ʼಪುಷ್ಪಾ ನಟಿʼ ಅನಸೂಯ ಮುಖಕ್ಕೆ ಗಂಭೀರ ಗಾಯ..! ನಿರೂಪಕಿ ಮೇಲೆ ನಡೀತಾ ಮಾರಣಾಂತಿಕ ಹಲ್ಲೆ

Anasuya Bharadwaj injury : ಅಲ್ಲು ಅರ್ಜುನ್‌ ನಟನೆಯ ಪುಷ್ಪಾ ಸಿನಿಮಾದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿದ್ದ ನಟಿ, ನಿರೂಪಕಿ ಅನಸೂಯಾ ಮುಖಕ್ಕೆ ಗಂಭೀರ ಗಾಯಗಳಾಗಿವೆ.. ಈ ಕುರಿತು ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ನಟಿ ಹಂಚಿಕೊಂಡಿದ್ದು, ಅವುಗಳನ್ನ ಕಂಡ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.. ಅಷ್ಟಕ್ಕೂ ನಟಿಗೆ ಏನಾಯ್ತು..? ಹೊಡೆದವರು ಯಾರು..? ಬನ್ನಿ ನೋಡೋಣ..

1 /6

ಆಂಕರ್ ಅನಸೂಯಾ ಗಂಭೀರ ಗಾಯಗೊಂಡಿದ್ದು ಈ ಕುರಿತ ಫೋಟೋಸ್‌ ಎಲ್ಲಡೆ ವೈರಲ್‌ ಆಗುತ್ತಿವೆ.. ನಟ ಅವರ ಮುಖದ ಮೇಲೆ ತೀವ್ರ ಗಾಯಗಳಾಗಿವೆ. ಈ ಚಿತ್ರಗಳನ್ನು ನೋಡಿದ ಎಲ್ಲರೂ ಬೆಚ್ಚಿಬಿದ್ದಿದ್ದು  ಏನಾಯಿತು..? ಅಂತ ಪ್ರಶ್ನೆ ಮಾಡುತ್ತಿದ್ದಾರೆ.. ಈ ಕುರಿತ ಸಂಪೂರ್ಣ ಸುದ್ದಿ ಇಲ್ಲಿದೆ..   

2 /6

ಅನಸೂಯಾ ಅಭಿನಯದ ಇತ್ತೀಚಿನ ಚಿತ್ರ ಸಿಂಬಾ. ಈ ಸಿನಿಮಾದ ಶೂಟಿಂಗ್ ಟೈಮ್ ಸ್ಟಿಲ್ಸ್ ಇವು. ಇವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಅನಸೂಯಾ ತಮ್ಮ ಸಿನಿಮಾವನ್ನು ವಿನೂತನವಾಗಿ ಪ್ರಚಾರ ಮಾಡುತ್ತಿದ್ದಾರೆ. ಈ ಚಿತ್ರ ಇಂದು (ಆಗಸ್ಟ್ 9) ಬಿಡುಗಡೆಯಾಗಿದೆ.  

3 /6

ಸಂಪತ್ ನಂದಿ ಕಥೆಗೆ ಮುರಳಿ ಮನೋಹರ್ ನಿರ್ದೇಶನ ಮಾಡಿದ್ದಾರೆ. ಅನಸೂಯ, ಜಗಪತಿ ಬಾಬು, ಕಸ್ತೂರಿ, ದೇವಿ, ಶ್ರೀನಾಥ್ ಮತ್ತು ಕಬೀರ್ ಸಿಂಗ್ ಸೇರಿದಂತೆ ಹಲವಾರು ಸ್ಟಾರ್‌ ನಟ ನಟಿಯರು ಸಿನಿಮಾದಲ್ಲಿದ್ದಾರೆ. ಈ ಚಿತ್ರವನ್ನು ಸಂಪತ್ ನಂದಿ ಮತ್ತು ರಾಜೇಂದರ್ ಜಂಟಿಯಾಗಿ ನಿರ್ಮಿಸಿದ್ದಾರೆ.  

4 /6

ಕಿರುತೆರೆಯಲ್ಲಿ ತಮ್ಮ ನಿರೂಪಣಟ ಮಾತಿನ ಶೈಲಿಯಿಂದ ಜನ ಮನಗೆದ್ದಿದ್ದ ಚೆಲುವೆ ಇದೀಗ ಬಿಗ್‌ ಸ್ಕ್ರೀನ್‌ ಮೇಲೆ ಮಿಂಚುತ್ತಿದ್ದಾರೆ. ಸ್ಟಾರ್‌ಗಳ ಜೊತೆ ನಟಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಇದರೊಂದಿಗೆ ತೆಲುಗು ಚಿತ್ರರಂಗದಲ್ಲಿ ಅನಸೂಯ ಟ್ರೆಂಡ್ ಓಡುತ್ತಿದೆ.    

5 /6

ಸದ್ಯ ಅನಸೂಯಾ ಕೈಯಲ್ಲಿ ಹಲವು ಸಿನಿಮಾಗಳಿವೆ. ಪುಷ್ಪ-2 ಚಿತ್ರದಲ್ಲಿ ಅಲ್ಲು ಅರ್ಜುನ್ ಎದಿರು ನಟಿಸುತ್ತಿದ್ದಾರೆ. ಇದಲ್ಲದೇ ಹಲವು ಲೇಡಿ ಓರಿಯೆಂಟೆಡ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಜಬರ್ದಸ್ತ್ ಸುಂದರಿಯ ಕಾಲ್ ಶೀಟ್ ಗಾಗಿ ನಿರ್ದೇಶಕರು ಸಾಲುಗಟ್ಟಿ ನಿಂತಿದ್ದಾರೆ.  

6 /6

ಒಂದೆಡೆ ಬೆಳ್ಳಿತೆರೆಯಲ್ಲಿ ಸದ್ದು ಮಾಡುತ್ತಾ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೂಟ್‌ ಮೂಲಕ ಟ್ರೆಂಡ್‌ ಕ್ರಿಯೇಟ್‌ ಮಾಡುತ್ತಿದ್ದಾರೆ. ಮಾಡರ್ನ್ ಹಾಗೂ ಸೀರೆಯ ಫೋಟೋಗಳನ್ನು ಶೇರ್ ಮಾಡುವ ಮೂಲಕ ಪಡ್ಡೆ ಹುಡುಗರ ಮನಗೆಲ್ಲುವ ಕೆಲಸ ಮಾಡುತ್ತಿದ್ದಾರೆ..