೇಜ್‌ನಲ್ಲಿ ಪ್ರಕಟಿಸಲಾಯಿತು.   

5 /9

ಸೋನಾಲ್ 2006 ರಲ್ಲಿ ಹಿಮೇಶ್ ರೇಶಮಿಯಾ ಅವರ ಸೂಪರ್‌ಹಿಟ್ ಆಲ್ಬಂ 'ಆಪ್ಕಾ ಸುರೂರ್' ನೊಂದಿಗೆ ಪಾದಾರ್ಪಣೆ ಮಾಡಿದರು. ನಂತರ ಮಹೇಶ್ ಭಟ್ ಜನ್ನತ್ ಚಿತ್ರಕ್ಕಾಗಿ ಸೋನಾಲ್ ಅವರನ್ನು ಸಂಪರ್ಕಿಸಿದರು.   

6 /9

ಜನ್ನತ್ ಚಿತ್ರದ ಹಾಡುಗಳನ್ನು ಜನರು ಇಂದಿಗೂ ಇಷ್ಟಪಡುತ್ತಾರೆ. ಈ ಚಿತ್ರವು ಸೋನಲ್ ರನ್ನು ರಾತ್ರೋರಾತ್ರಿ ಸ್ಟಾರ್‌ ನಟಿಯನ್ನಾಗಿಸಿತು. ಅದರ ನಂತರ ಸೋನಾಲ್ ಅನೇಕ ಚಲನಚಿತ್ರ ಆಫರ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದರು.   

7 /9

ಜನ್ನತ್ ಚಿತ್ರದ ನಂತರ ಸೋನಲ್ ಗೆ ಸಾಕಷ್ಟು ಆಫರ್‌ಗಳು ಬಂದವು. ಆದರೆ ಜನಕ್ಕೆ ಯಾವ ಚಿತ್ರವೂ ಇಷ್ಟವಾಗಲಿಲ್ಲ. ಸಿನಿರಂಗದಲ್ಲಿ ಸೋಲು ಕಂಡರೂ ಸೋನಾಲ್ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಉಳಿಸಿಕೊಂಡಿದ್ದಾರೆ..  

8 /9

ಸೋನಾಲ್ ಚೌಹಾಣ್ ಕೊನೆಯದಾಗಿ ಆದಿಪುರುಷ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು, ಅದರಲ್ಲಿ ಅವರು ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.. ಆದಿಪುರುಷ ಚಿತ್ರದಲ್ಲಿ ಸೋನಾಲ್ ರಾವಣನ ಪತ್ನಿ ಮಂಡೋದರಿ ಪಾತ್ರವನ್ನು ನಿರ್ವಹಿಸಿದ್ದಾರೆ.   

9 /9

ಚಲನಚಿತ್ರಗಳಿಲ್ಲದಿದ್ದರೂ, ಸೋನಾಲ್ ಅತ್ಯಂತ ಶ್ರೀಮಂತ ನಟಿ, ಸಾಮಾಜಿಕ ಮಾಧ್ಯಮ ಮತ್ತು ಜಾಹೀರಾತುಗಳಿಂದ ಆದಾಯವನ್ನು ಗಳಿಸುತ್ತಿದ್ದಾರೆ. ಫಿಲ್ಮ್ ಡೇಟಾ ಪ್ರಕಾರ, ಸೋನಾಲ್ ಚೌಹಾಣ್ ಆಸ್ತಿ ಮೌಲ್ಯ.. 70 ಕೋಟಿ ರೂ. ಎನ್ನಲಾಗಿದೆ..