ಅಂದಿನ ಪುಟಾಣಿ ಬೇಬಿ ಶಾಮಿಲಿ ಅಕ್ಕ ಕನ್ನಡದ ಜನಪ್ರಿಯ ನಟಿ! ವಿಷ್ಣುವರ್ಧನ್‌ ಜೊತೆ ಅಭಿನಯಿಸಿದ್ದ ಚೆಲುವೆ ಈಕೆ... ಇವರ ಗಂಡ ಕೂಡ ಖ್ಯಾತ ಹೀರೋ

Shalini Ajith: ಒಂದು ಕಾಲದಲ್ಲಿ ಬಾಲನಟಿಯಾಗಿ ಮಿಂಚಿದ್ದ ಬೇಬಿ ಶಾಮಿಲಿ ಯಾರಿಗೆ ಗೊತ್ತಿಲ್ಲ ಹೇಳಿ. ಈ ಪುಟ್ಟ ಮಗುವಿನ ನಟನೆ ನೋಡಲೆಂದೇ ಥಿಯೇಟರ್‌ʼಗೆ ಜನ ಬರುತ್ತಿದ್ದ ಕಾಲವಿತ್ತು. ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿ ಕೆಲಸ ಮಾಡಿರುವ ಶಾಮಿಲಿ ಅತ್ಯುತ್ತಮ ಬಾಲಕಲಾವಿದೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

ಒಂದು ಕಾಲದಲ್ಲಿ ಬಾಲನಟಿಯಾಗಿ ಮಿಂಚಿದ್ದ ಬೇಬಿ ಶಾಮಿಲಿ ಯಾರಿಗೆ ಗೊತ್ತಿಲ್ಲ ಹೇಳಿ. ಈ ಪುಟ್ಟ ಮಗುವಿನ ನಟನೆ ನೋಡಲೆಂದೇ ಥಿಯೇಟರ್‌ʼಗೆ ಜನ ಬರುತ್ತಿದ್ದ ಕಾಲವಿತ್ತು. ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿ ಕೆಲಸ ಮಾಡಿರುವ ಶಾಮಿಲಿ ಅತ್ಯುತ್ತಮ ಬಾಲಕಲಾವಿದೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದರು.  

2 /6

ಇನ್ನು ಶಾಮಿಲಿ ಅವರ ಅಕ್ಕ ಕೂಡ ಸಿನಿರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಬೇರಾರು ಅಲ್ಲ ಶಾಲಿನಿ ಅಜಿತ್.‌ ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ಹೆಚ್ಚಾಗಿ ಕೆಲಸ ಮಾಡಿದ್ದಾರೆ.  

3 /6

80 ರ ದಶಕದಲ್ಲಿ, ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಅಭಿನಿಯಿಸಿರುವ ಶಾಲಿನಿ ಅತ್ಯಂತ ಯಶಸ್ವಿ ಬಾಲ ಕಲಾವಿದರಾಗಿದ್ದರು. ನಟನೆಯಿಂದ ಕೊಂಚ ವಿರಾಮ ಪಡೆದಿದ್ದ ಶಾಲಿನಿ 1997 ರಲ್ಲಿ ಮಲಯಾಳಂ ಮತ್ತು ತಮಿಳು ಭಾಷಾ ಚಲನಚಿತ್ರಗಳ ಮೂಲಕ ಪ್ರಮುಖ ನಾಯಕಿಯಾಗಿ ಕಂಬ್ಯಾಕ್‌ ಮಾಡಿದರು.  

4 /6

ಇನ್ನು ಶಾಲಿನಿ ಅವರ ಪತಿ ಜನಪ್ರಿಯ ತಮಿಳು ನಟ ಅಜಿತ್ ಕುಮಾರ್. 24 ಏಪ್ರಿಲ್ 2000 ರಂದು ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅದಾದ ನಂತರ ಶಾಲಿನಿ ಸಿನಿಮಾ ಮಾಡಿಲ್ಲ.  

5 /6

ಪ್ರೊಟೆಸ್ಟಂಟ್ ಮಲಯಾಲಿ ಕ್ರಿಶ್ಚಿಯನ್ ಕುಟುಂಬದಲ್ಲಿ 20 ನವೆಂಬರ್ 1979 ರಂದು ಬಾಬು ಮತ್ತು ಆಲಿಸ್ ದಂಪತಿಗೆ ಶಾಲಿನಿ ಜನಿಸಿದರು. ಅವರ ತಂದೆ ಕೊಲ್ಲಂ ಮೂಲದವರು. ನಟನಾಗುವ ಮಹತ್ವಾಕಾಂಕ್ಷೆಯೊಂದಿಗೆ ಮದ್ರಾಸ್‌ʼಗೆ ವಲಸೆ ಬಂದಿದ್ದ ಬಾಬು, ತಮ್ಮ ಕುಟುಂಬ ಸಮೇತ ಅಲ್ಲಿ ನೆಲೆಸಿತು. ಫಾತಿಮಾ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಸ್ಕೂಲ್, ಅಡರ್ಶ್ ವಿದ್ಯಾಲಯ, ಚೆನ್ನೈನ ಚರ್ಚ್ ಪಾರ್ಕ್ ವಿದ್ಯಾಸಂಸ್ಥೆಗಳಲ್ಲಿ ಶಾಲಿನಿ ವ್ಯಾಸಂಗ ಮಾಡಿದ್ದಾರೆ.  

6 /6

ಇನ್ನು ಶಾಲಿನಿ ಬಾಲಕಲಾವಿದೆಯಾಗಿ ಕನ್ನಡದ ʼಈ ಜೀವ ನಿನಗಾಗಿʼ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇದರಲ್ಲಿ ಡಾ.ವಿಷ್ಣುವರ್ಧನ್‌ ಮತ್ತು ಊರ್ವಶಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು. ಲತಾ ಎಂಬ ಪಾತ್ರದಲ್ಲಿ ಬೇಬಿ ಶಾಲಿನಿ ಅಭಿನಯಿಸಿದ್ದು, ಈ ಸಿನಿಮಾದಲ್ಲಿ ಗಾಯಕಿಯಾಗಿಯೂ ಕೆಲಸ ಮಾಡಿದ್ದಾರೆ.