ರಾಯಲ್ ಟ್ರೈನ್ 'ಪ್ಯಾಲೇಸ್ ಆನ್ ವೀಲ್ಸ್' ಅನ್ನು 1 ಕೋಟಿ 30 ಲಕ್ಷಕ್ಕೆ ಬುಕ್ ಮಾಡಿದ ಆಸ್ಟ್ರೇಲಿಯಾ ಪ್ರವಾಸಿಗರು

ಪ್ಯಾಲೆಸ್ ಆನ್ ವೀಲ್ಸ್ ಎಂಬ ಐಷಾರಾಮಿ ರೈಲು 2010ನೇ ಇಸವಿಯಲ್ಲಿ ಜಗತ್ತಿನ ೪ನೇ ಐಷಾರಾಮಿ ರೈಲು ಎಂಬ ಖ್ಯಾತಿಗೆ ಒಳಗಾಯಿತು.
 

  • Sep 20, 2018, 13:44 PM IST

'ದಿ ಪ್ಯಾಲೆಸ್ ಆನ್ ವೀಲ್ಸ್' ಈ ಬಾರಿಯ ಪ್ರವಾಸ ಋತುವನ್ನು ಈ ತಿಂಗಳ 7 ನೇ ತಾರೀಖಿನಂದು ಪ್ರಾರಂಭಿಸಿತು.

1 /5

ಪ್ಯಾಲೆಸ್ ಆನ್ ವೀಲ್ಸ್ ಜನವರಿ 26, 1983ರಲ್ಲಿ ಪ್ರಾರಂಭವಾಯಿತು. ಪ್ಯಾಲೆಸ್ ಆನ್ ವೀಲ್ಸ್‌ನ ಪರಿಕಲ್ಪನೆಯು ಐಶಾರಾಮಿ ಹಿನ್ನೆಲೆಯನ್ನು ಪ್ರತಿಬಿಂಬಿಸುತ್ತದೆ. ಈ ರೈಲನ್ನು ಹಿಂದಿನ ಆಡಳಿತಗಾರರಾದ ರಾಜಪುತಾನ, ಗುಜರಾತ್, ಹೈದರಾಬಾದಿನ ನಿಜಾಮರವರ ವೈಯಕ್ತಿಕ ರೈಲ್ವೆ ಭೋಗಿಗಳ ಆಧಾರದಮೇರೆಗೆ ತಯಾರಿಸಲಾಗಿದೆ. ಪ್ಯಾಲೇಸ್ ಆನ್ ವೀಲ್ಸ್ನ ಇತಿಹಾಸದಲ್ಲೇ ಮೊದಲ ಬಾರಿಗೆ 41 ಸೊಲೊ ಟೂರಿಸ್ಟ್ ಈ ಐಷಾರಾಮಿ ರೈಲಿನ 82 ಸೀಟುಗಳನ್ನು ಬುಕ್ ಮಾಡಿದೆ.

2 /5

ಏಳು ದಿನಗಳ ಪ್ರವಾಸಕ್ಕಾಗಿ ಆಸ್ಟ್ರೇಲಿಯಾದ ಪ್ರವಾಸಿಗರು ಇಡೀ ರೈಲುವನ್ನು 1 ಕೋಟಿ 30 ಲಕ್ಷಗಳಿಗೆ ಬುಕ್ ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ಪ್ರತಿಯೊಂದು ಪ್ರಯಾಣಿಕರೂ ತಮ್ಮ ಏಕೈಕ ಪ್ರಯಾಣಕ್ಕಾಗಿ ಡಬಲ್ ಬೆಡ್ ರೂಮ್ ಕ್ಯಾಬಿನ್ಗಾಗಿ ಬುಕ್ ಮಾಡಿದ್ದು ದುಪ್ಪಟ್ಟು ಬಾಡಿಗೆ ನೀಡಿದ್ದಾರೆ.  

3 /5

ಈ ರೈಲು 7 ರಾತ್ರಿ ಮತ್ತು 8 ದಿನಗಳ ಪ್ರಯಾಣವನ್ನು ಜನರಿಗೆ ಒದಗಿಸುತ್ತದೆ.  ದಿನ 1- ನವ ದೆಹಲಿಯಿಂದ ಆರಂಭವಾಗುತ್ತದೆ,  ದಿನ 2- ಜೈಪುರ್,  ದಿನ 3- ಸಾವಾಯಿ, ಮದೋಪುರ, ಚಿತ್ತುರ್ಗರ್ಹ,  ದಿನ 4- ಉದಯಪುರ,  ದಿನ 5- ಜೈಸಲ್ಮೇರ್,  ದಿನ 6- ಜೋದಪುರ,  ದಿನ 7- ಭರತ‌ಪುರ, ಆಗ್ರ,  ದಿನ 8- ನವ ದೆಹಲಿಗೆ ಹಿಂತಿರುಗುತ್ತದೆ.

4 /5

ಈ ರೈಲು ಪ್ರವಾಸಿ ತಾಣಗಳನ್ನು ಮುಟ್ಟುವುದರ ಜೊತೆಗೆ ಹಲವಾರು ಸೌಲಭ್ಯಗಳು ಎಂದರೆ ಸ್ಪಾ, ಜಿಮ್, ಬಾರ್, ರಾಯಲ್ ಹಾಸಿಗೆ, ಪಾರ್ಲರ್ ಮತ್ತು ರಾಯಲ್ ಪರಿಸರಕ್ಕೆ ಎಲ್ಲವನ್ನೂ ಹೊಂದಿದೆ. ಪ್ರತಿ ಸಲೂನ್ ಪೀಠೋಪಕರಣ, ಕರುಕುಶಲ, ಚಿತ್ರಕಲೆ ಬಳಕೆಯಿಂದ ನಿರೂಪಿಸಲಾಗಿದೆ. ಈ ರೈಲು ಬಹುಪಾಲು ಸಾಂಸ್ಕ್ರತಿಕ ಲಕ್ಷಣವನ್ನೇ ತೋರಿಸುತ್ತದೆ. ದೆಹಲಿ ಮೂಲದ ವಿನ್ಯಾಸಕಾರಳಾದ ಮೋನಿಕಾ ಖನ್ನಾ‌ರವರು ರೈಲಿನ ಒಳಾಂಗಣವನ್ನು ಚಿತ್ರಿಸಿದ್ದಾರೆ.

5 /5

ರೈಲಿನಲ್ಲಿ 23 ಭೋಗಿಗಳಿವೆ. ಇದರಲ್ಲಿ ಒಂದುಬಾರಿಗೆ 104 ಪ್ರವಾಸಿಗರು ಪ್ರವಾಸ ಮಾಡಬಹುದು. ಪ್ರತಿಯೊಂದು ಭೋಗಿಗೂ ಮಾಜಿ ರಜಪೂತರ ಹೆಸರಿಡಲಾಗಿದೆ. ಅವುಗಳೆಂದರೆ ಆಲ್ವಾರ್, ಭರತ್ಪುರ್, ಬಿಕನೆರ್, ಬುಂದಿ, ಧೋಲ್ಪುರ್, ಜೈಸಲ್ಮೇರ್, ಜೈಪುರ್, ಜಲಾವರ್, ಉದಯಪುರ್, ಕೋಟ, ಸಿರೋಹಿ, ಜೋದಪುರ್, ಕಿಶನ್‌ಘರ್. ಪ್ರತಿ ಭೋಗಿಗಳಲ್ಲಿ 4 ಕೋಣೆಗಳಿವೆ. ಈ ಕೋಣೆಗಳಲ್ಲಿ ಐಷಾರಾಮಿ ಸೌಲಭ್ಯಗಳ ಜೊತೆಗೆ ವೈಫೈ ಸಂಪರ್ಕವೂ ಇದೆ. ಈ ರೈಲುನಲ್ಲಿ ರಾಜಸ್ತಾನಿ ಪರಿಸರವನ್ನು ಒಳಗೊಂಡಿರುವಂತಹ ಮಹಾರಾಜ ಮತ್ತು ಮಹಾರಾಣಿ ಎನ್ನುವ ಹೆಸರಿನಲ್ಲಿ ಎರಡು ರೆಸ್ಟೋರೆಂಟುಗಳಿವೆ.