“ಆತ ಮುಸ್ಲಿಂ.. ಧರ್ಮಕ್ಕಾಗಿ ಪ್ರೀತಿ ತ್ಯಾಗ ಮಾಡುತ್ತಿದ್ದೇವೆ”- 4 ವರ್ಷಗಳ ಪ್ರೇಮಕ್ಕೆ ಬ್ರೇಕಪ್ ಹೇಳಿದ ಬಿಗ್’ಬಾಸ್ ಜೋಡಿ

Himanshi Khurana and Asim Riaz: ಬಿಗ್ ಬಾಸ್ ಹಿಂದಿ ಸೀಸನ್ 13ರ ಖ್ಯಾತಿಯ ಹಿಮಾಂಶಿ ಖುರಾನಾ ಮತ್ತು ಆಸಿಮ್ ರಿಯಾಜ್ ತಮ್ಮ 4 ವರ್ಷಗಳ ಪ್ರೀತಿಗೆ ಅಂತ್ಯ ಹಾಡಿದ್ದಾರೆ. ಈ ಮಾಹಿತಿಯನ್ನು ಸ್ವತಃ ಹಿಮಾಂಶಿ ಅವರೇ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

1 /7

ಬಿಗ್ ಬಾಸ್ ಸೀಸನ್ 13ರ ಖ್ಯಾತಿಯ ಹಿಮಾಂಶಿ ಖುರಾನಾ ಮತ್ತು ಅಸಿಮ್ ರಿಯಾಜ್ ಧರ್ಮದ ಕಾರಣದಿಂದಾಗಿ ತಮ್ಮ ನಾಲ್ಕು ವರ್ಷಗಳ ಸುದೀರ್ಘ ಪ್ರೀತಿಗೆ ಬ್ರೇಕಪ್ ಹೇಳಿದ್ದಾರೆ.

2 /7

ಡಿಸೆಂಬರ್ 6 ರಂದು ಪೋಸ್ಟ್ ಮಾಡುವ ಮೂಲಕ, ಅವರು ತಮ್ಮ ವಿಭಿನ್ನ ಧಾರ್ಮಿಕ ನಂಬಿಕೆಗಳಿಂದಾಗಿ ತಾನು ಮತ್ತು ಆಸಿಮ್ ಬೇರ್ಪಟ್ಟಿದ್ದೇವೆ ಎಂದು ಹೇಳಿದ್ದರು. ಅಸಿಮ್ ಜೊತೆಗಿನ ಚಾಟ್‌ ಸ್ಕ್ರೀನ್‌ ಶಾಟ್ ಹಂಚಿಕೊಂಡ ಹಿಮಾಂಶಿ, ಆ ಬಳಿಕ ತಮ್ಮ ಎಕ್ಸ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ.

3 /7

ಹಿಮಾಂಶಿ ಖುರಾನಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ತಮ್ಮ ಮತ್ತು ಅಸಿಮ್ ರಿಯಾಜ್ ನಡುವಿನ ಚಾಟ್‌’ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಇಬ್ಬರೂ ತಮ್ಮ ಬ್ರೇಕಪ್ ಕಾರಣವನ್ನು ಜಗತ್ತಿಗೆ ಹೇಳುವ ಬಗ್ಗೆ ಮಾತನಾಡುತ್ತಿದ್ದಾರೆ.

4 /7

ಇದರೊಂದಿಗೆ “ನಾನು ಜಾತ್ಯತೀತ ವ್ಯಕ್ತಿ ಎಂದು ಸ್ಪಷ್ಟಪಡಿಸಲು ಇದು ನನ್ನ ಕೊನೆಯ ಮತ್ತು ಅಂತಿಮ ಹೇಳಿಕೆಯಾಗಿದೆ. ನಾನು ಯಾವುದೇ ಧರ್ಮವನ್ನು ಅವಮಾನಿಸುವುದಿಲ್ಲ. ನಾನು ಈಗಷ್ಟೇ ನನ್ನ ಧರ್ಮವನ್ನು ಆರಿಸಿಕೊಂಡಿದ್ದೇನೆ” ಎಂದು ಹಿಮಾಂಶಿ ಬರೆದುಕೊಂಡಿದ್ದಾರೆ.

5 /7

“ಬ್ರೇಕಪ್‌’ಗೆ ಅಸಿಮ್ ಕಾರಣ ಎಂದು ದೂಷಿಸಬಾರದು. ನೀವು ಯಾರೂ ನನ್ನ ವಿರುದ್ಧ ಮಾತನಾಡಬಾರದು ಎಂದು ನಾನು ಬಯಸುತ್ತೇನೆ” ಎಂದಿದ್ದಾರೆ.

6 /7

ಹಿಮಾಂಶಿಯ ಈ ಪೋಸ್ಟ್‌’ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ಬಳಿಕ ಹಿಮಾಂಶಿ ತನ್ನ ಎಕ್ಸ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ.

7 /7

ಹಿಮಾಂಶಿ ಖುರಾನಾ ಮತ್ತು ಅಸಿಮ್ ರಿಯಾಜ್ ಪ್ರೇಮಕಥೆ ಬಿಗ್ ಬಾಸ್ 13 ಮನೆಯಲ್ಲಿ ಪ್ರಾರಂಭವಾಗಿತ್ತು. ಇಬ್ಬರೂ 4 ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಆದರೆ ಡಿಸೆಂಬರ್ 6 ರಂದು, ಹಿಮಾಂಶಿ ಖುರಾನಾ ಅಸಿಮ್ ಜೊತೆಗಿನ ಬ್ರೇಕಪ್’ನ್ನು ಘೋಷಿಸುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.