ಅಪ್ಪನಿಗೆ ಚಿಯರ್ ಮಾಡಲು ಅಹಮದಾಬಾದ್ ತಲುಪಿದ ವಮಿಕಾ ಕೊಹ್ಲಿ..!

ಅನುಷ್ಕಾ ಶರ್ಮಾ ತನ್ನ ಮಗಳು ವಮಿಕಾ ಅವರೊಂದಿಗೆ ಅಹಮದಾಬಾದ್ ತಲುಪಿದ್ದಾರೆ. ಇಂಗ್ಲೆಂಡ್ ಮತ್ತು ಟೀಮ್ ಇಂಡಿಯಾ ಪಂದ್ಯಗಳ ಸಂದರ್ಭದಲ್ಲಿ ಅನುಷ್ಕಾ ಶರ್ಮಾ ಮಗಳೊಂದಿಗೆ ಭಾರತ ತಂಡವನ್ನು ಹುರಿದುಂಬಿಸಲಿದ್ದಾರೆ. 
 

ನವದೆಹಲಿ: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯ ಮೂರನೇ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Statdium) ನಡೆಯುತ್ತಿದೆ.  ಈ ಮಧ್ಯೆ, ವಿರಾಟ್ ಕೊಹ್ಲಿ (Virat Kohli) ಅಭಿಮಾನಿಗಳಿಗೊಂದು ಸಂತಸದ ಸುದ್ದಿ ಬಂದಿದೆ. ಅದೇನೆಂದರೆ, ಅನುಷ್ಕಾ ಶರ್ಮಾ (Anushka Sharma) ತನ್ನ ಮಗಳು ವಮಿಕಾ (Vamika) ಅವರೊಂದಿಗೆ ಈಗಾಗಲೇ ಅಹಮದಾಬಾದ್ ತಲುಪಿದ್ದಾರೆ. ವಿರಾಟ್ ಕೊಹ್ಲಿಯನ್ನು ಚಿಯರ್ ಮಾಡುವ ಸಲುವಾಗಿಯೇ ಅನುಷ್ಕಾ ತನ್ನ ಪುಟ್ಟ ಕಂದಮ್ಮನೊಂದಿಗೆ ಅಹಮದಾಬಾದ್ ಗೆ ಆಗಮಿಸಿದ್ದಾರೆ ಎನ್ನಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

 ಮಗಳೊಂದಿಗೆ ಅಹಮದಾಬಾದ್ ಗೆ ಆಗಮಿಸಿದ ಅನುಷ್ಕಾ ಶರ್ಮಾ :  ಫೆಬ್ರವರಿ 24 ರಂದು ಟೀಮ್ ಇಂಡಿಯಾ (Team India) ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಿದೆ. ಅನುಷ್ಕಾ ಶರ್ಮಾ ತನ್ನ ಮಗಳು ವಮಿಕಾ ಅವರೊಂದಿಗೆ ಅಹಮದಾಬಾದ್ ತಲುಪಿದ್ದಾರೆ.  ಈ ಸುದ್ದಿಯನ್ನು viralbhayani ಬಹಿರಂಗಪಡಿಸಿದೆ.

2 /5

ಒಂದೂವರೆ ತಿಂಗಳ ಕಂದಮ್ಮ ವಮಿಕಾ :  ಜನವರಿ 11 ರಂದು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣು ಮಗು ಜನಿಸಿತು. ಈ ಪುಟ್ಟ ಕಂದಮ್ಮಗೆ  ವಮಿಕಾ ಎಂದು ನಾಮಕರಣ ಮಾಡಲಾಗಿದೆ. ವಮಿಕಾಗೆ ಈಗ ಒಂದೂವರೆ ತಿಂಗಳು ತುಂಬಿದ್ದು ಈಗಾಗಲೇ ತನ್ನ ಪ್ರಯಾಣವನ್ನು ಕೂಡಾ ಆರಂಭಿಸಿದ್ದಾರೆ.   

3 /5

ವಮಿಕಾಳನ್ನು ನೊಡಲು ಕಾತರರಾಗಿರುವ ಅಭಿಮಾನಿಗಳು :  ವಿರಾಟ್ ಮತ್ತು ಅನುಷ್ಕಾ ತಮ್ಮ ಮಗಳೊಂದಿಗಿನ ಫೋಟೋವನ್ನು ಈಗಾಗಲೇ  ಹಂಚಿಕೊಂಡಿದ್ದಾರೆ, ಆದರೆ ಆ ಚಿತ್ರದಲ್ಲಿ ವಮಿಕಾ ಮುಖ ಸರಿಯಾಗಿ ಕಾಣುತ್ತಿಲ್ಲ. ಹಾಗಾಗಿ ಈಗ ವಮಿಕಾ ಅಹಮದಾಬಾದ್ ಗೆ ಆಗಮಿಸಿರುವ ಸುದ್ದಿ ಅಭಿಮಾನಿಗಳಿಗೆ ಭಾರೀ ಸಂತಸ ತಂದಿದೆ. 

4 /5

ಟೀಂ ಇಂಡಿಯಾವನ್ನು ಹುರಿದುಂಬಿಸಲಿರುವ ಅನುಷ್ಕಾ: ಇಂಗ್ಲೆಂಡ್ ಮತ್ತು ಟೀಮ್ ಇಂಡಿಯಾ ಪಂದ್ಯಗಳ ಸಂದರ್ಭದಲ್ಲಿ ಅನುಷ್ಕಾ ಶರ್ಮಾ ಮಗಳೊಂದಿಗೆ ಭಾರತ ತಂಡವನ್ನು ಹುರಿದುಂಬಿಸಲಿದ್ದಾರೆ. ಈ ಕ್ಷಣಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.  

5 /5

ಕೊನೆಯಾಗಲಿದೆ ಅಭಿಮಾನಿಗಳ ನಿರೀಕ್ಷೆ :  ಪಂದ್ಯದ ಮೊದಲ ದಿನವೇ  ಅನುಷ್ಕಾ ಅಹಮದಾಬಾದ್ ಗೆ ಆಗಮಿಸಿದ್ದರು. ಆದರೆ ಮೊದಲ ದಿನ ಪಂದ್ಯ ವೀಕ್ಷಣೆಗೆ ಆಗಮಿಸಿರಲಿಲ್ಲ. ಆದರೆ ಮುಂದಿನ ಪಂದ್ಯಗಳನ್ನು ವೀಕ್ಷಸಿಲು ಖಂಡಿತವಾಗಿಯೂ ಅನುಷ್ಕಾ ಆಗಮಿಸಲಿದ್ದಾರೆ ಎನ್ನಲಾಗಿದೆ.