2020-21ನೇ ಹಣಕಾಸು ವರ್ಷದಲ್ಲಿ ಬಿಜೆಪಿಗೆ ಹರಿದುಬಂದ ದೇಣಿಗೆ ಮೊತ್ತ ಎಷ್ಟು ಗೊತ್ತಾ..?

2020-21ನೇ ಹಣಕಾಸು ವರ್ಷದಲ್ಲಿ ಬಿಜೆಪಿಗೆ ದೇಣಿಗೆ ರೂಪದಲ್ಲಿ ಬರೋಬ್ಬರಿ 477.5 ಕೋಟಿ ರೂ. ಹಣ ಹರಿದುಬಂದಿದೆ.

ನವದೆಹಲಿ: 2020-21ನೇ ಹಣಕಾಸು ವರ್ಷದಲ್ಲಿ ಬಿಜೆಪಿಗೆ ದೇಣಿಗೆ ರೂಪದಲ್ಲಿ ಬರೋಬ್ಬರಿ 477.5 ಕೋಟಿ ರೂ. ಹಣ ಹರಿದುಬಂದಿದೆ. ಇದೇ ಅವಧಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 74.50 ಕೋಟಿ ರೂ. ದೇಣಿಗೆ ಬಂದಿದೆ ಎಂದು ವರದಿಯಾಗಿದೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಕೇಂದ್ರ ಚುನಾವಣಾ ಆಯೋಗದ ವೆಬ್‍ಸೈಟ್‍ನಲ್ಲಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ 2020-21ನೇ ಹಣಕಾಸು ವರ್ಷದಲ್ಲಿ ಬಿಜೆಪಿ-ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳಿಗೆ ಕೋಟ್ಯಂತರ ರೂ. ದೇಣಿಗೆ ರೂಪದಲ್ಲಿ ಹರಿದುಬಂದಿದೆ. ಈ ವರ್ಷವೂ ಕೇಸರಿ ಪಕ್ಷಕ್ಕೆ ಅತಿಹೆಚ್ಚಿನ ದೇಣಿಗೆ ಹರಿದುಬಂದಿದೆ.  

2 /4

ಚುನಾವಣಾ ಆಯೋಗದ ವೆಬ್‍ಸೈಟ್‍ನಲ್ಲಿ ಪ್ರಕಟಿಸಿರುವ ಪಕ್ಷಗಳ ದೇಣಿಗೆ ವರದಿಯ ಪ್ರಕಾರ, ಬಿಜೆಪಿಗೆ ವಿವಿಧ ಸಂಸ್ಥೆಗಳು, ಟ್ರಸ್ಟ್ ಗಳು, ವ್ಯಕ್ತಿಗಳಿಂದ ದೊರೆತಿರುವ ಒಟ್ಟು ದೇಣಿಗೆಯ ಮೊತ್ತ 4,77,54,50,077 ರೂ. ಆಗಿದೆ. 

3 /4

ಕಾಂಗ್ರೆಸ್ ಪಕ್ಷಕ್ಕೆ ವಿವಿಧ ಸಂಸ್ಥೆಗಳು, ವ್ಯಕ್ತಿಗಳಿಂದ ಒಟ್ಟು 74,50,49,731 ರೂ. ದೇಣಿಗೆ ಹರಿದುಬಂದಿದೆ. ಚುನಾವಣಾ ಕಾಯ್ದೆ ಪ್ರಕಾರ 20 ಸಾವಿರ ರೂ. ಮೀರಿ ದೇಣಿಗೆ ಪಡೆದಲ್ಲಿ ಆ ಕುರಿತು ರಾಜಕೀಯ ಪಕ್ಷಗಳು ಕಡ್ಡಾಯವಾಗಿ ವರದಿ ಸಲ್ಲಿಸಬೇಕು.

4 /4

ಬಿಜೆಪಿಯು ಮಾ.14ರಂದು ಚುನಾವಣಾ ಸಮಿತಿಗೆ 2020-21ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದ ದೇಣಿಗೆ ಸ್ವೀಕೃತಿ ವರದಿ ಸಲ್ಲಿಸಿದೆ.