ಎಚ್ಚರ..! ನೀವು ಕೂಡಾ ಸ್ಮಾರ್ಟ್ ಫೋನ್ ಮೂಲಕ ಹಣಕಾಸು ವ್ಯವಹಾರ ಮಾಡುತ್ತೀರಾ?

ಸ್ಮಾರ್ಟ್ ಪೋನ್ ಗಳು ಬಂದ ಮೇಲಂತೂ ಎಲ್ಲಾ ಕೆಲಸಗಳೂ ಬೆರಳ ತುದಿಯಲ್ಲೆ ನಡೆದು ಹೋಗುತ್ತದೆ. ಬ್ಯಾಂಕ್ ಕೆಲಸವೂ ಇದರಲ್ಲಿ ಸೇರಿದೆ. ತಂತ್ರಜ್ಞಾನ ಎಷ್ಟು  ಬೆಳೆದಿದೆಯೋ ಮೋಸ ಮಾಡುವವರ ಸಂಖ್ಯೆಯೂ ಅಷ್ಟೇ ಬೆಳೆಯುತ್ತಿದೆ. 

ನವದೆಹಲಿ : ಸ್ಮಾರ್ಟ್ ಪೋನ್ ಗಳು ಬಂದ ಲಂತೂ ಎಲ್ಲಾ ಕೆಲಸಗಳೂ ಬೆರಳ ತುದಿಯಲ್ಲೆ ನಡೆದು ಹೋಗುತ್ತದೆ. ಬ್ಯಾಂಕ್ ಕೆಲಸವೂ ಇದರಲ್ಲಿ ಸೇರಿದೆ. ತಂತ್ರಜ್ಞಾನ ಎಷ್ಟು  ಬೆಳೆದಿದೆಯೋ ಮೋಸ ಮಾಡುವವರ ಸಂಖ್ಯೆಯೂ ಅಷ್ಟೇ ಬೆಳೆಯುತ್ತಿದೆ. ಅಂದೆ ಸೈಬರ್ ವಂಚನೆ ಕೂಡಾ ದಿನೆ ದಿನೇ ಹೆಚ್ಚುತ್ತಿದೆ.  ಎಷ್ಟೇ ಸುರಕ್ಷಾ ಕ್ರಮಗಳನ್ನು ಅನುಸರಿಸಿದರೂ ಮೋಸಗಾರರು, ವಂಚನೆಗೆ ಕೂಡಾ ಹೊಸ ಹೊಸ ವಿಧಾನಗಳನ್ನು ಅನುಸರಿಸುತ್ತಲೇ ಇದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಯುಪಿಐ ಮೂಲಕ  ಸಾಕಷ್ಟು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದೆ. ಯುಪಿಐ ಮೂಲಕ, ಒಬ್ಬ ವ್ಯಕ್ತಿಗೆ ಡೆಬಿಟ್ ಲಿಂಕ್ ಕಳುಹಿಸಲಾಗುತ್ತದೆ. ಆ ಲಿಂಕ್ ಅನ್ನು ಕ್ಲಿಕ್ ಮಾಡಿದ ಕೂಡಲೇ ಅವರ ಖಾತೆಯಿಂದ ಹಣ ಕಡಿತಗೊಳ್ಳುತ್ತದೆ. ಈ ಕಾರಣದಿಂದ ಯಾವುದೇ ಅಪರಿಚಿತ ಲಿಂಕ್ ಅನ್ನು ಕ್ಲಿಕ್ ಮಾಡಲೇ ಬಾರದು.    

2 /6

 QR ಕೋಡ್ ಮೂಲಕವೂ ವಂಚನೆ ನಡೆಯುತ್ತಿದೆ. ವಂಚಕರು ಕ್ಯೂಆರ್ ಕೋಡ್ ಅನ್ನು ಮೊಬೈಲ್‌ಗೆ ಕಳುಹಿಸುತ್ತಾರೆ. ಅದನ್ನು ಸ್ವೀಕರಿಸುವ ವ್ಯಕ್ತಿ ಕ್ಯೂಆರ್ ಕೋಡ್ ಲಿಂಕ್ ಅನ್ನು ಕ್ಲಿಕ್ ಮಾಡುತ್ತಾರೆ. ವಂಚಕರು,  ತನ್ನ ಮೊಬೈಲ್ ಫೋನ್‌ನ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಖಾತೆಯಿಂದ ಹಣ ಪಡೆಯುತ್ತಾರೆ. 

3 /6

ಕೆಲಸದ ಹೆಸರಿನಲ್ಲಿ ಡೆಯುತ್ತಿರುವ ಮೋಸ. ನಕಲಿ ಉದ್ಯೋಗ ಜಾಹೀರಾತುಗಳನ್ನು ನೀಡಿ, ಲಿಂಕ್ ಗಳನ್ನು ಕೂಡಾ ಶೇರ್ ಮಾಡುತ್ತಾರೆ. ಈ ಲಿಂಕ್ ಗಳನ್ನು ಕ್ಲಿಕ್ ಮಾಡಿದ ಕೂಡಲೇ ನಿಮ್ಮ ಎಲ್ಲಾ ಮಾಹಿತಿಗಳು ಬಹಿರಂಗಗೊಳ್ಳುತ್ತವೆ  

4 /6

ವಂಚಕರು ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುವ ಹೆಸರಿನಲ್ಲಿ ಮೋಸ ಮಾಡುತ್ತಲೇ ಇರುತ್ತಾರೆ. ಎಲ್ಲಾ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳನ್ನು ಕಾಲಕಾಲಕ್ಕೆ ಪರಿಶೀಲಿಸುತ್ತಿರಬೇಕು. ಒಂದು ವೇಳೆ ವ್ಯತ್ಯಾಸ ಕಂಡು ಬಂದರೆ, ತಕ್ಷಣ ಬ್ಯಾಂಕ್ ಗಮನಕ್ಕೆ ತರಬೇಕು. 

5 /6

ಎಟಿಎಂ ಕ್ಲೋನಿಂಗ್ ಮೂಲಕ ಕೂಡಾ ಮೋಸ ಮಾಡುತ್ತಿರುವವ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಎಟಿಎಂ ಕ್ಲೋನಿಂಗ್  ಮೂಲಕ, ಗ್ರಾಹಕರ ಮಾಹಿತಿಯನ್ನು ಕದಿಯಲಾಗುತ್ತದೆ. ನಕಲಿ ಕಾರ್ಡ್ ಮಾಡುವ ಮೂಲಕ ನಿಮ್ಮ ಖಾತೆಯಿಂದ ಹಣವನ್ನು ಪಡೆಯಲಾಗುತ್ತದೆ.

6 /6

ಸೈಬರ್ ವಂಚನೆಯಿಂದಾಗಿ ಆರ್ಥಿಕ ನಷ್ಟವನ್ನು ತಡೆಗಟ್ಟಲು ಸಹಾಯವಾಣಿ ಸಂಖ್ಯೆ 155260 ಅನ್ನು ಜಾರಿಗೆ ತರಲಾಗಿದೆ. ಸಹಾಯವಾಣಿ ಸಂಖ್ಯೆ 155260 ಮತ್ತು ಅದರ ರಿಪೋರ್ಟಿಗ್ ಪ್ಲಾಟ್ ಫಾರ್ಮ್ ಅನ್ನು, ಗೃಹ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು (ಐ 4 ಸಿ) ಕಾರ್ಯರೂಪಕ್ಕೆ ತಂದಿದೆ. ಇದಲ್ಲದೆ https: //cybercrime.gov.i/ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ವಂಚನೆಗೆ ಸಂಬಂಧಿಸಿದ ದೂರನ್ನು ಸಹ ಮಾಡಬಹುದು.