Do Not Remove Apple Peel: ನಿತ್ಯ ಒಂದು ಸೇಬು ತಿನ್ನುವುದರಿಂದ ವೈದ್ಯರ ಬಳಿ ಹೋಗುವ ಅವಶ್ಯಕತೆ ಬೀಳುವುದಿಲ್ಲ ಎಂದು ಸಾಮಾನ್ಯವಾಗಿ ಜನರು ಹೇಳುವುದನ್ನು ನೀವು ಕೇಳಿರಬಹುದು. ಏಕೆಂದರೆ, ಸೇಬು ತಿನ್ನುವುದರಿಂದ ಹಲವು ರೋಗಗಳ ಅಪಾಯಗಳು ದೂರಾಗುತ್ತವೆ.
Do Not Remove Apple Peel: ನಿತ್ಯ ಒಂದು ಸೇಬು ತಿನ್ನುವುದರಿಂದ ವೈದ್ಯರ ಬಳಿ ಹೋಗುವ ಅವಶ್ಯಕತೆ ಬೀಳುವುದಿಲ್ಲ ಎಂದು ಸಾಮಾನ್ಯವಾಗಿ ಜನರು ಹೇಳುವುದನ್ನು ನೀವು ಕೇಳಿರಬಹುದು. ಏಕೆಂದರೆ, ಸೇಬು ತಿನ್ನುವುದರಿಂದ ಹಲವು ರೋಗಗಳ ಅಪಾಯಗಳು ದೂರಾಗುತ್ತವೆ. ಆದರೆ, ಹಲವು ಜನರು ಈ ಅದ್ಭುತ ಹಣ್ಣನ್ನು ಸೇವಿಸುವ ಮೊದಲು ಅದರ ಸಿಪ್ಪೆ ಸುಲಿಯುತ್ತಾರೆ. ಏಕೆಂದರೆ ಸೇಬು ಹಣ್ಣಿನ ಸಿಪ್ಪೆಯಲ್ಲಿರುವ ಹಲವಾರು ಪ್ರಯೋಜನಗಳಿಂದ ನೀವು ವಂಚಿತರಾಗುವಿರಿ.
ಇದನ್ನೂ ಓದಿ-
(Disclaimer- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ತೂಕ ಇಳಿಕೆಗೆ ಕಾರಣವಾಗುವ ಹಣ್ಣುಗಳಲ್ಲಿ ಸೇಬುಹಣ್ಣು ಕೂಡ ಒಂದು. ಸೇಬು ಹಣ್ಣಿನ ಸಿಪ್ಪೆ ಯುರ್ಸೋಲಿಕ್ ಆಮ್ಲದ ಆಗರವಾಗಿದೆ. ಇದು ಹೊಟ್ಟೆ ಭಾಗದಲ್ಲಿರುವ ಫ್ಯಾಟ್ ಇಳಿಕೆಗೆ ಕಾರಣವಾಗುತ್ತದೆ ಮತ್ತು ಇದರಿಂದ ಬೇಗ ತೂಕ ಇಳಿಕೆಯಾಗುತ್ತದೆ.
ಉಸಿರಾಟದ ತೊಂದರೆ ಇರುವವರು ಸೇಬು ಹಣ್ಣನ್ನು ಸಿಪ್ಪೆ ಸಮೇತ ಸೇವಿಸಬೇಕು. ಏಕೆಂದರೆ, ಸೇಬು ಹಣ್ಣಿನ ಸಿಪ್ಪೆಯಲ್ಲಿ ಕ್ಯೋರ್ಸೆಟಿನ್ ಹೆಸರಿನ ತತ್ವ ಕಂಡುಬರುತ್ತದೆ. ಇದು ಉಸಿರಾಟದ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಿದೆ.
ವೈದ್ಯರೂ ಕೂಡ ಸೇಬನ್ನು ಸಿಪ್ಪೆ ಸಮೇತ ಸೇವಿಸಬೇಕು ಎಂದು ಸಲಹೆ ನೀಡುತ್ತಾರೆ. ಏಕೆಂದರೆ, ಒಂದು ಸಂಪೂರ್ಣ ಸೇಬಿನಲ್ಲಿ 8.6 ಮಿ.ಗ್ರಾಂ.ವಿಟಮಿನ್ ಸಿ ಹಾಗೂ 98 ಇಂಟರ್ನ್ಯಾಷನಲ್ ಯುನಿಟ್ ಗಳಷ್ಟು ವಿಟಮಿನ್ ಎ ಇರುತ್ತದೆ. ಸಿಪ್ಪೆ ತೆಗೆದುಹಾಕಿದರೆ ಅವುಗಳ ಪ್ರಮಾಣ 6.5 ಮಿ.ಗ್ರಾಂ ಹಾಗೂ 60 ಐ.ಯುಗೆ ಬಂದು ನಿಲ್ಲುತ್ತದೆ.
ಮಧ್ಯಮ ಗಾತ್ರದ ಸೇಬು ಸುಮಾರು 4.5 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ, ಆದರೆ ಈ ಸೇಬಿನ ಸಿಪ್ಪೆಯನ್ನು ತೆಗೆದಾಗ, ಈ ಹಣ್ಣಿನಲ್ಲಿರುವ ಫೈಬರ್ ಪ್ರಮಾಣವು ಕೇವಲ 2 ಗ್ರಾಂ ಮಾತ್ರ ಉಳಿಯುತ್ತದೆ. ಅಂದರೆ ಸೇಬಿನ ಸಿಪ್ಪೆಯಲ್ಲಿ ತಿರುಳಿಗಿಂತ ಹೆಚ್ಚು ನಾರಿನಂಶವಿದೆ, ಇದು ಆರೋಗ್ಯಕ್ಕೆ ಅತ್ಯಗತ್ಯವಾಗಿದೆ.
ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾನಿಲಯದ ಸಂಶೋಧನೆಯಲ್ಲಿ, ಸಿಪ್ಪೆಯೊಂದಿಗೆ ಸೇಬುಗಳನ್ನು ತಿನ್ನುವುದು ಹೊಟ್ಟೆ, ಯಕೃತ್ತು ಮತ್ತು ಸ್ತನ ಕ್ಯಾನ್ಸರ್ ಕೋಶಗಳನ್ನು ಉತ್ಪಾದಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಾಬೀತಾಗಿದೆ.