Auspicious Dreams: ಕನಸಿನಲ್ಲಿ ಈ ವಸ್ತುಗಳನ್ನು ಕಂಡರೆ ಖುಲಾಯಿಸಲಿದೆ ಅದೃಷ್ಟ

Auspicious Dreams: ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಕೆಲವು ವಸ್ತುಗಳನ್ನು ಕಾಣುವುದನ್ನು ತುಂಬಾ ಮಂಗಳಕರ ಎಂದು ಹೇಳಲಾಗುತ್ತದೆ. ಕನಸಿನಲ್ಲಿ ಕಾಣಿಸುವ ಈ ವಸ್ತುಗಳು ಶೀಘ್ರದಲ್ಲೇ ನಿಮ್ಮ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎಂಬುದನ್ನು ಸೂಚಿಸುತ್ತವೆ ಎಂದು ಹೇಳಲಾಗುತ್ತದೆ. 

Auspicious Dreams: ಪ್ರತಿಯೊಬ್ಬರಿಗೂ ಕೂಡ ಒಂದಲ್ಲಾ ಒಂದು ಸಮಯದಲ್ಲಿ ಕನಸುಗಳು ಬೀಳುವುದು ಸಹಜವೇ. ಸ್ವಪ್ನ ಶಾಸ್ತ್ರದ ಪ್ರಕಾರ, ಕನಸುಗಳು ಮುಂದಾಗಬಹುದಾದ ಘಟನೆಗಳ ಬಗ್ಗೆ ಸಂಕೇತಗಳನ್ನು ನೀಡುತ್ತವೆ. ಅಂತೆಯೇ, ಕನಸಿನಲ್ಲಿ ಕೆಲವು ವಸ್ತುಗಳನ್ನು ಕಂಡರೆ ತುಂಬಾ ಶುಭ ಎಂದು ಬಣ್ಣಿಸಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /7

ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಸ್ತ್ರೀ (ಹುಡುಗಿ, ಮಹಿಳೆ) ಅನ್ನು ಕಾಣುವುದು ತುಂಬಾ ಮಂಗಳಕರ. ಇದು ಶೀಘ್ರದಲ್ಲೇ ನಿಮ್ಮ ಮನೆಗೆ ಲಕ್ಷ್ಮಿ ಪ್ರವೇಶವಾಗಲಿದೆ ಎಂಬುದರ ಸಂಕೇತ.

2 /7

ಕನಸಿನಲ್ಲಿ ಬಿಳಿ ಆನೆ ಕಾಣಿಸಿಕೊಂಡರೆ ಅತಿ ಶೀಘ್ರದಲ್ಲಿ ನಿಮ್ಮ ಅದೃಷ್ಟದ ಬಾಗಿಲು ತೆರೆಯಲಿದೆ ಎಂದರ್ಥ.

3 /7

ಕನಸಿನಲ್ಲಿ ಹಣವನ್ನು ಲೆಕ್ಕಹಾಕುವುದು, ಯಾರಿಗಾದರೂ ಹಣವನ್ನು ನೀಡುವುದು ಅಥವಾ ಯಾರಿಂದಲಾದರೂ ಹಣವನ್ನು ಪಡೆಯುವುದನ್ನು ಕಂಡರೆ ಶೀಘ್ರದಲ್ಲೇ ನೀವು ಅಪಾರ ಸಂಪತ್ತಿನ ಒಡೆಯರಾಗುತ್ತೀರಿ ಎಂಬುದರ ಸಂಕೇತ.

4 /7

ಸಂಪತ್ತಿನ ಅಧಿದೇವತೆ ಲಕ್ಷ್ಮಿ ದೇವಿಯ ಪ್ರಿಯ ಪುಷ್ಪವಾದ ಕಮಲದ ಹೂವನ್ನು ಕನಸಿನಲ್ಲಿ ಕಂಡರೆ ತಾಯಿ ಲಕ್ಷ್ಮಿ ನಿಮ್ಮನ್ನು ಆಶೀರ್ವದಿಸಲಿದ್ದಾರೆ. ಹಠಾತ್ ಧನಲಾಭವಾಗಲಿದೆ ಎಂದರ್ಥ.

5 /7

ಧಾರ್ಮಿಕ ಸ್ಥಳವಾದ ದೇವಾಲಯವನ್ನು ಕನಸಿನಲ್ಲಿ ಕಂಡರೆ ಉದ್ಯೋಗ,  ವ್ಯವಹಾರದಲ್ಲಿ ಪ್ರಗತಿ ಉಂಟಾಗಲಿದೆ ಎಂದು ಹೇಳಲಾಗುತ್ತದೆ. 

6 /7

ಕನಸಿನಲ್ಲಿ ಚಿನ್ನ/ಬೆಳ್ಳಿಯ ಉಂಗುರವನ್ನು ಕಂಡರೆ ಶೀಘ್ರದಲ್ಲೇ ನೀವು ಸಂಗಾತಿಯನ್ನು ಪಡೆಯುವಿರಿ ಎಂದು ಹೇಳಲಾಗುತ್ತದೆ. ಮಾತ್ರವಲ್ಲ, ಭವಿಷ್ಯದಲ್ಲಿ ಒಳ್ಳೆಯದಾಗಲಿದೆ ಎಂದು ಬಣ್ಣಿಸಲಾಗುತ್ತದೆ. 

7 /7

ಕನಸಿನಲ್ಲಿ ಹರಿಯುವ ನೀರಿನಲ್ಲಿ ಈಜುವುದನ್ನು ಕಂಡರೆ ಮುಂದಿನ ದಿನಗಳಲ್ಲಿ ನಿಮ್ಮ ಬಾಳಿನಲ್ಲಿ ಶುಭ ಘಟನೆಗಳು ನಡೆಯಲಿವೆ ಎಂಬುದನ್ನೂ ಸೂಚಿಸುತ್ತದೆ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.