EPF ಖಾತೆಯ ಎಲ್ಲಾ ಮಾಹಿತಿ Whatsappನಲ್ಲಿ ಲಭ್ಯ, ಇಲ್ಲಿದೆ ಸಹಾಯವಾಣಿ ನಂಬರ್

      

  • Nov 02, 2020, 18:11 PM IST

ನೀವು ಇಪಿಎಫ್ ಖಾತೆಯ ಬಗ್ಗೆ ದೂರು ನೀಡಬೇಕಾದರೆ ಇನ್ನು ಮುಂದೆ ಅದು ಸುಲಭವಾಗಿದೆ. ಇಪಿಎಫ್ ಸದಸ್ಯರಿಗೆ ದೂರುಗಳನ್ನು ತ್ವರಿತವಾಗಿ ಪರಿಹರಿಸಲು ಇಪಿಎಫ್‌ಒ ವಾಟ್ಸಾಪ್ ಸಹಾಯವಾಣಿ ಸೇವೆಯನ್ನು (epfo whatsapp helpline service) ಪ್ರಾರಂಭಿಸಿದೆ.

1 /5

ನವದೆಹಲಿ : ನೀವು ಇಪಿಎಫ್ ಖಾತೆಯ ಬಗ್ಗೆ ದೂರು ನೀಡಬೇಕಾದರೆ ಇನ್ನು ಮುಂದೆ ಅದು ಸುಲಭವಾಗಿದೆ. ಇಪಿಎಫ್ ಸದಸ್ಯರಿಗೆ ದೂರುಗಳನ್ನು ತ್ವರಿತವಾಗಿ ಪರಿಹರಿಸಲು ಇಪಿಎಫ್‌ಒ ವಾಟ್ಸಾಪ್ ಸಹಾಯವಾಣಿ ಸೇವೆಯನ್ನು (epfo whatsapp helpline service) ಪ್ರಾರಂಭಿಸಿದೆ. ಕಾರ್ಮಿಕ ಸಚಿವಾಲಯದ ಪ್ರಕಾರ ಇಪಿಎಫ್‌ಒ ದೂರುಗಳನ್ನು ಪರಿಹರಿಸಲು ಈ ಸೌಲಭ್ಯ ಆರಂಭಿಸಲಾಗಿದೆ. ಇಪಿಎಫ್‌ಒನ ಇತರ ಮೂಲಗಳಲ್ಲಿ ಇಪಿಎಫ್‌ಐಜಿಎಂಎಸ್ ಪೋರ್ಟಲ್ (ಇಪಿಎಫ್‌ಒನ ಆನ್‌ಲೈನ್ ದೂರು ಪರಿಹಾರ ಪೋರ್ಟಲ್), CPGRAMS, ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ (ಫೇಸ್‌ಬುಕ್ ಮತ್ತು ಟ್ವಿಟರ್) ಮತ್ತು 24 ಗಂಟೆಗಳ ಕಾಲ್ ಸೆಂಟರ್ ಸೇರಿವೆ ಎಂದು ಎಕನಾಮಿಕ್ ಟೈಮ್ಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

2 /5

ಸಚಿವಾಲಯದ ಪ್ರಕಾರ ಇಪಿಎಫ್‌ಒ ತನ್ನ ಸದಸ್ಯರ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಲು ವಾಟ್ಸಾಪ್ ಆಧಾರಿತ ಸಹಾಯವಾಣಿ-ಕಮ್-ದೂರು ಸೇವೆಯನ್ನು ಪ್ರಾರಂಭಿಸಿದೆ. ಈ ಕ್ರಮವು ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ಇಪಿಎಫ್ಒ ಸದಸ್ಯರಿಗೆ ಸುಲಭವಾಗಿ ಸೇವೆಗಳನ್ನು ತಲುಪಿಸುವ ಗುರಿಯನ್ನು ಹೊಂದಿದೆ.

3 /5

ಈ ಉಪಕ್ರಮವು ಪಿಎಫ್ ಷೇರುದಾರರಿಗೆ ವೈಯಕ್ತಿಕ ಮಟ್ಟದಲ್ಲಿ ಇಪಿಎಫ್‌ಒನ ಪ್ರಾದೇಶಿಕ ಕಚೇರಿಗಳೊಂದಿಗೆ ನೇರವಾಗಿ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. ಈಗ ಇಪಿಎಫ್‌ಒದ ಎಲ್ಲಾ 138 ಪ್ರಾದೇಶಿಕ ಕಚೇರಿಗಳಲ್ಲಿ ವಾಟ್ಸಾಪ್ ಸಹಾಯವಾಣಿ ಸೇವೆಗಳನ್ನು ಪ್ರಾರಂಭಿಸಲಾಗಿದೆ. ಸದಸ್ಯರು ಇದರಲ್ಲಿ ಇಪಿಎಫ್‌ಒಗೆ ಸೇವೆಗಳಿಗೆ ಸಂಬಂಧಿಸಿದಂತೆ  ಪ್ರಾದೇಶಿಕ ಕಚೇರಿಯ ಸಹಾಯವಾಣಿ ಸಂಖ್ಯೆಯಲ್ಲಿ ವಾಟ್ಸಾಪ್ ಸಂದೇಶದ ಮೂಲಕ ಯಾವುದೇ ರೀತಿಯ ದೂರನ್ನು ನೋಂದಾಯಿಸಬಹುದು, 

4 /5

ಇಪಿಎಫ್‌ಒನ ಪ್ರಾದೇಶಿಕ ಕಚೇರಿಗಳ ವಾಟ್ಸಾಪ್ ಸಹಾಯವಾಣಿ ಸಂಖ್ಯೆಗಳು ಇಪಿಎಫ್‌ಒ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಈ ಇಪಿಎಫ್‌ಒ ಸಹಾಯವಾಣಿಯ ಉದ್ದೇಶವು ಡಿಜಿಟಲ್ ಉಪಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ಮಧ್ಯವರ್ತಿಗಳ ಮೇಲಿನ ಅವಲಂಬನೆಯನ್ನು ತೆಗೆದುಹಾಕುವುದು. ಜೊತೆಗೆ  ದೂರುಗಳ ತ್ವರಿತ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಮತ್ತು ವಾಟ್ಸಾಪ್‌ನಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಲು, ಪ್ರತಿ ಪ್ರಾದೇಶಿಕ ಕಚೇರಿಯಲ್ಲಿ ತಜ್ಞರ ಪ್ರತ್ಯೇಕ ತಂಡವನ್ನು ರಚಿಸಲಾಗಿದೆ.

5 /5

ಈ ಸಹಾಯವಾಣಿಯ ಪರಿಚಯದೊಂದಿಗೆ ಇದು ಬಹಳ ಜನಪ್ರಿಯವಾಗಿದೆ. ಇಲ್ಲಿಯವರೆಗೆ, ವಾಟ್ಸಾಪ್ನಿಂದ 1,64,040 ಕ್ಕೂ ಹೆಚ್ಚು ದೂರುಗಳು ಮತ್ತು ಪ್ರಶ್ನೆಗಳನ್ನು ಇಪಿಎಫ್ಒ ಪರಿಹರಿಸಿದೆ. ವಾಟ್ಸಾಪ್ ಸಹಾಯವಾಣಿ ಸಂಖ್ಯೆ ಬಿಡುಗಡೆಯಾದ ನಂತರ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್ / ಟ್ವಿಟರ್‌ನಲ್ಲಿ ದೂರುಗಳು / ಪ್ರಶ್ನೆಗಳಲ್ಲಿ ಶೇಕಡಾ 30 ರಷ್ಟು ಕಡಿತ ಮತ್ತು ಇಪಿಎಫ್‌ಐಜಿಎಂಎಸ್ ಪೋರ್ಟಲ್‌ನಲ್ಲಿ (ಇಪಿಎಫ್‌ಒನ ಆನ್‌ಲೈನ್ ದೂರು ಪರಿಹಾರ ಪೋರ್ಟಲ್) 16 ಪ್ರತಿಶತದಷ್ಟು ಕಡಿತ ಕಂಡುಬಂದಿದೆ ಎಂದು ಹೇಳಲಾಗಿದೆ.