ಕೆಲವು ಕನಸುಗಳು ಒಳ್ಳೆಯ ಮತ್ತು ಸಕಾರಾತ್ಮಕ ವಿಷಯಗಳನ್ನು ಸೂಚಿಸುತ್ತವೆ. ಆದರೆ ಕೆಲವು ಕನಸುಗಳು ಅಸಹ್ಯ ಮತ್ತು ಭಯಾನಕವಾಗಿರುತ್ತದೆ.
ನವದೆಹಲಿ : ನಿದ್ರೆಯಲ್ಲಿ ಕನಸು ಕಾಣದವರು ಯಾರೂ ಇರಲಿಕ್ಕಿಲ್ಲ. ಕೆಲವೊಂದು ಕನಸುಗಳು ನಮಗೆ ನೆಪಿನಲ್ಲಿ ಉಳಿಯುತ್ತವೆ. ಇನ್ನು ಕೆಲವೊಮ್ಮೆ ನಾವು ಏನು ಕನಸು ಕಂಡಿದ್ದೆವು ಎನ್ನುವುದನ್ನು ಮರೆತು ಬಿಡುತ್ತೇವೆ. ಕನಸಿನ ಶಾಸ್ತ್ರ ಅಥವಾ ಸ್ವಪ್ನ ಶಾಸ್ತ್ರವನ್ನು ನಂಬುವುದಾದರೆ , 2 ರೀತಿಯ ಕನಸುಗಳಿವೆ. ಒಂದು ಉತ್ತಮ ಭವಿಷ್ಯದ ಮತ್ತು ಸಕಾರಾತ್ಮಕ ವಿಷಯಗಳತ್ತ ಗಮನಹರಿಸಿದರೆ, ಇನ್ನೊಂದು ನಕಾರಾತ್ಮಕ ವಿಷಯಗಳನ್ನು ಸೂಚಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ನಿಮ್ಮ ಕನಸಿನಲ್ಲಿ ನೀವು ಬೆಕ್ಕನ್ನು ನೋಡಿದ್ದರೆ, ಅದನ್ನು ಶುಭ ಎಂದು ಕರೆಯಲಾಗುವುದಿಲ್ಲ. ಈ ರೀತಿಯ ಕನಸು ಕೆಟ್ಟ ಸಮಯಗಳನ್ನು ಸೂಚಿಸುತ್ತದೆ. ಭವಿಷ್ಯದಲ್ಲಿ ಯಾರಾದರೂ ನಿಮಗೆ ದ್ರೋಹ ಮಾಡಲಿದ್ದಾರೆ ಎನ್ನುವುದನ್ನು ಕೂಡಾ ಇದು ಸೂಚಿಸುತ್ತದೆ.
ಕನಸಿನಲ್ಲಿ ಭೂಕಂಪದ ದೃಶ್ಯವನ್ನು ನೋಡಿದರೆ, ಅದನ್ನು ಸಹ ಅಶುಭವೆಂದು ಪರಿಗಣಿಸಲಾಗುತ್ತದೆ. ಈ ರೀತಿ ಕನಸು ಕಾಣುವುದರಿಂದ ನಿಮ್ಮ ಮಗುವಿಗೆ ಭವಿಷ್ಯದಲ್ಲಿ ಕೆಲವು ರೀತಿಯ ಸಮಸ್ಯೆಗಳಾಗಬಹುದು ಎನ್ನಲಾಗುತ್ತದೆ.
ಕನಸಿನಲ್ಲಿ ಮದುವೆಯ ದಿಬ್ಬಣವನ್ನು ನೋಡುವುದು ಅಥವಾ ಡೋಲು ನಗಾರಿ ಬಾರಿಸುವುದನ್ನು ನೋಡುವುದು ಸಹ ಒಳ್ಳೆಯದಲ್ಲ. ಈ ರೀತಿಯ ಕನಸು ನಿಮ್ಮ ಜೀವನದಲ್ಲಿ ಮುಂಬರುವ ಸಮಯದಲ್ಲಿ ಒಂದು ರೀತಿಯ ತೊಂದರೆ ಅಥವಾ ಬಿಕ್ಕಟ್ಟು ಸಂಭವಿಸಲಿದೆ ಎಂದು ಸೂಚಿಸುತ್ತದೆ.
ಒಣಗಿದ ಉದ್ಯಾನವನ್ನು ನೋಡಿದರೆ, ಅದು ಕೂಡಾ ಎದುರಾಗಬಹುದಾದ ಗಂಭೀರ ಸಮಸ್ಯೆಗಳನ್ನು ಗೋಚರಿಸುತ್ತದೆ.
ಕನಸಿನಲ್ಲಿ ಇರುವೆಗಳು ಅಥವಾ ಕೀಟಗಳನ್ನು ನೋಡುವುದು ಸಹ ಭವಿಷ್ಯದಲ್ಲಿ ಎದುರಾಗಬಹುದಾದ ನೋವಿನ ದಿನಗಳನ್ನು ತೋರಿಸುತ್ತದೆ. ಇನ್ನು ಕನಸಿನಲ್ಲಿ ಎಷ್ಟು ಪ್ರಮಾಣದಲ್ಲಿ ಕೀಟಗಳನ್ನು ನೋಡುತ್ತಿರೋ ನೋವು ಅಷ್ಟೇ ಪ್ರಮಾಣದಲ್ಲಿರುತ್ತದೆ ಎಂದರ್ಥ.