ಹುಬ್ಬಳ್ಳಿಯಲ್ಲಿ ಏಷ್ಯಾದಲ್ಲೇ ಮೊದಲ ತಾಲೂಕು ನ್ಯಾಯಾಲಯ ಸಂಕೀರ್ಣ: Photos

  

  • Aug 12, 2018, 12:54 PM IST
1 /7

ಏಷ್ಯಾದಲ್ಲೇ ಮೊದಲ ತಾಲೂಕು ನ್ಯಾಯಾಲಯಗಳ ಸಂಕೀರ್ಣ ಹುಬ್ಬಳ್ಳಿಯಲ್ಲಿ ನಿರ್ಮಾಣವಾಗಿದೆ. 5.14 ಎಕರೆ ಬೃಹತ್ ಪ್ರದೇಶದಲ್ಲಿ, 4525 ಚದರ ಮೀಟರ್‌ ವಿಸ್ತೀರ್ಣದಲ್ಲಿ 122 ಕೋಟಿ ರೂ. ವೆಚ್ಚದಲ್ಲಿ ಈ ಸಂಕೀರ್ಣ ನಿರ್ಮಿಸಲಾಗಿದೆ.

2 /7

ಅತ್ಯಾಧುನಿಕ ಸೌಕರ್ಯ ಮತ್ತು ವಿನೂತನ ಮಾದರಿಯ ಈ ಬೃಹತ್ ತಾಲೂಕು ನ್ಯಾಯಾಲಯಗಳ ಸಂಕೀರ್ಣ ಭಾರತದಲ್ಲಿ ಮಾತ್ರವಲ್ಲದೆ ಇಡೀ ಏಷ್ಯಾದಲ್ಲಿಯೇ ಮೊದಲನೆಯದು ಎನ್ನಲಾಗಿದೆ. 

3 /7

ಸಂಪೂರ್ಣ ಕೇಂದ್ರೀಕೃತ ಹವಾನಿಯಂತ್ರಿತ ವ್ಯವಸ್ಥೆ ಹೊಂದಿರುವ ಈ ಕಟ್ಟಡವನ್ನು ಹೈದರಾಬಾದ್‌'ನ ಕೆಎಂವಿ ಪ್ರೊಜೆಕ್ಟ್ ಸಂಸ್ಥೆ ನಿರ್ಮಿಸಿದೆ.

4 /7

ಭದ್ರತಾ ದೃಷ್ಟಿಯಿಂದ ನ್ಯಾಯಾಲಯದ ಸಂಕೀರ್ಣದ ಒಳ ಮತ್ತು ಹೊರ ಭಾಗದಲ್ಲಿ ಸಿಸಿಟಿವಿ, ಅಸೆಸ್‌ ಕಂಟ್ರೋಲ್‌ ಸಿಸ್ಟಮ್‌ ಅಳವಡಿಸಲಾಗಿದೆ. ನ್ಯಾಯಾಧೀಶರು ಅಗತ್ಯವಿರುವ ಪ್ರಕರಣಗಳ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆಯೂ ಇದೆ.  

5 /7

ಏಳು ಅಂತಸ್ತುಗಳ ಈ ನ್ಯಾಯಾಲಯ ಸಂಕೀರ್ಣದಲ್ಲಿ 20 ಕೋರ್ಟ್ ಹಾಲ್, ಸಭಾಂಗಣ, ಕಕ್ಷೀದಾರರಿಗೆ ಆಸನ ವ್ಯವಸ್ಥೆ, 140 ಶೌಚಾಲಯಗಳು, 8 ಲಿಫ್ಟ್'ಗಳು, ಸಾಕ್ಷೀದಾರರಿಗೆ ಕೊಠಡಿಗಳ ಸೌಕರ್ಯ ಇದೆ. 

6 /7

ಏಳು ಅಂತಸ್ತಿನ ಈ ಕಟ್ಟಡದಲ್ಲಿ ಕೌಟುಂಬಿಕ ನ್ಯಾಯಾಲಯ, 2 ಜಿಲ್ಲಾ ನ್ಯಾಯಾಲಯ, 2 ಕಾರ್ಮಿಕ ನ್ಯಾಯಾಲಯ (ಕೈಗಾರಿಕೆ ಮತ್ತು ಕಾರ್ಮಿಕ), 4 ಸಿವಿಲ್‌ ಜ್ಯೂನಿಯರ್‌ ವಿಭಾಗೀಯ ನ್ಯಾಯಾಲಯ‌, 2 ಜೆಎಂಎಫ್‌ಸಿ, ಮೂರು ಸಿನಿಯರ್‌ ಡಿವಿಜನ್‌ ನ್ಯಾಯಾಲ್ಯಗಳಿವೆ. ಅಲ್ಲದೆ, ಬಾರ್‌ ಅಸೋಸಿಯೇಶನ್‌, ಲೈಬ್ರರಿ, ಮಹಿಳಾ ವಕೀಲರಿಗೂ ಕೊಠಡಿಗಳನ್ನು ಕಲ್ಪಿಸಲಾಗಿದೆ. 

7 /7

ವಿದ್ಯುತ್ ಅಡಚಣೆಗೆ ಪರ್ಯಾಯವಾಗಿ ಜನರೇಟರ್ ಮತ್ತು ಯುಪಿಎಸ್ ವ್ಯವಸ್ಥೆ ಇರುವ ಈ ಕಟ್ಟಡದಲ್ಲಿ ತ್ಯಾಜ್ಯ ನೀರು ಸಂಸ್ಕರಣ ಘಟಕ, ಮಳೆ ನೀರು ಕೊಯ್ಲು ವ್ಯವಸ್ಥೆ ಕಲ್ಪಿಸಲಾಗಿದೆ. ಈ ಸಂಕೀರ್ಣದ ಮತ್ತೊಂದು ವಿಶೇಷತೆ ಎಂದರೆ ಇದು ಭೂಕಂಪದ ಮುನ್ಸೂಚನೆ ತಿಳಿಸುವ ಅತ್ಯಾಧುನಿಕ ವ್ಯವಸ್ಥೆ ಇದೆ.