Ashika Ranganath: ‘ರೇಮೊ’ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ ನಟಿ ಆಶಿಕಾ ರಂಗನಾಥ್

ಸ್ಯಾಂಡಲ್‍ವುಡ್‍ ನಟಿ ಆಶಿಕಾ ರಂಗನಾಥ್ ಸದ್ಯ ‘ರೇಮೊ’ ಚಿತ್ರದ ಗುಂಗಿನಲ್ಲಿದ್ದಾರೆ. ಇದೇ ನವೆಂಬರ್ 25ಕ್ಕೆ ಅವರ ‘ರೇಮೊ’ ಸಿನಿಮಾ ಬಿಡುಗಡೆಯಾಗಲಿದೆ.  

ಬೆಂಗಳೂರು: ಸ್ಯಾಂಡಲ್‍ವುಡ್‍ನ ಚುಟು ಚುಟು ಹುಡುಗಿ ಖ್ಯಾತಿಯ ನಟಿ ಆಶಿಕಾ ರಂಗನಾಥ್ ಇದೀಗ ‘ರೇಮೊ’ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಪ್ರೀ ರಿಲೀಸ್ ಇವೆಂಟ್ ಅದ್ದೂರಿಯಾಗಿ ನೆರವೇರಿತು. ಟ್ರೈಲರ್ ಮೂಲಕ ಸದ್ದು ಮಾಡಿರುವ ‘ರೇಮೊ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಮತ್ತಷ್ಟು ಅಪ್‍ಡೇಟ್‍ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಸ್ಯಾಂಡಲ್‍ವುಡ್ ನಟಿ ಆಶಿಕಾ ರಂಗನಾಥ್ ಅವರು ತಮ್ಮ ‘ರೇಮೊ’ ಸಿನಿಮಾದ ಬಗ್ಗೆ ಬಿಗ್ ಅಪ್‍ಡೇಟ್‍ ನೀಡಿದ್ದಾರೆ. ತಮ್ಮ ಇನ್‍ಸ್ಟಾಗ್ರಾಮ್‍ ಸ್ಟೋರಿಯಲ್ಲಿ ಚಿತ್ರದ ಬಗ್ಗೆ ನಟಿ ಮಾಹಿತಿ ಹಂಚಿಕೊಂಡಿದ್ದಾರೆ.

2 /5

ಸ್ಯಾಂಡಲ್‍ವುಡ್‍ ಯುವ ನಟ ಇಶಾನ್ ಮತ್ತು ಕ್ಯೂಟ್ ಹುಡುಗಿ ಆಶಿಕಾ ರಂಗನಾಥ್ ನಟಿಸಿರುವ ‘ರೇಮೊ’ ಸಿನಿಮಾ ನವೆಂಬರ್ 25ರಂದು ಬಿಡುಗಡೆಯಾಗಲಿದೆ. ಇದೊಂದು ಬ್ಯೂಟಿಫುಲ್‌ ಮ್ಯೂಸಿಕಲ್ ಲವ್ ಸ್ಟೋರಿಯಾಗಿದೆ.

3 /5

ಈ ಚಿತ್ರದಲ್ಲಿ ನಟಿ ಆಶಿಕಾ ರಂಗನಾಥ್ ಖ್ಯಾತ ಸಿಂಗರ್ ಪಾತ್ರ ಮಾಡುತ್ತಿದ್ದಾರೆ. ‘ಗೂಗ್ಲಿ’ ಖ್ಯಾತಿಯ ಪವನ್ ಒಡೆಯರ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ.  

4 /5

ನಟಿ ಆಶಿಕಾ ರಂಗನಾಥ್ ಸದ್ಯ ಸ್ಯಾಂಡಲ್‍ವುಡ್‍ನ ಬೇಡಿಕೆಯ ನಟಿಯಾಗಿದ್ದಾರೆ. ದೊಡ್ಡ ಮಟ್ಟದ ಬೆಡಿಕೆ ಸೃಷ್ಟಿಸಿಕೊಂಡಿರುವ ಈ ನಟಿಯ ಕೈಯಲ್ಲಿ ಸದ್ಯ ಹಲವು ಆಫರ್​ಗಳಿವೆ. ಕಳೆದ ವರ್ಷ ಇವರ ನಟನೆಯ ‘ಮದಗಜ’ ಚಿತ್ರ ರಿಲೀಸ್ ಆಗಿತ್ತು.

5 /5

ಸಿ.ಆರ್. ಮನೋಹರ್ ಬಂಡವಾಳ ಹೂಡಿರುವ ಈ ಸಿನಿಮಾಗೆ ಸಿ.ಆರ್.ಗೋಪಿ ಸಹ ನಿರ್ಮಾಪಕರಾಗಿದ್ದಾರೆ. ಮ್ಯಾಜಿಕಲ್‌ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಿರುವ 6 ಅದ್ಭುತ ಹಾಡುಗಳು ಈ ಚಿತ್ರದಲ್ಲಿದೆ.