Damaged Liver Warning signs : ಲಿವರ್ ಸಮಸ್ಯೆಯ ಲಕ್ಷಣಗಳಾಗಿವೆ ಈ ಸಂಕೇತಗಳು

ಯಕೃತ್ತಿನ ಸಂಪೂರ್ಣ ಕಾರ್ಯವು ನಿಮ್ಮ ದೇಹದಲ್ಲಿ ಆಹಾರವು ಜೀರ್ಣವಾಗುವಂತೆ ನೋಡಿಕೊಳ್ಳುವುದು. ಆದರೆ ಕಳಪೆ ಆಹಾರ ಮತ್ತು ಕಳಪೆ ಜೀವನಶೈಲಿಯು ಯಕೃತ್ತಿನ ಅನಾರೋಗ್ಯಕ್ಕೆ ಕಾರಣವಾಗುತ್ತದೆ.  

ಬೆಂಗಳೂರು : ದೇಹದ ಪ್ರಮುಖ ಅಂಗಗಳ ವಿಷಯಕ್ಕೆ ಬಂದರೆ, ನಮ್ಮ ಗಮನವು ಹೃದಯ, ಮೆದುಳು, ಮೂತ್ರಪಿಂಡಗಳತ್ತ ಹೋಗುತ್ತದೆ. ಇತ್ತೀಚೆಗೆ ಕರೋನಾದಿಂದಾಗಿ ಜನರು ಶ್ವಾಸಕೋಶದ ಆರೋಗ್ಯದ ಬಗ್ಗೆ ಕೂಡಾ ಮಾತನಾಡಲು ಪ್ರಾರಂಭಿಸಿದ್ದಾರೆ. ಆದರೆ ಮಾನವನ ದೇಹದಲ್ಲಿ ಮತ್ತೊಂದು ಪ್ರಮುಖ ಅಂಗ ಇದೆ. ಇದಿಲ್ಲದೆ ಮಾನವ ದೇಹವನ್ನು ಕಲ್ಪಿಸುವುದು ಕಷ್ಟ. ಅದೇ ಯಕೃತ್ತು. ಯಕೃತ್ತಿನ ಸಂಪೂರ್ಣ ಕಾರ್ಯವು ನಿಮ್ಮ ದೇಹದಲ್ಲಿ ಆಹಾರವು ಜೀರ್ಣವಾಗುವಂತೆ ನೋಡಿಕೊಳ್ಳುವುದು. ಆದರೆ ಕಳಪೆ ಆಹಾರ ಮತ್ತು ಕಳಪೆ ಜೀವನಶೈಲಿಯು ಯಕೃತ್ತಿನ ಅನಾರೋಗ್ಯಕ್ಕೆ ಕಾರಣವಾಗುತ್ತದೆ.  ಕ್ರಮೇಣ ಯಕೃತ್ತಿನ ಗಾತ್ರವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಯಕೃತ್ತಿನ ಗಾತ್ರವು ತುಂಬಾ ದೊಡ್ಡದಾಗುತ್ತದೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಯಾವ ಕೆಲಸವನ್ನು ಮಾಡದೇ ಸುಸ್ತಾಗುತ್ತಿದ್ದರೆ ದೌರ್ಬಲ್ಯ  ಅನುಭವಿಸುತ್ತಿದ್ದರೆ, ನಿಮ್ಮ ಯಕೃತ್ತು ಹಾಳಾಗಲು ಪ್ರಾರಂಭಿಸಿರುವುದು ಖಚಿತ. ಈ ಸ್ಥಿತಿಯು ಕೆಲವು ದಿನಗಳವರೆಗೆ ಮುಂದುವರಿದರೆ, ನಿಮ್ಮ ಯಕೃತ್ತಿನ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ

2 /5

ನೀವು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಳು ಸಾಧ್ಯವಾಗದೇ ಇರುವುದು,  ಹಸಿವಾಗದೇ ಇರುವುದು ಯಕೃತ್ತು ಹಾಳಾಗಲು ಪ್ರಾರಂಭಿಸಿದೆ ಎಂಬುದರ ಸಂಕೇತವಾಗಿರುತ್ತದೆ. ಹಸಿವಿನ ಕೊರತೆ ಮತ್ತು ಆಹಾರ ಜೀರ್ಣವಾಗದಿರುವುದು ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು. ಇದು ಯಕೃತ್ತಿನ ಅಸಮರ್ಪಕ ಕಾರ್ಯವನ್ನು ಸೂಚಿಸುತ್ತದೆ. ಅಂತಹ ಸಮಸ್ಯೆಗಳಲ್ಲಿ, ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ.

3 /5

ನೀವು ಡಯಟ್ ಮಾಡದಿದ್ದರೂ ಅಥವಾ ತೂಕವನ್ನು ಕಡಿಮೆ ಮಾಡುವ ಯಾವುದೇ ಕೆಲಸ ಮಾಡದಿದ್ದರೂ ತ್ವರಿತವಾಗಿ ತೂಕವನ್ನು ಕಳೆದುಕೊಳ್ಳಲು ಪ್ರಾರಂಭಿಸಿದರೆ ಯಕೃತ್ತು ಹಾಳಾಗಲು ಪ್ರಾರಂಭಿಸಿದೆ ಎಂಬುದರ ಸಂಕೇತವಾಗಿರುತ್ತದೆ. ಅನಗತ್ಯ ತೂಕ ನಷ್ಟವು ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ. 

4 /5

ಆಹಾರ ಸರಿಯಾಗಿ ಜೀರ್ಣವಾಗದಿರುವುದು, ಹಸಿವಾಗದಿರುವುದು, ಹೊಟ್ಟೆ ಉಬ್ಬರ,  ಮುಂತಾದ ಸಮಸ್ಯೆಗಳಿಂದ ನಿಮ್ಮ ತ್ವಚೆಯು ತನ್ನ ಮೈಬಣ್ಣವನ್ನು ಕಳೆದುಕೊಳ್ಳಲಾರಂಭಿಸುತ್ತದೆ. ನಿಮ್ಮ ಚರ್ಮವು ಸಾಕಷ್ಟು ಪೋಷಣೆಯನ್ನು ಪಡೆಯದಿದ್ದರೆ, ನಿಮ್ಮ ಚರ್ಮವು ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ.   , ಚರ್ಮ ಹಳದಿ ಬಣ್ಣಕ್ಕೆ ತಿರುಗುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ.

5 /5

ನೀವು ಊಟ ತಿಂದ ತಕ್ಷಣ ಹೊಟ್ಟೆ ನೋವಾಗುತ್ತಿದ್ದರೆ ಹೊಟ್ಟೆಯ ಮೇಲಿನ ಬಲಭಾಗದಲ್ಲಿ ಊತ ಕಾಣಿಸಿಕೊಂಡರೆ ಇದು ಯಕೃತ್ತಿನ ವೈಫಲ್ಯದ ಸಾಮಾನ್ಯ ಸಂಕೇತವಾಗಿದೆ. ನಿರಂತರ ಹೊಟ್ಟೆ ನೋವು ಕಾಣಿಸುತ್ತಿದ್ದರೆ, ಯಕೃತ್ತಿನ ಪರೀಕ್ಷೆಗೆ ಒಳಗಾಗಬೇಕು .