43ರ ವಯಸ್ಸಲ್ಲೂ ಸ್ವೀಟ್‌ 16 ಸೌಂದರ್ಯ..! ಅದೇಷ್ಟು ಹುಡ್ಗಿರು ಈಕೆಯನ್ನ ನೋಡಿ ಹೊಟ್ಟೆ ಉರ್ಕೋತಾರೊ..

Anasuya Bharadwaj : ಬೆಳ್ಳಿತೆರೆಯಲ್ಲಿ ಸದ್ದು ಮಾಡುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾಳೆ ಪುಷ್ಪಾ ಬ್ಯೂಟಿ ನಟಿ ಅನಸೂಯಾ. ಮಾಡರ್ನ್‌ ಲುಕ್‌ ಸೈ.. ಸಾರಿ ಲುಕ್‌ ಗೂ ಸೈ.. ಈ ಸುಂದರಿ.. ಸಧ್ಯ ನಟಿ ಹಂಚಿಕೊಂಡಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.. 
 

1 /7

ನಿರೂಪಣೆ ಮೂಲಕ ತೆಲುಗು ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದ ಸ್ಥಾನ ಪಡೆದವರು ಆಂಕರ್ ಅನಸೂಯಾ. ಟಿವಿ ಆಂಕರ್‌ ಆಗಿ ವೃತ್ತಿಜೀವನ ಪ್ರಾರಂಭಿಸಿದ ಈ ಚೆಲುವೆ, ಸಧ್ಯ ಬಿಗ್‌ ಸ್ಕ್ರೀನ್‌ ಮೇಲೆ ಮಿಂಚುತ್ತಿದ್ದಾರೆ.. ಪುಷ್ಪಾ ಸಿನಿಮಾದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾರೆ..  

2 /7

ಬೆಳ್ಳಿತೆರೆಯಲ್ಲಿ ಸದ್ದು ಮಾಡುತ್ತಿರುವ ಅನಸೂಯಾ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಕ್ರೇಜ್‌ ಹೊಂದಿದ್ದಾರೆ. ಆಗಾಗ ಮಾಡರ್ನ್ ಮತ್ತು ಸಾರಿ ಫೋಟೋಶೂಟ್‌ಗಳನ್ನು ಮಾಡಿಸಿಕೊಳ್ಳುವ ಚೆಲುವೆ, ಸೋಷಿಯಲ್‌ ಮೀಡಿಯಾದಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು, ಸಖತ್‌ ವೈರಲ್ ಆಗುತ್ತಿವೆ.  

3 /7

ಅನಸೂಯಾ ಸೀರೆಯಲ್ಲಿ ಹೆಚ್ಚು ಆಕರ್ಷಕವಾಗಿ ಕಾಣುತ್ತಾರೆ. ನಟಿಯ ಅಂದವನ್ನು ನೋಡಿದ ನೆಟ್ಟಿಗರು, ಸಖತ್ತಾಗಿ ಕಾಣುತ್ತಿದ್ದೀರಾ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.. ಅಲ್ಲದೆ, ಹಾರ್ಟ್‌ ಮತ್ತು ಪೈರ್‌ ಇಮೋಜಿ ಹಂಚಿಕೊಳ್ಳುತ್ತಿದ್ದಾರೆ..   

4 /7

ಅನಸೂಯಾ 18 ವರ್ಷದವನಿದ್ದಾಗ ಎನ್‌ಟಿಆರ್‌ನ ನಾಗ ಸಿನಿಮಾದ ಸಮಯದಲ್ಲಿ ತೆರೆಮೇಲೆ ಕಾಣಿಸಿಕೊಂಡು ಕೆಲವು ವರ್ಷಗಳ ಕಾಲ ಸುದ್ದಿ ವಾಚಕಿಯಾಗಿ ಕಾರ್ಯನಿರ್ವಹಿಸಿದ್ದರು.. ನಂತರ ಜಬರ್ದಸ್ತ್‌ನ ಆ್ಯಂಕರ್ ಆಗಿ ಎಲ್ಲರಿಗೂ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾದರು.  

5 /7

ಆಂಕರ್ ಅನಸೂಯಾ ಜಬರ್ದಸ್ತ್ ನಿರೂಪಕಿಯಾಗಿ ಜನಪ್ರಿಯತೆ ಗಳಿಸಿದ್ದಾರೆ. ಈ ಶೋ ಮೂಲಕ ಫುಲ್ ಪಾಪ್ಯುಲರ್ ಆದರು. ಅನಸೂಯಾ ನಿಧಾನವಾಗಿ ಬೆಳ್ಳಿತೆರೆಯತ್ತ ಪಯಣ ಆರಂಭಿಸಿ ಟಿವಿ ಶೋಗಳಿಗೆ ವಿದಾಯ ಹೇಳಿದರು.  

6 /7

ಸದ್ಯ ಅನಸೂಯಾ ಕೈಯಲ್ಲಿ ಹಲವು ಸಿನಿಮಾಗಳಿವೆ. ಪುಷ್ಪ-2 ಚಿತ್ರದಲ್ಲಿ ಅಲ್ಲು ಅರ್ಜುನ್ ಎದಿರು ನಟಿಸುತ್ತಿದ್ದಾರೆ.. ಇದಲ್ಲದೇ ಅನಸೂಯಾ ಹಲವು ಲೇಡಿ ಓರಿಯೆಂಟೆಡ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಜಬರ್ದಸ್ತ್ ಭಾಮಾ ಕಾಲ್ ಶೀಟ್ ಗಾಗಿ ನಿರ್ದೇಶಕರು ಸಾಲುಗಟ್ಟಿ ನಿಂತಿದ್ದಾರೆ.  

7 /7

ಇತ್ತೀಚೆಗೆ ಅವರು ಪೆಡಕಾಪು 1 ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಒಳ್ಳೆ ನಿರೀಕ್ಷೆಗಳನ್ನು ಹೊತ್ತು ಬಂದ ಈ ಸಿನಿಮಾ ಎಲ್ಲೂ ಇಂಪ್ರೆಸ್ ಮಾಡುವಲ್ಲಿ ವಿಫಲವಾಯಿತು.