Maruti Suzuki ತನ್ನ ಈ ಕಾರುಗಳ ಮೇಲೆ ಜಬರ್ದಸ್ತ್ ಡಿಸ್ಕೌಂಟ್ ಆಫರ್ ಮಾಡುತ್ತಿದೆ , ಡಿಟೇಲ್ ತಿಳಿದುಕೊಳ್ಳಲು ಸುದ್ದಿ ಓದಿ

Car Discount: ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿ Maruti Suzuki ಭಾರತೀಯ ಮಾರುಕಟ್ಟೆಯ ಮೇಲೆ ಯಾವ ರೀತಿ ಹಿಡಿತ ಇದೆ ಎಂದರೆ. ಕಳೆದ ತಿಂಗಳು ಅಂದರೆ ಏಪ್ರಿಲ್ ನಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟಗೊಂಡ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಮೊದಲ ಐದು ಸ್ಥಾನಗಳಲ್ಲಿ ಮಾರುತಿ -ಸುಜುಕಿ ಕಂಪನಿಯ ಕಾರುಗಳಿವೆ.

Car Discount: ಕಳೆದ ತಿಂಗಳು ಅಂದರೆ ಏಪ್ರಿಲ್ ನಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟಗೊಂಡ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಮೊದಲ ಐದು ಸ್ಥಾನಗಳಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರುಗಳಿವೆ ಎಂಬ ಸಂಗತಿಯ ಮೇಲೆ ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿಯ ಕಂಪನಿಯ ಮಾರುಕಟ್ಟೆಯ ಮೇಲಿನ ಪ್ರಾಬಲ್ಯವನ್ನು ನೀವು ಅಳೆಯಬಹುದು.  ಮಾರುತಿ ಸುಜುಕಿಯ ಈ ಕಾರುಗಳ ಮೇಲೆ ಕಾಲ-ಕಾಲಕ್ಕೆ ಡಿಸ್ಕೌಂಟ್ ಕೂಡ ಸಿಗುತ್ತದೆ. ಉದಾಹರಣೆಗೆ ಕಂಪನಿಯ ಅತ್ಯಂತ ಅಗ್ಗದ ಕಾರು ಅಂದರೆ, Maruti Suzuki Alto ಕುರಿತು ಹೇಳುವುದಾದರೆ, ನಿಮಗೆ ಈ ಕಾರಿನ ಮೇಲೆ 15 ಸಾವಿರ ಹೆಚ್ಚುವರಿ ಕ್ಯಾಶ್ ಡಿಸ್ಕೌಂಟ್ ಸಿಗುತ್ತದೆ. ಒಂದು ವೇಳೆ ನೀವು ನಿಮ್ಮ ಹಳೆ ಕಾರಿನ ಬದಲು ಈ ಹೊಸ ಕಾರನ್ನು ಖರೀದಿಸಿದರೆ, ನಿಮಗೆ 15 ಸಾವಿರ ರೂ.ಗಳ ಹೆಚ್ಚುವರಿ ಡಿಸ್ಕೌಂಟ್ ಸಿಗುತ್ತದೆ. ಮಾಡೆಲ್ ಆಧರಿಸಿ ಗ್ರಾಹಕರು ರೂ.10, 000 ದಿಂದ 20,000 ರೂಗಳ ವರೆಗೆ ಎಕ್ಸ್ಚೆಂಜ್ ಬೋನಸ್ ಪಡೆಯಬಹುದು. ಇದಲ್ಲದೆ ರೂ.5 ಸಾವಿರ ಕಾರ್ಪೋರೆಟ್ ಡಿಸ್ಕೌಂಟ್ ಕೂಡ ಸಿಗುತ್ತದೆ. 

 

ಇದನ್ನೂ ಓದಿ - Top Selling Cars In India: FY 2021ರಲ್ಲಿ ಅತ್ಯಧಿಕ ಮಾರಾಟಗೊಂಡ ಐದು ಕಾರುಗಳು, ಪಾರುಪತ್ಯ ಮೆರೆದ Maruti Suzuki

 

ಮಾರುತಿ ಸುಜುಕಿ ಕಾರುಗಳ ಮೇಲೆ ಕಾಲಕಾಲಕ್ಕೆ ಡಿಸ್ಕೌಂಟ್ ಸಿಗುತ್ತದೆ. ಇದೆ ಸರದಿಯಲಿ ಮಾರುತಿ ಸುಜುಕಿ ಡೀಲರ್ ಶಿಪ್, ಈ ಸಮಯದಲ್ಲಿಯೂ ಕೂಡ ಕರುಗಳ ಮೇಲೆ ಡಿಸ್ಕೌಂಟ್ ನೀಡುತ್ತಿವೆ. ಈ ಡಿಸ್ಕೌಂಟ್ ಕೆಲವೇ ಕೆಲವು ಮಾಡೆಲ್ ಗಳಿಗೆ ಸೀಮಿತವಾಗಿಲ್ಲ. ಮಾರುತಿ ಎರೀನಾ ಡೀಲರ್ಶಿಪ್ ನ ಎಲ್ಲ ಕಾರುಗಳ ಮೇಲೆ ಗ್ರಾಹಕರಿಗೆ ಡಿಸ್ಕೌಂಟ್ ಸಿಗುತ್ತಿದೆ.

 

ಇದನ್ನೂ ಓದಿ-  Maruti Suzuki Celerio 2021: ತನ್ನ ಜನಪ್ರೀಯ ಕಾರ್ ನ 2021 ಆವೃತ್ತಿ ಬಿಡುಗಡೆಗೆ ಸಜ್ಜಾದ Maruti

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /7

ಮಾರುತಿ ಸುಜುಕಿಯ ಈ ಕಾರುಗಳ ಮೇಲೆ ಸಿಗುತ್ತಿದೆ ಡಿಸ್ಕೌಂಟ್: 1. Celerio X ಕಾರಿನ ಮೇಲೆ ಕೆಲ ಡೀಲರ್ ಗಳು 10,000 ರೂ.ಗಳ ಕ್ಯಾಶ್ ಡಿಸ್ಕೌಂಟ್  ಹಾಗೂ Celerio ಮೇಲೆ 15,000 ರೂ.ಗಳ ಡಿಸ್ಕೌಂಟ್ ನೀಡುತ್ತಿದ್ದಾರೆ. ಆದರೆ, ಈ 15 ಸಾವಿರ ರೂ.ಗಳ ಡಿಸ್ಕೌಂಟ್ ಕೇವಲ ಎಕ್ಸ್ಚೆಂಜ್ ಬೋನಸ್ ರೂಪದಲ್ಲಿ ಮಾತ್ರ ಲಭ್ಯವಿದೆ.

2 /7

2.Maruti Suzuki S-Presso ಮೇಲೆ ಡೀಲರ್ ಗಳು 12 ಸಾವಿರ ರೂ.ಗಳ ಡಿಸ್ಕೌಂಟ್ ನೀಡುತ್ತಿದ್ದಾರೆ. ಆದರೆ, ಈ ಕಾರಿನ CNG ಆವೃತ್ತಿಯ ಮೇಲೆ ಯಾವುದೇ ಡಿಸ್ಕೌಂಟ್ ನೀಡಲಾಗುತ್ತಿಲ್ಲ.

3 /7

3.WagonR ಕುರಿತು ಹೇಳುವುದಾದರೆ ಇದರ ಮೇಲೆ 10 ಸಾವಿರ ರೂಗಳ ಡಿಸ್ಕೌಂಟ್ ಲಭಿಸುತ್ತಿದೆ. ಆದರೆ ಇದರ CNG ಆವೃತ್ತಿಯ ಮೇಲೂ ಕೂಡ ಯಾವುದೇ ರೀತಿಯ ಡಿಸ್ಕೌಂಟ್ ನೀಡಲಾಗುತ್ತಿಲ್ಲ.

4 /7

4. Maruti Suzuki Swift Lxi ವರ್ಶನ್ ಹಾಗೂ Lxi (O) ಗಳ ಮೇಲೆ 30 ಸಾವಿರ ರೂ.ಗಳವರೆಗೆ ಡಿಸ್ಕೌಂಟ್ ಲಭ್ಯವಿದೆ. ಯಾವ ಡೀಲರ್ಗಳ  ಬಳಿ ಪ್ರೀ-ಫೇಸ್ ಲಿಫ್ಟ್ ಮಾಡೆಲ್ ಇರುವುದೋ ಅವರು 5 ಸಾವಿರ ವರೆಗೆ ಹೆಚ್ಚುವರಿ ಡಿಸ್ಕೌಂಟ್ ನೀಡುತ್ತಿದ್ದಾರೆ. ಒಂದು ವೇಳೆ  Vxi ಅಥವಾ ಹೊಸ ಮಾಡೆಲ್ ನಲ್ಲಿ ಇದರ ಮೇಲಿನ ಟ್ರಿಮ್ ಖರೀದಿಸಿದರೆ 10 ಸಾವಿರ. ರೂಗಳ ಡಿಸ್ಕೌಂಟ್ ಪಡೆಯಬಹುದು.

5 /7

5. Maruti Suzuki Dzire ನ ಟಾಪ್ ಟ್ರಿಮ್ ಮೇಲೆ ಯಾವುದೇ ಡಿಸ್ಕೌಂಟ್ ನೀಡಲಾಗುತ್ತಿಲ್ಲ. ಆದರೆ, ಒಂದು ವೇಳೆ ನೀವು ಬೇಸ್ ವರ್ಶನ್ ಖರೀದಿಸಿದರೆ ನಿಮಗೆ ರೂ.5,000 ವರೆಗೆ ಕ್ಯಾಶ್ ಡಿಸ್ಕೌಂಟ್ ರೂಪದಲ್ಲಿ ಪಡೆಯಬಹುದು.

6 /7

6. Maruti Vitara Brezza ಕಾರಿನ ಹೈಯರ್ ವೇರಿಯಂಟ್ಸ್ ಗಳ ಮೇಲೆ 10,000 ರೂ.ಗಳವರೆಗೆ ಡಿಸ್ಕೌಂಟ್ ಪಡೆಯಬಹುದು.

7 /7

7.Maruti Suzuki Ertiga ಮೇಲೆ ಯಾವುದೇ ರೀತಿಯ ಡಿಸ್ಕೌಂಟ್ ಘೋಶಿಸಲಾಗಿಲ್ಲ .