Auspicious Yogas 2024: ಧನ-ಬುಧಾದಿತ್ಯ ಸೇರಿದಂತೆ ಹಲವು ಶುಭಯೋಗಗಳ ರಚನೆ, ಈ ರಾಶಿಗಳ ಜನರಿಗೆ ನೌಕರಿ-ವ್ಯಾಪಾರದಲ್ಲಿ ಭಾರಿ ಧನಲಾಭ!

Auspicious Yogas 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ನವಪಂಚಮ, ಬುಧಾದಿತ್ಯ, ಆದಿತ್ಯ ಮಂಗಳ ಸೇರಿದಂತೆ ಹಲವು ರಾಜಯೋಗಗಳು ರೂಪುಗೊಳ್ಳುತ್ತಿವೆ. ಇದರಿಂದ ಹಲವು ರಾಶಿಗಳ ಜನರಿಗೆ ಬಂಪರ್ ಲಾಭ ಸಿಗಲಿದೆ. (Spiritual News In Kannada)
 

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಧನು ರಾಶಿಯಲ್ಲಿ ಸೂರ್ಯ, ಮಂಗಳ, ಬುಧರ ಜೊತೆಗೆ ಚಂದ್ರ ವಿರಾಜಮಾನರಾಗಿದ್ದಾರೆ.ಹೀಗಿರುವಾಗ ಈ ಗ್ರಹಗಳ ಮೈತ್ರಿಯಿಂದ ಧನು ರಾಶಿಯಲ್ಲಿ ನವಪಂಚಮ ರಾಜಯೋಗ, ಬುಧಾದಿತ್ಯ ರಾಜಯೋಗ, ಆದಿತ್ಯ ಮಂಗಳ ರಾಜಯೋಗದ ಜೊತೆಗೆ ಧನ ಯೋಗಗಳು ಏಕಕಾಲದಲ್ಲಿ ರಚನೆಯಾಗುತ್ತಿವೆ. ಈ ರಾಜಯೋಗಗಳು ಕೆಲ ರಾಶಿಗಳ ಜನರ ಮೇಲೆ ಭಾರಿ ಸಕಾರಾತ್ಮಕ ಪ್ರಭಾವವನ್ನು ಬೀರಲಿವೆ. ಈ ಅವಧಿಯಲ್ಲಿ ಈ ರಾಶಿಗಳ ಜನರ ಧನ-ಧಾನ್ಯ, ಸ್ಥಾನಮಾನ-ಪ್ರತಿಷ್ಠೆ ಹೆಚ್ಚಾಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ. (Spiritual News In Kannada)

 

ಇದನ್ನೂ ಓದಿ-Makar Sankranti 2024: ಸಂಕ್ರಾಂತಿ ಹಬ್ಬದಂದು ಅದ್ಭುತ ಯೋಗಗಳ ನಿರ್ಮಾಣ ಈ 3 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ

 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

Auspicious Yogas 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ನವಪಂಚಮ, ಬುಧಾದಿತ್ಯ, ಆದಿತ್ಯ ಮಂಗಳ ಸೇರಿದಂತೆ ಹಲವು ರಾಜಯೋಗಗಳು ರೂಪುಗೊಳ್ಳುತ್ತಿವೆ. ಇದರಿಂದ ಹಲವು ರಾಶಿಗಳ ಜನರಿಗೆ ಬಂಪರ್ ಲಾಭ ಸಿಗಲಿದೆ. (Spiritual News In Kannada)  

2 /5

ಮೇಷ ರಾಶಿ: ಈ ನಾಲ್ಕೂ ರಾಜಯೋಗಗಳ ರಚನೆಯಿಂದ ಮೇಷ ರಾಶಿಯ ಜಾತಕದವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ದೇಘಾವಧಿಯಿಂದ ನಿಂತುಹೋದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ಕುಟುಂಬ ಸದಸ್ಯರು, ಬಂಧು ಮಿತ್ರರ ಜೊತೆಗೆ ಉತ್ತಮ ಕಾಲ ಕಳೆಯುವಿರಿ. ಸಣ್ಣಪುಟ್ಟ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ಕಾರ್ಯಕ್ಷೇತ್ರದಲ್ಲಿ ಅಪಾರ ಯಶಸ್ಸು ನಿಮ್ಮದಾಗಲಿದೆ. ವ್ಯಾಪಾರದಲ್ಲಿಯೂ ಕೂಡ ಉತ್ತಮ ಪ್ರದರ್ಶನ ಮುಂದುವರೆಯಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ವೈವಾಹಿಕ ಜೀವನ, ಲವ್ ಲೈಫ್ ಉತ್ತಮವಾಗಿ ಮುಂದುವರೆಯಲಿದೆ.   

3 /5

ಮಿಥುನ ರಾಶಿ: ಈ ನಾಲ್ಕೂ ರಾಜಯೋಗಗಳ ರಚನೆಯಿಂದ ನಿಮ್ಮ ವೃತ್ತಿ ಜೀವನದಲ್ಲಿ ನಿಮ್ಮ ಕೆಲಸಕ್ಕೆ ನಿಮಗೆ ತಕ್ಕ ಪ್ರತಿಫಲ ಸಿಗಲಿದೆ. ಹೊಸ ನೌಕರಿಯ ಹುಡುಕಾಟ ಪೂರ್ಣಗೊಳ್ಳಲಿದೆ. ಬಿಸ್ನೆಸ್ ಕುರಿತು ಹೇಳುವುದಾದರೆ, ಹಲವು ಮಹತ್ವದ ಒಪ್ಪಂದಗಳು ಕುದುರಲಿವೆ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ, ನಿಂತುಹೋದ ಕೆಲಸ ಕಾರ್ಯಗಳು ಪುನಃ ಆರಂಭಗೊಳ್ಳಲಿವೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗಲಿವೆ.  

4 /5

ಧನು ರಾಶಿ: ಧನು ರಾಶಿಯ ಪ್ರಥಮ ಭಾವದಲ್ಲಿ ಗ್ರಹಗಳ ಜಾತ್ರೆ ನೆರೆವೆರುತ್ತಿದೆ. ಇದರಿಂದ ಧನು ರಾಶಿಯ ಜಾತಕದವರಿಗೆ ಪ್ರತಿಯೊಂದು ಯೋಗಗಳ ಸಾಕಷ್ಟು ಲಾಭ ಸಿಗಲಿದೆ. ಆದಾಯದಲ್ಲಿ ಹೆಚ್ಚಳ ಸಂಭವಿಸಲಿದೆ. ನೌಕರಿಗೆ ಸಂಬಂಧಿಸಿದ ಸಮಸ್ಯೆಗಳು ಅಂತ್ಯವಾಗಲಿವೆ. ಇದಲ್ಲದೆ ಈ ಅವಧಿಯಲ್ಲಿ ನೀವು ಸ್ನೇಹಿತರು, ಕುಟುಂಬಸ್ಥರ ಜೊತೆಗೆ ಸುತ್ತಾಡುವ ಪ್ಲಾನ್ ಮಾಡಬಹುದು. ಲವ್ ಲೈಫ್ ಗೆ ಈ ಸಮಯ ಅತ್ಯುತ್ತಮವಾಗಿದೆ. ಲವ್ ಪಾರ್ಟ್ನರ್ ಜೊತೆಗೆ ಉತಮ ಕಾಲ ಕಳೆಯಲಿದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)