ಆ ಸ್ಟಾರ್ ಹೀರೋಗಳು ಮಧ್ಯರಾತ್ರಿ ಬಾ ಅಂತ ಕರೆಯುತ್ತಿದ್ದರು... ಇಲ್ಲದಿದ್ದರೆ..! ಮಂಚದ ಮ್ಯಾಟರ್‌ ಬಿಚ್ಚಿಟ್ಟ ಮಲ್ಲಿಕಾ

Mallika Sherawat on Casting couch : ಮಲ್ಲಿಕಾ ಶೆರಾವತ್ ಬಹುಬಾಷಾ ಚಿತ್ರಗಳಲ್ಲಿ ನಟಿಸಿದ್ದಾರೆ.. ಬೋಲ್ಡ್ ಬ್ಯೂಟಿ ಅಂತಲೇ ಈಕೆಯನ್ನ ಅಭಿಮಾನಿಗಳು ಪ್ರಿತಿಯಿಂದ ಕರೆಯುತ್ತಿದ್ದರು. ತೆರೆಯ ಮೇಲೆ ಒಂದರ ಹಿಂದೆ ಒಂದರಂತೆ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಇಂಡಸ್ಟ್ರಿಯಲ್ಲಿ ತನಗೊಂದು ವಿಶೇಷ ಸ್ಥಾನ ಗಳಿಸಿದ್ದಾರೆ. ಬಹಳ ದಿನಗಳಿಂದ ಬೆಳ್ಳಿತೆರೆಯಿಂದ ದೂರ ಉಳಿದಿದ್ದ ಮಲ್ಲಿಕಾ ಶೆರಾವತ್ ತೃಪ್ತಿ ದಿಮ್ರಿ ಅಭಿನಯದ 'ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ' ಮೂಲಕ ಬೆಳ್ಳಿತೆರೆಗೆ ರೀ ಎಂಟ್ರಿ ಕೊಡಲಿದ್ದಾರೆ.
 

1 /5

ಇದರ ನಡುವೆ ಮಲ್ಲಿಕಾಗೆ ಸಂಬಂಧಪಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ತಮಗಾದ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಬಾಲಿವುಡ್‌ನ 'ಸ್ಟಾರ್‌ ಹಿರೋಗಳು' ತಮ್ಮನ್ನು ಹೇಗೆ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು ಎಂಬುದನ್ನು ಮಲ್ಲಿಕಾ ಶೆರಾವತ್ ಹೇಳಿದ್ದಾರೆ.  

2 /5

ಈ ವಿಡಿಯೋದಲ್ಲಿ ಸಿನಿಮಾ ಹೀರೋಗಳು ಅವರನ್ನು ಭೇಟಿಯಾಗಲು ರಾತ್ರಿ ವೇಳೆ ಕರೆ ಮಾಡುತ್ತಿದ್ದರು ಎನ್ನಲಾಗಿದೆ. ಅಲ್ಲದೆ, ಅದರ ಮಾತಿಗೆ ಒಪ್ಪದಿದ್ದರೆ, ಪರದೆಯ ಮೇಲೆ ಇಷ್ಟು ಬೋಲ್ಡ್ ಪಾತ್ರ ಮಾಡುವ ನೀನು ರಾತ್ರಿ ಭೇಟಿಯಾಗಲು ತೊಂದರೆಯಾ ಏನು ಅಂತ ಕೇಳುತ್ತಿದ್ದರು ಅಂತ ಮಲ್ಲಿಕಾ ನೋವು ತೋಡಿಕೊಂಡಿದ್ದಾರೆ..  

3 /5

ತೆರೆಯ ಮೇಲೆ ಬೋಲ್ಡ್ ಆಗಿದ್ದರೆ ನಿಜ ಜೀವನದಲ್ಲೂ ರಾಜಿ ಮಾಡಿಕೊಳ್ಳುತ್ತಾರೆ ಎಂದು ನಟರು ಭಾವಿಸಿದ್ದರು ಎಂದು ಮಲ್ಲಿಕಾ ಶೆರಾವತ್ ಹೇಳಿದ್ದಾರೆ. ನಟರ ಜೊತೆ ರಾಜಿ ಮಾಡಿಕೊಳ್ಳಲು ನಿರಾಕರಿಸಿದ್ದಕ್ಕೆ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಅದಕ್ಕಾಗಿ ನಾನು ಬಾಲಿವುಡ್‌ನಿಂದ ದೂರ ಇದ್ದೇನೆ ಎಂದಿದ್ದಾರೆ..  

4 /5

ಬಾಲಿವುಡ್ ತೊರೆದ ನಂತರ ಮಲ್ಲಿಕಾ ಶೆರಾವತ್ ಹಾಲಿವುಡ್ ಚಿತ್ರಗಳತ್ತ ಮುಖ ಮಾಡಿದರು. ಅನೇಕ ಅಂತರರಾಷ್ಟ್ರೀಯ ಪ್ರಾಜೆಕ್ಟ್‌ಗಳಲ್ಲಿಯೂ ನಟಿಸಿದ್ದಾರೆ. ಬಾಲಿವುಡ್ ಸಿನಿಮಾಗಳ ಮಟ್ಟಿಗೆ ಹೇಳುವುದಾದರೆ, 'ಮರ್ಡರ್', 'ಡರ್ಟಿ ಪಾಲಿಟಿಕ್ಸ್', 'ಹಿಸ್' ಮತ್ತು 'ಖ್ವಾಹಿಶ್' ಸೇರಿದಂತೆ ಮುಂತಾದ ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ.  

5 /5

ಅಷ್ಟೇ ಅಲ್ಲ, ಕನ್ನಡ ಸೇರಿದಂತೆ ಹಲವು ದಕ್ಷಿಣ ಸಿನಿರಂಗದ ಸಿನಿಮಾಗಳಲ್ಲಿ ಐಟಂ ಸಾಂಗ್‌ಗಳಲ್ಲಿ ಈ ಚೆಲುವೆ ಸೊಂಟ ಬಳುಕಿಸಿದ್ದಾರೆ.. ʼಈ ಪ್ರೀತಿ ಯಾಕೆ ಭೂಮಿ ಮೇಲಿದೆʼ ಸಿನಿಮಾದಲ್ಲಿ ಗೌರಿ ಪಾಳ್ಯದ ಗಲ್ಲಿ ಎಂಬ ಹಾಡಿನಲ್ಲಿ ಮಲ್ಲಿಕಾ ಕಾಣಿಸಿಕೊಂಡಿದ್ದರು.. ಈ ಹಾಡು ಇಂದಿಗೂ ಜನಪ್ರಿಯ..