ಕೇವಲ 15 ನಿಮಿಷದಲ್ಲಿ ಮದುವೆಗೆ ಪ್ಲಾನ್‌: ಇದು ಭಾರತೀಯ ಆಟಗಾರನ ಇಂಟರೆಸ್ಟಿಂಗ್‌ ಲವ್‌ಸ್ಟೋರಿ!

ಭಾರತದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಆಶಿಶ್ ನೆಹ್ರಾ ಬಗ್ಗೆ ಎಲ್ಲರಿಗೂ ಗೊತ್ತು, ಆದರೆ ಅವರ ಪ್ರೇಮಕಥೆಯ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಆಶಿಶ್ ನೆಹ್ರಾ ಕೇವಲ 15 ನಿಮಿಷದಲ್ಲಿ ಮದುವೆಯಾಗುವ ಪ್ಲಾನ್ ಮಾಡಿದ್ದರಂತೆ. ಇವರ ಈ ಇಂಟರೆಸ್ಟಿಂಗ್‌ ಲವ್‌ಸ್ಟೋರಿ ಬಗ್ಗೆ ಇಲ್ಲಿ ಮಾಹಿತಿ ನೀಡುತ್ತಿದ್ದೇವೆ. 
 

1 /5

ಆಶಿಶ್ ನೆಹ್ರಾ ಏಪ್ರಿಲ್ 2, 2009 ರಂದು ದೆಹಲಿಯಲ್ಲಿ ಕಲಾವಿದೆಯಾದ ಗುಜರಾತ್‌ನ ರುಷ್ಮಾ ನೆಹ್ರಾ ಅವರನ್ನು ವಿವಾಹವಾದರು. ರುಷ್ಮಾ 10 ಮೇ 1983 ರಂದು ಗುಜರಾತ್‌ನಲ್ಲಿ ಜನಿಸಿದ್ದಾರೆ. 

2 /5

2002ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ರುಷ್ಮಾ ಪಂದ್ಯ ವೀಕ್ಷಿಸಲು ಓವಲ್‌ಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಇವರಿಬ್ಬರಿಗೆ ಪರಿಚಯವಾಗಿದೆ. ಬಳಿಕ ಮಾತುಕತೆ ನಡೆದಿತ್ತು. ರಶ್ಮಾ ಆಶಿಶ್‌ನನ್ನು ಇಷ್ಟಪಟ್ಟಿದ್ದರಂತೆ. ಇಲ್ಲಿಂದ ಶುರುವಾಯಿತು ಇಬ್ಬರ ಪ್ರೇಮಕಥೆ.

3 /5

ಆಶಿಶ್ ನೆಹ್ರಾ ಮತ್ತು ರಶ್ಮಾ ನೆಹ್ರಾ 7 ವರ್ಷಗಳ ಕಾಲ ಪರಸ್ಪರ ರಹಸ್ಯವಾಗಿ ಡೇಟಿಂಗ್ ಮಾಡಿದ್ದರು. ಕೇವಲ 15 ನಿಮಿಷದಲ್ಲಿ ಮದುವೆ ಪ್ಲಾನ್ ಮಾಡಲಾಗಿದ್ದು, ವಾರದೊಳಗೆ ಮದುವೆ ನಡೆದಿದೆ ಎಂದು ಸಂದರ್ಶನವೊಂದರಲ್ಲಿ ಸ್ವತಃ ಆಶಿಶ್ ನೆಹ್ರಾ ಹೇಳಿದ್ದರು.

4 /5

ಆಶಿಶ್ ನೆಹ್ರಾ ರಶ್ಮಾ ಬಳಿ ಮದುವೆ ಬಗ್ಗೆ ಪ್ರಸ್ತಾಪಿಸಿದಾಗ, ಅವರು ಅದನ್ನು ತಮಾಷೆಯಾಗಿ ತೆಗೆದುಕೊಂಡಿದ್ದರು. ಯಾವುದೇ ಉತ್ತರವನ್ನು ಸಹ ನೀಡಿರಲಿಲ್ಲ. ಆದರೆ ಮರುದಿನ ನೆಹ್ರಾ ಮತ್ತೆ ಅದೇ ಪ್ರಶ್ನೆಯನ್ನು ಕೇಳಿದಾಗ, ಅದು ನಿಜವೆಂದು ಅವರು ಅರಿತುಕೊಂಡರು. ಆ ಬಳಿಕ ಮದುವೆಗೆ ಒಪ್ಪಿಗೆ ಸೂಚಿಸಿದ್ದರಂತೆ. 

5 /5

ಅವರ ಮದುವೆಯಾದ 2 ವರ್ಷಗಳ ನಂತರ ಭಾರತವು 2011 ರಲ್ಲಿ ವಿಶ್ವಕಪ್ ಚಾಂಪಿಯನ್ ಗೆದ್ದಿತು. ಆಗ ಆಶಿಶ್ ನೆಹ್ರಾ ಭಾರತ ತಂಡದ ಭಾಗವಾಗಿದ್ದರು. ಆಶಿಶ್ ನೆಹ್ರಾ ಮತ್ತು ರಶ್ಮಾ ನೆಹ್ರಾ ಅವರಿಗೆ 2 ಮಕ್ಕಳಿದ್ದಾರೆ. ಮಗಳ ಹೆಸರು ಅರಿಯಾನಾ ನೆಹ್ರಾ ಮತ್ತು ಮಗನ ಹೆಸರು ಅರುಶ್ ನೆಹ್ರಾ.